ನಟಿ ಸಮಂತಾ ಹಾಲಿವುಡ್​ ಸಿನಿಮಾಗೆ ಫ್ಯಾನ್ಸ್ ಫುಲ್​​ ಗರಂ: ಕಾರಣವೇನು?


ನಾಗಚೈತನ್ಯ ಜೊತೆ ಡಿವೋರ್ಸ್ ಆದ ನಂತರ ಸಮಂತ ಸಿನಿಮಾಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಸಮಂತ ತಮ್ಮ ಪಾಡಿಗೆ ತಾವು ಇದ್ದರೂ ವಿವಾದಗಳೂ ಅವರನ್ನು ಹುಡುಕಿಕೊಂಡು ಬರುತ್ತಲೇ ಇರುತ್ತವೆ. ಸದ್ಯ ಸಮಂತಾ ಅವರ ಅವರ ಬಳಿ ಹೊಸದೊಂದು ಸಮಸ್ಯೆ ಬಂದು ಕೂತಿದೆ.

ನೆನ್ನೆತಾನೆ ಸಮಂತ ಹಾಲಿವುಡ್ನಲ್ಲಿ ಆ್ಯಕ್ಟ್ ಮಾಡೋ ಅವಕಾಶವನ್ನು ಪಡೆದಿದ್ದಾರೆ ಎಂದು ನಾವು ನಿಮಗೆ ಹೇಳಿದ್ದೆವು. ಈ ವಿಚಾರವನ್ನು ಕೇಳಿದ ಸಮಂತ ಅಭಿಮಾನಿಗಳು ಕೂಡ ಸಖತ್ ಥ್ರಿಲ್ ಆಗಿದ್ದರು. ಅದರೆ ಈಗ ತಮಿಳು ಪ್ರೇಕ್ಷಕರು ಸಮಂತ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕಾದಂಬರಿ ಆಧಾರಿತ ”ದಿ ಅರೇಂಜ್‌ಮೆಂಟ್ಸ್ ಆಫ್ ಲವ್” ಅನ್ನೋ ಹಾಲಿವುಡ್ ಸಿನಿಮಾದಲ್ಲಿ ಸಮಂತ ನಟಿಸುತ್ತಿದ್ದು, ಸಮಂತ ಈ ಸಿನಿಮಾದಲ್ಲಿ ದ್ವಿಲಿಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದು ಸಿನಿಮಾದ ಒಂದು ಭಾಗ ಆದರೆ, ದ್ವಿಲಿಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಂತ ತಮಿಳು ಮೂಲದ ಮಹಿಳೆಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ರೀತಿ ಪಾತ್ರವನ್ನು ಮಾಡುವುದರಿಂದ ತಮಿಳು ಸಂಸ್ಕೃತಿ ಮತ್ತು ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂಬುದು ತಮಿಳು ಸಮಂತ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

News First Live Kannada


Leave a Reply

Your email address will not be published. Required fields are marked *