ಬೆಂಗಳೂರು: ನಗರದಲ್ಲಿ ಕ್ರೈಂ ರೇಟ್ ಮತ್ತೆ ಹೆಚ್ತಿರೋ ಹಿನ್ನೆಲೆ ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು 45 ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆಗಳ ಮೇಲೆ ರೇಡ್ ಮಾಡಿದ್ದಾರೆ.

ಕೇಂದ್ರ ವಿಭಾಗ, ಪೂರ್ವ, ಪಶ್ಚಿಮ ಉತ್ತರ, ದಕ್ಷಿಣ ಸೇರಿದಂತೆ ನಗರದಾದ್ಯಂತ ಎಂಟು ಡಿವಿಸನ್​ನ ರೌಡಿ ಶೀಟರ್​ಗಳ ಮನೆಗಳ ಮೇಲೆ ಸಿಸಿಬಿ ರೇಡ್ ಮಾಡಿದ್ದು ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ರೇಡ್ ನಡೆದಿದೆ.

ನಟೋರಿಯಸ್ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನೀಲ ಮತ್ತು ಜೆ ಬಿ ನಾರಾಯಣ್ ಹಾಗೂ ಅವರ ಸಹಚರರ ಮನೆ ಮೇಲೆ ಸಿಸಿಬಿ ರೇಡ್ ನಡೆಸಿದೆ ಎನ್ನಲಾಗಿದೆ. ರೌಡಿ ಶೀಟರ್ ಮನೆಗಳಲ್ಲಿ ಕೆಲ ಮಾರಕಾಸ್ತ್ರಗಳು, ಗಾಂಜಾ ಕೂಡ ಪತ್ತೆಯಾಗಿರೋ ಮಾಹಿತಿ ಇದೆ.

The post ನಟೋರಿಯಸ್​ಗಳಿಗೆ ನಡುಕ ; ಬೆಳ್ಳಂಬೆಳಗ್ಗೆ 45ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆಗಳ ಮೇಲೆ ಸಿಸಿಬಿ ರೇಡ್ appeared first on News First Kannada.

Source: newsfirstlive.com

Source link