ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಮನೆ ಮೇಲೆ ದಾಳಿ ಮಾಡಿದಾಗ 70 ನೀಲಿ ಚಿತ್ರಗಳು ಸಿಕ್ಕವೂ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ರಾಜ್ ಕುಂದ್ರಾ ಮಾಜಿ ಆಪ್ತ ಸಹಾಯಕ ಉಮೇಶ್​​ ಕಾಮತ್​​​ ಇತರೆ ಪ್ರೊಡಕ್ಷನ್​​​ ಹೌಸ್​​ನೊಂದಿಗೆ ಸೇರಿಕೊಂಡು ಈ 70 ನೀಲಿ ಚಿತ್ರಗಳನ್ನು ಮಾಡಿದ್ದರು ಎನ್ನಲಾಗಿದೆ.

ನೀಲಿ ಚಿತ್ರಗಳ ತಯಾರಿಕೆಯಿಂದ ಇದುವರೆಗೆ ಸುಮಾರು 7.5ಕೋಟಿ ರೂಪಾಯಿಗಳಿಗೂ ಅಧಿಕ ಹಣ ತನ್ನ ವಿವಿಧ ಖಾತೆಗಳಿಗೆ ಜಮಾವಣೆಯಾಗಿದೆ. ಈತ ಇದರಿಂದ ಪ್ರತಿದಿನ ಲಕ್ಷಗಟ್ಟಲೆ ಆದಾಯ ಸಂಪಾದಿಸುತ್ತಿದ್ದ. ಸುಮಾರು 6-8 ಕೋಟಿ ರೂಪಾಯಿಗಳು ದಿನನಿತ್ಯ ಆದಾಯ ಬರುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜ್​ ಕುಂದ್ರಾ ವಿವಿಧ ಬ್ಯಾಂಕ್​​ ಖಾತೆಗಳಿಗೆ ಸಾವಿರಾರು ಬಾರಿ ಲಕ್ಷಾಂತರ ರೂಪಾಯಿ ಹಣ ಸಂದಾಯವಾಗಿದೆ ಎಂದು ಪೊಲೀಸರ ಬಳಿ ಇರುವ ದಾಖಲೆಗಳು ಹೇಳುತ್ತಿವೆ. ಇಷ್ಟು ಹಣವೂ ಅಪರಾಧ ಪ್ರಕರಣದಿಂದಲೇ ಸಂಪಾದಿಸಿದ್ದು ಎಂದು ಪರಿಶೀಲಿಸಿ ಪೊಲೀಸರು ಒಂದು ನಿರ್ಧಾರಕ್ಕೆ ಬರಬೇಕಿದೆ.

ಇನ್ನು, ನೀಲಿಚಿತ್ರಗಳನ್ನು ಅಪ್ಲೋಡ್​ ಮಾಡುತ್ತಿದ್ದ ಹಾಟ್​ಶಾಟ್​​ ಆ್ಯಪ್​​ ಅನ್ನು ಉಚಿತವಾಗಿ ಡೌನ್​​ಲೋಡ್​ ಮಾಡಿಕೊಳ್ಳಬಹುದಿತ್ತು. ಇತ್ತೀಚೆಗಷ್ಟೇ ಹಾಟ್​ಶಾಟ್​ ಅನ್ನು ಪ್ಲೇಸ್ಟೋರ್ ಮತ್ತು ಆಪಲ್ ಸ್ಟೋರ್​ಗಳು ನೀಲಿಚಿತ್ರಗಳಿದ್ದ ಕಾರಣ ನಿಷೇಧಿಸಿದ್ದವು.
ಸದ್ಯ ಪೊಲೀಸರು ಸಂಗ್ರಹಿಸಿರುವ ಸಾಕ್ಷ್ಯಗಳಲ್ಲಿ ಹಾಟ್​ಶಾಟ್​ನ ಚಿತ್ರಗಳು, ವಿಡಿಯೊಗಳು, ವಾಟ್ಸ್​ಆಪ್ ಚಾಟ್​ಗಳು ಇವೆ. ಇವು ರಾಜ್​ ಕುಂದ್ರಾ ಮೇಲಿನ ಆರೋಪಗಳನ್ನು ಸ್ಪಷ್ಟೀಕರಿಸುತ್ತಿವೆ.

The post ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​​ ಕುಂದ್ರಾ ಮನೆಯಲ್ಲಿ 70 ಪಾರ್ನ್ ಫಿಲ್ಮ್ಸ್ ಪತ್ತೆ.. ಏನ್ಮಡಿದ್ರು ಪೊಲೀಸರು? appeared first on News First Kannada.

Source: newsfirstlive.com

Source link