ನಟ ಪುನೀತ್​ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಗಣ್ಯರ ಒತ್ತಾಯ; ದನಿಗೂಡಿಸಿದ ಆನಂದ್ ಸಿಂಗ್, ಬಿಸಿ ಪಾಟೀಲ್, ನಟ ಪ್ರೇಮ್ | Karnataka Cabinet Minsiters BC Patil and Anand Singh and actor Prem asks government to recommend Puneeth for Padmashree award


ನಟ ಪುನೀತ್​ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಗಣ್ಯರ ಒತ್ತಾಯ; ದನಿಗೂಡಿಸಿದ ಆನಂದ್ ಸಿಂಗ್, ಬಿಸಿ ಪಾಟೀಲ್, ನಟ ಪ್ರೇಮ್

ನಟ ಪುನೀತ್ ರಾಜ್​ಕುಮಾರ್

ಹಾವೇರಿ: ನಟ ಪುನೀತ್​ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕೆಂಬ ವಿಚಾರಕ್ಕೆ ನಮ್ಮ ಬೆಂಬಲವಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅಬಲೂರು ಗ್ರಾಮದಲ್ಲಿ ಅವರು ಮಾತನಾಡಿದರು. ನಟ ಪುನೀತ್​ ಸೇವಾ ಮನೋಭಾವ ಹೊಂದಿರುವ ವ್ಯಕ್ತಿಯಾಗಿದ್ದರು. ನಟ ಪುನೀತ್​ರಲ್ಲಿದ್ದ ವಿಚಾರಗಳು ಯಾರಿಗೂ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಪುನೀತ್ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದ ಅವರು, ಪುನೀತ್ ರಾಜಕುಮಾರ್ ನನಗೆ 2000ನೇ ಇಸವಿಯಿಂದ ಪರಿಚಿತರು. ನಾನಾಗ ರಾಜಕಾರಣಿ ಆಗಿರಲಿಲ್ಲ. ಆಗ ನಾನೊಬ್ಬ ಸಮಾಜ ಸೇವಕನಾಗಿದ್ದೆ. ಪುನೀತ್ ರಾಜಕುಮಾರ ಒಬ್ಬ ಸೇವಾ ಮನೋಭಾವನೆ ಇರೋ ವ್ಯಕ್ತಿ. ಅವರಲ್ಲಿರೋ ವಿಚಾರಗಳು ಯಾರಿಗೂ ಬರೋದಿಲ್ಲ. ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ನಮ್ಮ ಬೆಂಬಲವೂ ಇದೆ ಎಂದು ಹೇಳಿದ್ದಾರೆ.

ಸಚಿವ ಬಿಸಿ ಪಾಟೀಲ್ ಕೂಡ ಪುನೀತ್​ಗೆ ಪದ್ಮಶ್ರೀ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶಿಫಾರಸ್ಸು ಮಾಡುವುದಕ್ಕೆ ಸರ್ಕಾರದಿಂದ ಕೈಗೊಳ್ಳಬೇಕಾದ ನಿರ್ಧಾರಕ್ಕೆ ನಾವು  ಪ್ರಯತ್ನಿಸುತ್ತೇವೆ. ಪುನೀತ್ ಅವರು ಕಲಾ ಸೇವೆ ಮಾಡಿದ್ದಾರೆ. ಅಷ್ಟೇ ಮುಖ್ಯವಾಗಿ ಸಮಾಜ ಸೇವೆಯನ್ನೂ ಮಾಡಿದ್ದಾರೆ. ಅವರಿಗೆ ಪದ್ಮಶ್ರೀ ನೀಡಬೇಕು ಎನ್ನುವುದು ನಮ್ಮೆಲ್ಲರ ಕೋರಿಕೆಯೂ ಹೌದು ಎಂದು ಅವರು ಹೇಳಿದ್ದಾರೆ.

ಪುನೀತ್​ಗೆ ಪದ್ಮಶ್ರೀ ನೀಡಬೇಕು; ನಟ ಪ್ರೇಮ್ ಒತ್ತಾಯ:
ನಟ ಪುನೀತ್‌ಗೆ ಆದಷ್ಟು ಬೇಗ ‘ಪದ್ಮಶ್ರೀ’ ನೀಡಬೇಕು ಎಂದು ಚಿಕ್ಕಮಗಳೂರಿನಲ್ಲಿ ನಟ ನೆನಪಿರಲಿ ಪ್ರೇಮ್ ಒತ್ತಾಯಿಸಿದ್ದಾರೆ. ಪುನೀತ್ ಸರ್ ಅವರಿಗೆ ಆದಷ್ಟು ಬೇಗ ಪದ್ಮಶ್ರೀ ಕೊಡಲಿ ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದೇ ವೇ:ಳೆ ಅವರು, 50-60 ವರ್ಷ ಮೇಲ್ಪಟ್ಟವರು ಜಿಮ್​ ಮಾಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದ್ದಾರೆ.

ನಟ ಪುನೀತ್‌ಗೆ ಪದ್ಮ ಪ್ರಶಸ್ತಿ ನೀಡುವಂತೆ ಒತ್ತಾಯ ಬಂದಿರುವ ಹಿನ್ನೆಲೆಯಲ್ಲಿ, ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಕೇಂದ್ರಕ್ಕೆ ನಟ ಪುನೀತ್ ಹೆಸರಿನ ಶಿಫಾರಸು ಪತ್ರ ಕಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ನವೆಂಬರ್ 16ರ ಬಳಿಕ ಸರ್ಕಾರದ ಮಟ್ಟದಲ್ಲಿ ಹಾಗೂ ಪುನೀತ್ ಕುಟುಂಬದ ಜತೆ ಚರ್ಚಿಸಿ ಹೆಸರು ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಸಿಎಂ ಕೂಡ ಪುನೀತ್​ಗೆ ಪದ್ಮಶ್ರೀ ನೀಡುವ ವಿಚಾರಕ್ಕೆ ಸಮ್ಮತವಿದೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದರು.

ಇದನ್ನೂ ಓದಿ:

Puneeth Rajkumar: ಪುನೀತ್​ಗೆ ಪದ್ಮ ಪ್ರಶಸ್ತಿ ನೀಡಲು ಅಭಿಮಾನಿಗಳ ಒತ್ತಾಯ; ಅಗತ್ಯ ಕ್ರಮಕ್ಕೆ ಮುಂದಾದ ಸರ್ಕಾರ

ಯಾದಗಿರಿ: ಪುನೀತ್ ಪ್ರೇರಣೆ; ಇಬ್ಬರು ದಂಪತಿಗಳು ದೇಹದಾನಕ್ಕೆ ಹಾಗೂ 52 ಜನರು ನೇತ್ರದಾನಕ್ಕೆ ನೋಂದಣಿ

TV9 Kannada


Leave a Reply

Your email address will not be published. Required fields are marked *