ನಟ ಅಕ್ಷರ್​ಗೆ ‘ಛೀ ಕಳ್ಳ..’ ಎಂದ ‘ಏಕ್​ ಲವ್​ ಯಾ’ ಬೆಡಗಿ ರೀಷ್ಮಾ ನಾಣಯ್ಯ | MS Akshar Reeshma Nanaiah starrer Chi Kalla Kannada song released


ಎಂ.ಎಸ್​. ಅಕ್ಷರ್​ ಮತ್ತು ರೀಷ್ಮಾ ನಾಣಯ್ಯ ಅವರು ‘ಛೀ ಕಳ್ಳ’ ಹಾಡಿನಲ್ಲಿ ಜೊತೆಯಾಗಿ ನಟಿಸಿದ್ದಾರೆ. ಈ ಹಾಡಿಗೆ ಖ್ಯಾತ ಗಾಯಕ ನವೀನ್​ ಸಜ್ಜು ಧ್ವನಿ ನೀಡಿದ್ದಾರೆ.

ನಟ ಅಕ್ಷರ್​ಗೆ ‘ಛೀ ಕಳ್ಳ..’ ಎಂದ ‘ಏಕ್​ ಲವ್​ ಯಾ’ ಬೆಡಗಿ ರೀಷ್ಮಾ ನಾಣಯ್ಯ

ರೀಷ್ಮಾ ನಾಣಯ್ಯ, ಎಂ.ಎಸ್. ಅಕ್ಷರ್

ನಟಿ ರೀಷ್ಮಾ ನಾಣಯ್ಯ (Reeshma Nanaiah) ಅವರಿಗೂ, ಹಿಟ್​ ಹಾಡುಗಳಿಗೂ ಏನೋ ಒಂಥರ ನಂಟು. ಅವರು ಅಭಿನಯಿಸಿದ ‘ಏಕ್​ ಲವ್​ ಯಾ’ ಚಿತ್ರದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ಈಗ ಅವರು ಒಂದು ಮ್ಯೂಸಿಕ್​ ವಿಡಿಯೋ (ಆಲ್ಬಂ ಸಾಂಗ್​) ಮೂಲಕ ಮತ್ತೆ ಮೋಡಿ ಮಾಡುತ್ತಿದ್ದಾರೆ. ಅವರ ಜೊತೆ ಖ್ಯಾತ ನಿರ್ಮಾಪಕ ಬೆಂ.ಕೋ.ಶ್ರೀ. ಪುತ್ರ ಎಂ.ಎಸ್​. ಅಕ್ಷರ್​ (MS Akshar) ಅವರು ನಟಿಸಿದ್ದಾರೆ. ‘ಛೀ ಕಳ್ಳ’ ಎಂಬ ಈ ಹಾಡನ್ನು ವಿಶೇಷ ಕಾನ್ಸೆಪ್ಟ್​ನೊಂದಿಗೆ ಚಿತ್ರಿಸಲಾಗಿದೆ. ಇತ್ತೀಚೆಗೆ ಅದ್ದೂರಿಯಾಗಿ ಈ ಗೀತೆಯನ್ನು ರಿಲೀಸ್​ ಮಾಡಲಾಯಿತು. ‘ಲೂಸಿಯಾ’ ಸಿನಿಮಾ ಖ್ಯಾತಿಯ ಗಾಯಕ ನವೀನ್ ಸಜ್ಜು ಅವರ ಧ್ವನಿಯಲ್ಲಿ ‘ಛೀ ಕಳ್ಳ’ ಹಾಡು (Chi Kalla Song) ಮೂಡಿಬಂದಿದೆ. ಎ2 ಮ್ಯೂಸಿಕ್​ ಸಂಸ್ಥೆ ಮೂಲಕ ಸಾಂಗ್​ ರಿಲೀಸ್​ ಮಾಡಲಾಗಿದೆ.

ಹಳ್ಳಿ ಪರಿಸರದಲ್ಲಿ ‘ಛೀ ಕಳ್ಳ’ ಹಾಡನ್ನು ಚಿತ್ರೀಕರಿಸಲಾಗಿದೆ. ಇದಕ್ಕೆ ಪುನರ್ವ್ ಆಕರ್ಷ್ ನಿರ್ದೇಶನವಿದೆ. ವಿಸ್ಮಯ ಜಗ ಸಾಹಿತ್ಯ ಬರೆದಿದ್ದು, ಅವರೇ ರಾಗ ಸಂಯೋಜನೆ ಕೂಡ ಮಾಡಿದ್ದಾರೆ. ನಿರ್ಮಾಪಕ ಬೆಂ.ಕೋ.ಶ್ರೀ ಅವರು ಇಡೀ ತಂಡಕ್ಕೆ ವಿಶ್​ ಮಾಡಿದ್ದಾರೆ.

(ಛೀ ಕಳ್ಳ ಸಾಂಗ್ ಬಿಡುಗಡೆ ಸಮಾರಂಭ)

ಏಳು ಚಿತ್ರಗಳನ್ನು ನಿರ್ಮಿಸಿದ ಅನುಭವ ಬೆಂ.ಕೋ.ಶ್ರೀ. ಅವರಿಗೆ ಇದೆ. ಈಗ ಅವರು ಮಗನ ವೃತ್ತಿ ಜೀವನಕ್ಕಾಗಿ ಎಲ್ಲರ ಪ್ರೋತ್ಸಾಹ ಬಯಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಬೇಕು ಎಂಬ ಹಂಬಲ ಎಂ.ಎಸ್​. ಅಕ್ಷರ್​ ಅವರಲ್ಲಿದೆ. ಅದರ ಪೂರ್ವಭಾವಿಯಾಗಿ ಅವರು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಒಂದೊಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಅವರಿಗೆ ಇದೆ.

‘ರೀಷ್ಮಾ ನಾಣಯ್ಯ ಅವರ ಅಭಿನಯ ಈ ಹಾಡನ್ನು ಮತ್ತಷ್ಟು ಸುಂದರವಾಗಿಸಿದೆ. ವಿಸ್ಮಯ ಜಗ ಅವರು ಒಳ್ಳೆಯ ಸಂಗೀತ, ಸಾಹಿತ್ಯ ನೀಡಿದ್ದಾರೆ. ಅದನ್ನು ಅಷ್ಟೇ ಚೆನ್ನಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಪುನರ್ವ್ ಆಕರ್ಷ್​’ ಎಂದು ಹೇಳಿರುವ ಅಕ್ಷರ್​ ಅವರು ತಮ್ಮ ಇಡೀ ತಂಡದವರಿಗೆ ಧನ್ಯವಾದ ಅರ್ಪಿಸಿದ್ದಾರೆ. ನವೀನ್ ಕುಮಾರ್ ಹಾಗೂ ಎ.ಜೆ. ಶೆಟ್ಟಿ ಛಾಯಾಗ್ರಹಣ, ನಾಗೇಂದ್ರ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ.

ನಟಿ ರೀಷ್ಮಾ ನಾಣಯ್ಯ ಅವರ ಪಾಲಿಗೆ ಇದು ಮೊದಲ ಮ್ಯೂಸಿಕ್​ ವಿಡಿಯೋ. ಯೂಟ್ಯೂಬ್​ನಲ್ಲಿ ಈ ಹಾಡು ಜನಮನ ಗೆಲ್ಲುತ್ತಿದೆ.

TV9 Kannada


Leave a Reply

Your email address will not be published.