ಇತ್ತಿಚೀಗಷ್ಟೆ ನಟಿ ಚಂದನಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ದೀಪಕ್ ಮಹದೇವ ಕಿರುತೆರೆಗೆ ಮರಳುತ್ತಿದ್ದಾರೆ. ಕೊನೆಯದಾಗಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಿನ್ನಿಂದಲೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಆ ಸೀರಿಯಲ್ ವೈಂಡಪ್ ಆದ ಬಳಿಕ ಯಾವುದೇ ಪ್ರಾಜೆಕ್ಟ್ನಲ್ಲಿ ಕಾಣಿಸಿಕೊಂಡಿರಲಿಲ್ಲ.
ಈಗಾಗಲೇ ಸಾಕಷ್ಟು ಸೀರಿಯಲ್ಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ದೀಪಕ್, ಮರಳಿ ಮನಸ್ಸಾಗಿದೆ ಧಾರಾವಾಹಿಯ ಮೂಲಕ ಮತ್ತೆ ಬಣ್ಣಹಚ್ಚಲು ಸಜ್ಜಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಚಂದನ್ಕುಮಾರ್ ಹಾಗೂ ದಿವ್ಯಾ ವಾಗುಕರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಮರಳಿ ಮನಸ್ಸಾಗಿದೆ ಸೀರಿಯಲ್ಗೆ ದೀಪಕ್ ಎಂಟ್ರಿ ಕೊಡಲಿದ್ದಾರೆ.
ದೀಪಕ್, ಈ ಧಾರಾವಾಹಿಯಲ್ಲಿ ಡಾಕ್ಟರ್ ಕಮ್ ಪ್ರೋಫೆಸರ್ ಆಗಿರುವ ಅಜಯ್ ಪಾತ್ರವನ್ನ ನಿರ್ವಹಿಸಲಿದ್ದಾರೆ. ನಾಯಕ್ ಕುಟುಂಬದ ದೊಡ್ಡ ಸೊಸೆ ಚಂದ್ರಲೇಖ ಮಗಳು ಸಾಹಿತ್ಯ. ಸಾಹಿತ್ಯ ಬದುಕಿನಲ್ಲಿ ನಡೆದ ದುರಂತದಿಂದಾಗಿ ಸಾಹಿತ್ಯ ಮನೋರೋಗದಿಂದ ಬಳಲುತ್ತಿರುತ್ತಾಳೆ. ಅವಳ ಜೀವನದ ದೊಡ್ಡ ಸತ್ಯ ಒಂದು ಸ್ಪಂದನಾ ಮುಂದೆ ಬಯಲಾಗಿದೆ.
ಅಂದ್ಹಾಗೆ, ಸಾಹಿತ್ಯಳ ಪತಿ ಡಾಕ್ಟರ್ ಕಮ್ ಪ್ರೋಫೆಸರ್ ಅಜಯ್ ಆಗಿರ್ತಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈಗಾಗಲೇ ಶೂಟಿಂಗ್ನಲ್ಲಿ ದೀಪಕ್ ಭಾಗಿಯಾಗಿದ್ದು, ಈಗಾಗಲೇ ಎಪಿಸೋಡ್ ಕೂಡ ಪ್ರಸಾರವಾಗುತ್ತಿವೆ.
ಇನ್ನೂ ತಂದೆ ಸ್ಥಾನದಲ್ಲಿ ಇದ್ದ ಆಫಿಸರ್ಗೆ ಕೊಟ್ಟ ಮಾತಿಗೆ ಬೆಲೆ ಕೊಟ್ಟು ಇಷ್ಟವಿಲ್ಲದಿದ್ದರೂ ವಿಕ್ರಾಂತ್ ಸ್ಪಂದನಾಳನ್ನ ಮದುವೆಯಾಗ್ತಾನೆ. ಸದ್ಯ ಇಬ್ಬರ ನಡುವೆ ಪ್ರೀತಿ ಅರಳಿದ್ದರು ಹೇಳಿಕೊಳ್ಳುತ್ತಿಲ್ಲ. ಜೊತೆಗೆ ಸ್ಪಂದನಾಳ ನೆರ ನಡೆ ನುಡಿ ಹಾಗೂ ಮನೆಯವರ ಸಂಪ್ರದಾಯದ ಮನೋಭಾವದ ಮಧ್ಯದಲ್ಲಿ ವಿಕ್ರಾಂತ್ ಸಿಕ್ಕಿಹಾಕಿಕೊಂಡಿದ್ದಾನೆ. ಈ ನಡುವೆ ಸಾಹಿತ್ಯ ಬದುಕನ್ನ ಸ್ಪಂದನಾ ಸರಿಮಾಡ್ತಾಳ ಅನ್ನೋದೇ ಸದ್ಯದ ಮರಳಿ ಮನಸ್ಸಾಗಿದೆ ಟ್ರ್ಯಾಕ್.
ಒಟ್ನಲ್ಲಿ ಒಂದು ಒಳ್ಳೆಯ ಪಾತ್ರದ ಮೂಲಕ ಜನರನ್ನು ರಂಜಿಸಲು ಸಜ್ಜಾದ ನಟ ದೀಪಕ್ ಮಹದೇವ್ ಅವರಿಗೆ ನಮ್ಮ ಕಡೆಯಿಂದ ಬೆಸ್ಟ್ ವಿಶ್ಶಸ್.