ಇವತ್ತಿನ ದಿನದ ಸಿನಿಮಾಗಳ ಬಗ್ಗೆ ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ ಅನಂತ್​ನಾಗ್​.. 70 ರ ದಶಕದಲ್ಲಿ ನಾವು ಮುಂದಿದ್ವಿ.. ಈಗ ಸ್ವಲ್ಪ ಹಿನ್ನಡೆಯಾಗಿದೆ.. 50 ರಿಂದ 60 ನಿರ್ದೇಶಕರು ಈಗಿನ ಪೀಳಿಗೆಯವರು ಇದ್ದಾರೆ.. ಅವರು ಓಟಿಟಿಗಳಲ್ಲಿ ಸಿನಿಮಾಗಳನ್ನ ಮಾಡಬೇಕು. ಮಾಸ್​ ಹೀರೋಗಳಿಗೆ ಥಿಯೇಟರ್​ಗಳು ಇವೆ ಎಂದು ಹೇಳಿದ್ರು.

ನನಗೆ ರಂಗಭೂಮಿಯಲ್ಲಿ ವೈವಿಧ್ಯಮಯ ನಾಟಕಗಳಲ್ಲಿ ನಟಿಸಿದ್ದರಿಂದ ಗಟ್ಟಿಯಾದ ಬುನಾದಿ ಸಿಕ್ಕಿತು. ನಾನು ಸ್ವಲ್ಪ ಇಂಗ್ಲೀಷ್ ಸಿನಿಮಾಗಳನ್ನ ನೋಡ್ತಿದ್ದೆ.. ಅಲ್ಲಿ ಸಹಜವಾಗಿ ನಟಿಸುತ್ತಿದನ್ನ ಗಮನಿಸಿದೆ. ಫಿಲ್ಮ್ ಇನ್​ಸ್ಟಿಟ್ಯೂಟ್​ನಲ್ಲಿ ಕಲಿಯಲು ಹಣವಿಲ್ಲದೇ ಪುಸ್ತಕಗಳನ್ನ ತರಿಸಿಕೊಂಡು ನೋಡಿದೆ. ನಟ ನೀರಿನಂತಿರಬೇಕು.. ಯಾವ ಬಟ್ಟಲಲ್ಲಿ ಹಾಕಿದ್ರೂ ಅದು ಆ ಶೇಪ್ ಪಡೆದುಕೊಳ್ಳುತ್ತದೆ ಅನ್ನೋದನ್ನ ಕಲಿತೆ. ನಾನು ನಟನೆಯನ್ನ ತುಂಬಾ ಎಂಜಾಯ್ ಮಾಡಿದೆ. ನಾನು ನಟನೆಯಲ್ಲಿ ಇನ್ನೊಬ್ಬನಾಗುವುದನ್ನು ಸಂಭ್ರಮಿಸುತ್ತೇನೆ. ಪಟೇಲ್ ಅವರು ನನಗೆ ಬೆಂಗಳೂರು ಡೆವಲೆಪ್ಮೆಂಟ್ ಖಾತೆ ಕೊಟ್ಟಿದ್ದರು.. ನನಗೆ ಭಯ ಬಂದುಬಿಟ್ಟಿತ್ತು. ಅವಾಗ ಕಲಿತುಕೊಳ್ಳಪ್ಪ ಅಂತ ಹೇಳಿದರು.

ನಟನಾಗಿ ನಿಮಗೆ ರಾಜಕೀಯ ಯಾಕ್ರೀ ಬೇಕು ಅಂತ ತುಂಬಾ ಜನ ನನಗೆ ಹೇಳಿದ್ದರು. ಅದು ನನಗೆ ಇತ್ತೀಚೆಗೆ ಮತ್ತೆ ನೆನಪಾಯ್ತು.. ಆಗ ನನಗೆ ನಟನೆಯೇ ನನ್ನ ಬದುಕು ಅನ್ನಿಸ್ತು. ನಿಮ್ಮ ಮುಂದೆ ದೇವರು ಗುರು ನಿಂತ್ರೆ ಯಾರಿಗೆ ನಮಿಸ್ತೀರಿ.. ಗುರುಗಳಿಗೆ ನಮಿಸಿ ಅವರೇ ನಿಮ್ಮನ್ನು ದೇವರ ಬಳಿಗೆ ಕರೆದೊಯ್ತಾರೆ ಅಂತ ನನಗೆ ಮಠದಲ್ಲಿ ಹೇಳಿಕೊಟ್ಟಿದ್ದರು.

ಅವಾಗೆಲ್ಲ ನಮಗೆ ನೇತಾರರು ಗಾಂಧಿ, ನೆಹರು, ಪಟೇಲರು ಅಂತ ಗೊತ್ತಾಗ್ತಿತ್ತು.. ಅದೇ ವಾತಾವರಣದಲ್ಲೇ ನಾನು ಬೆಳೆದೆ. ರಾಜೇಂದ್ರ ಪ್ರಸಾದ್ ಬಂದಾಗ ನನ್ನನ್ನು ಕರೆದುಕೊಂಡು ಹೋಗಿದ್ದರು. ಮುಂಬೈಗೆ ಹೋದಾಗ ಶಾಕ್ ಆಯಿತು. ಅಲ್ಲಿ ಎಲ್ಲರೂ ಬಾಲಿವುಡ್ ನಟರ ಫೋಟೋಗಳನ್ನ ಇಟ್ಟುಕೊಂಡಿದ್ದರು.

The post ‘ನಟ ನೀರಿನಂತಿರಬೇಕು’.. ಯುವ ಸಿನಿಮಾ ನಟರ ಬಗ್ಗೆ ಅನಂತ್​ ನಾಗ್​ ಹೀಗಂದ್ರು.. appeared first on News First Kannada.

Source: newsfirstlive.com

Source link