ಸ್ಯಾಂಡಲ್ವುಡ್ ನಟ ಅಜಯ್ ರಾವ್ ತಮ್ಮ ಮಗಳು ಚೆರಿಷ್ಮಾ ಜೊತೆ ಕ್ಲಿಕಿಸಿಕೊಂಡ ಹೊಸ ಪೋಟೋ ಹಾಗೂ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಜಯ್ ರಾವ್ ಹಾಗೂ ಅವರ ಪತ್ನಿ ಸ್ವಪ್ನಾ ಅಜಯ್ ರಾವ್ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಗಳು ಚೆರಿಷ್ಮಾಳ ವಿಡಿಯೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರಂತೇ ಈ ಬಾರಿಯೂ ಕೂಡ ಅಜಯ್ ಮಗಳ ಜೊತೆ ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಜೊತೆಗೆ ಚೆರಿಷ್ಮಾ ಅಜಯ್ ತಲೆ ಮೇಲೆ ಒಂದು ಪೆಪರ್ ಇಟ್ಟು ಆದರ ಮೇಲೆ ಪೆನ್ನಿಂದ ಬರೆಯುವ ವಿಡಿಯೋವೊಂದನ್ನು ಹಂಚಿಕೊಂಡು “ನನ್ನ ತಲೆ ಮೇಲೆ 1 ಹೊಸ ಚಿತ್ರಕಥೆ ಮೂಡ್ತಾ ಇದೆ” ಎಂದು ಫನ್ನಿಯಾಗಿ ಬರೆದಿದ್ದಾರೆ.
ಅಜಯ್ ನಟನೆಯ ‘ಲವ್ ಯೂ ರಚ್ಚು’ ಸಿನಿಮಾ ಇತ್ತೀಗಷ್ಟೇ ರಿಲೀಸ್ ಆಗಿತ್ತು. ಆದ್ರೆ ಈ ಚಿತ್ರದ ನಿರ್ಮಾಪಕ ಗುರುದೇಶಪಾಂಡೆ ಹಾಗೂ ಅಜಯ್ ನಡುವೆ ವೈಮನಸು ಮೂಡಿದ್ದು ಈ ವಿಚಾರ ಬಾರಿ ಚರ್ಚೆಗೆ ಕಾರಣವಾಗಿತ್ತು. ಸದ್ಯ ಅಜಯ್ ರಾವ್ ನಟನೆಯ ಶೋಕಿವಾಲ ಸಿನಿಮಾದ ಚಿತ್ರೀಕರಣ ಕಂಪ್ಲಿಟ್ ಆಗಿದ್ದು ಚಿತ್ರಕ್ಕೆ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು ಸದ್ಯದಲ್ಲೇ ಚಿತ್ರವನ್ನು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.