ಇಂದು ದೇಶದಲ್ಲಿ ಕೊರೊನಾ ಸೋಂಕು ಅತಿಯಾಗಿ ಕಾಡ್ತಿದೆ. ಇದ್ರಲ್ಲಿ ಸ್ಯಾಂಡಲ್​ವುಡ್ ಕೂಡ ಹೊರತಲ್ಲ. ಸದ್ಯ ನಟ ಕೋಮಲ್​ ಕೂಡ ಸೋಂಕಿನಿಂದ ಬಳಲಿದ್ದು ಕೃತಕ ಆಕ್ಸಿಜೆನ್ ಪಡೆದಿದ್ದಾರೆ. ಈ ಬಗ್ಗೆ ಸ್ವತಃ ಕೋಮಲ್ ಅವರ ಅಣ್ಣ ಜಗ್ಗೇಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಜಗ್ಗೇಶ್ ಟ್ವೀಟ್​ನಲ್ಲಿ ಏನಿದೆ?

ನಾನು ಇಷ್ಟುದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ ಮಾತ್ರ ಗೊತ್ತು.. ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ.. ಅದು ಒಂದೇ ರಾಯರೇ ನಾನು ಕಾಯವಾಚ ಮನಸ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು.. ರಾಯರು ನನ್ನ ಬೇಡಿಕೆಗೆ ಬೃಂದಾವನದಿಂದ ಎದ್ದುಬಂದು ಪಕ್ಕನಿಂತು ಅವನ ಉಳಿಸಿಬಿಟ್ಟರು! komal is safe.   ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಸ್ವಂತ ವ್ಯವಹಾರವನ್ನು ಬೆಂಗಳೂರಿನ ಕಾರ್ಪೊರೇಷನ್​ನಲ್ಲಿ ಶುರುಮಾಡಿ ಯಶಸ್ವಿಯಾದ.. ಆದರೆ ಇತ್ತೀಚೆಗೆ ತನಗೆ ಬರಬೇಕಾದ billಗೆ ಅಲ್ಲಿನ ಕೆಲ ಲಂಚಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು.. ಅದನ್ನು ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೋನ ಮಾರಿ ಮೈಸೇರಿ ತುಂಬ serious ಆಗಿಬಿಟ್ಟ.. ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ.. ಅವನಿಗೆ ಸಹಾಯಮಾಡಿದ ಡಾ: ಮಧುಮತಿ, ನಾದನಿ ಡಾ.ಲಲಿತ ಹಾಗೂ ನರ್ಸಗಳ ಪಾದಕ್ಕೆ ನನ್ನ ನಮನ.. ರಾಯರೆ.. ನಮನಗಳು

The post ನಟ ಕೋಮಲ್​ಗೆ ಕಾಡಿದ ಕೊರೊನಾ ಸೋಂಕು; ಜಗ್ಗೇಶ್ ಹಂಚಿಕೊಂಡ ನೋವು ಎಂಥದ್ದು ಗೊತ್ತಾ? appeared first on News First Kannada.

Source: newsfirstlive.com

Source link