ನಟ-ನಟಿಯರಿಗೆ ಸೆಟ್​ಗಳಲ್ಲಿ ವಿಚಿತ್ರ ಅನುಭವಗಳಾಗಿವೆ, ಅವೆಲ್ಲ ಅತೀಂದ್ರಿಯ ಶಕ್ತಿಯ ಆಟವೇ? | Bollywood stars have experienced peculiar happenings during shoots, can they be termed acts of superhumans?


ಭೂತ ಪ್ರೇತದ ಕತೆಯುಳ್ಳ ಹಾರರ್ ಸಿನಿಮಾಗಳು ಎಲ್ಲರಿಗೂ ಇಷ್ಟವಾಗಲಾರವು ಆದರೂ ಅವು ಹಿಟ್ ಆಗುತ್ತವೆ. ಹಾಗೇಯೇ ವೈಜ್ಞಾನಿಕ, ಬೇರೆ ಗ್ರಹಗಳ ಜೀವಿಗಳು ಅನ್ನುವ ಹಾಗೆ ಕ್ಯಾರೆಕ್ಟರ್ ಗಳನ್ನು ಸೃಷ್ಟಿಸಿದ ಫಿಲ್ಮ್ಗಳು, ಥ್ರಿಲ್ಲರ್ ಸಿನಿಮಾಗಳು ಸಹ ಬಿಡುಗಡೆಯಾಗುತ್ತವೆ ಮತ್ತು ಓಡುತ್ತವೆ ಕೂಡ. ಅತೀಂದ್ರಿಯ, ಅತಿಮಾನವ ಶಕ್ತಿಯ ಪಾತ್ರಗಳನ್ನು ಚಿತ್ರಗಳಲ್ಲಿ ಸೃಷ್ಟಿಸಲಾಗುತ್ತದೆ. ಆದರೆ ಸಿನಿಮಾಗಳಲ್ಲಿ ನಟಿಸುವ ನಟ-ನಟಿಯರು ತಮ್ಮ ನಿಜಜೀವನದಲ್ಲೂ ಕೆಲಬಾರಿ ವಿಚಿತ್ರವೆನಿಸುವ ಸಂಗತಿಗಳನ್ನು ಆನುಭವಿಸಿದ್ದಾರೆ. ಅದು ಹೇಗಾಯ್ತು, ಯಾಕಾಯ್ತು ಅನ್ನೋದು ಅವರಿಗೆ ಗೊತ್ತಾಗಿಲ್ಲ.

ಬಾಲಿವುಡ್ ನ ಖ್ಯಾತ ನಿರ್ಮಾಪಕ-ನಿರ್ದೇಶಕ ಡೇವಿಡ್ ಧವನ್ ಅವರ ಮಗ ವರುಣ್ ಧವನ್ ‘ಎಬಿಸಿಡಿ2’ ಚಿತ್ರಕ್ಕಾಗಿ ಅಮೆರಿಕದ ಲಾಸ್ ಏಂಜೆಲ್ಸ್ ಶೂಟ್ ಮಾಡುತ್ತಿದ್ದಾಗ ಅವರು ತಂಗಿದ್ದ ಹೊಟೆಲಲ್ಲಿ ಯಾರೋ ಹಾಡು ಹೇಳುತ್ತಿರುವಂತೆ ಕೇಳಿಸಿತ್ತಂತೆ. ಬಿಪಾಶಾ ಬಸು ‘ರಾಝ್’ ಚಿತ್ರೀಕರಣ ನಡೆಯುತ್ತಿದ್ದಾಗ ಸೆಟ್ ನಲ್ಲಿ ನೆಗೆಟಿವ್ ಎನರ್ಜಿಯನ್ನು ಅನುಭವಿಸಿದ್ದರಂತೆ.

ಮುಂದಿನವಾರ ಕತ್ರೀನಾ ಕೈಫ್ರನ್ನು ಮದುವೆಯಾಗಲಿರುವ ವಿಕ್ಕಿ ಕೌಶಲ್ ‘ಭೂತ್’ ಸಿನಿಮಾದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾಗ ಯಾರೋ ಅವರಿಗೆ ಸುತ್ತಿಗೆಯಿಂದ ಹೊಡೆದ ಹಾಗೆ ಅನುಭವ ಆಯಿತಂತೆ. ‘ದಿಲ್ವಾಲೆ’ ಸಿನಿಮಾದ ಚಿತ್ರೀಕರಣದಲ್ಲಿ ಕೃತಿ ಸಲೋನ್ ಗೆ ಯಾರೋ ದೂಡಿದಂತಾಗಿತ್ತು. ರಣವೀರ್ ಸಿಂಗ್ ನಂಥ ನಟನಿಗೂ ‘ಬಾಜಿರಾವ್ ಮಸ್ತಾನಿ’ ಚಿತ್ರದಲ್ಲಿ ನಟಿಸುವಾಗ ಒಂದು ಬಗೆಯ ವಿಚಿತ್ರ ಅನುಭವ ಆಗಿತ್ತಂತೆ.

ಮೊನ್ನೆಯಷ್ಟೇ ಪತ್ರಲೇಖಾರನ್ನು ಮದುವೆಯಾದ ರಾಜಕುಮಾರ್ ರಾವ್ ಅವರಿಗೆ ಹೆದ್ದಾರಿಯೊಂದರಲ್ಲಿ ಡ್ರೈವ್ ಮಾಡಿಕೊಂಡು ಹೋಗುವಾಗ ಕತ್ತಲಲ್ಲಿ ಯಾರೋ ನಡೆದು ಹೋಗುತ್ತಿರುವ ಹಾಗೆ ಭಾಸವಾಗಿತ್ತಂತೆ!

TV9 Kannada


Leave a Reply

Your email address will not be published. Required fields are marked *