ಬೆಂಗಳೂರು: ಹಿರಿಯ ನಟ ಶಿವರಾಮ್ ಅವರ ಆರೋಗ್ಯದ ಮತ್ತಷ್ಟು ಕ್ಷೀಣಿಸಿದ್ದು, ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದಾರೆ ಎಂದು ನಗರದ ಹೊಸಕೆರೆಹಳ್ಳಿಯ ಪ್ರಶಾಂತ್ ಆಸ್ಪತ್ರೆಯ ವೈದ್ಯರಾದ ಡಾ.ಎಸ್.ಎನ್ ಮೋಹನ್ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ವೈದ್ಯರು, ಶಿವರಾಮ್ ಅವರು ನಿನ್ನೆ ಹೇಗಿದ್ದರೋ ಅದೇ ರೀತಿ ಇದ್ದಾರೆ. ನಿನ್ನೆ ಗಿಂತ ಇಂದು ಶೇ.5 ಬಿಪಿ ಸಪೋರ್ಟ್ ಜಾಸ್ತಿಯಾಗಿದೆ. ಅವರ ಕಂಡಿಷನ್ ನಿನ್ನೆ ಗಿಂತ ಇಂದು ಶೇ.6 ಕಡಿಮೆ ಆಗಿದೆ. ಸದ್ಯ ವೆಂಟಿ ಲೇಟರ್ ಮೂಲಕ ಉಸಿರಾಟ ಮಾಡುತ್ತಿದ್ದಾರೆ. ಬ್ರೈನ್ ಕೂಡು ಇಫ್ರುಮೆಂಟ್ ಕಂಡಿಲ್ಲ. ನಿನ್ನೆ ಇದ್ದಂತೆ ಇದೆ. ಬ್ರೈನ್ ಅಲ್ಲಿ ಇನ್ನು ಊತ ಜಾಸ್ತಿ ಇದೆ, ಯಾವುದೇ ಚೇತರಿಕೆ ಇಲ್ಲ. ನಾಳೆ ಕೂಡ ಎಂಆರ್ಐ ಸ್ಕ್ಯಾನ್ ಮಾಡಿ ಮುಂದಿನ ನಿರ್ಧಾರ ತೆಗೆದು ಕೊಳ್ತೀವಿ. ಬ್ರೈನ್ ಬಿಟ್ಟು ಉಳಿದೆಲ್ಲ ಅಂಗಾಗಗಳು ಕಾರ್ಯನಿರ್ವಹಿಸ್ತಿವೆ ಎಂದು ತಿಳಿಸಿದರು.
ನಾಳೆ ಅವರು ಸ್ಥಿತಿಯಲ್ಲಿ ಶೇ.1 ರಷ್ಟು ಚೇತರಿಕೆ ಕಂಡು ಅವಕಾಶ ಇದ್ದರೂ ಶಸ್ತ್ರ ಚಿಕಿತ್ಸೆ ಮಾಡೋ ಬಗ್ಗೆ ಯೋಚನೆ ಮಾಡ್ತೇವೆ. ನಾಳೆ ಬೆಳಗ್ಗೆ 10 ವೇಳೆ ಮುಂದಿನ ಮಾಹಿತಿ ನೀಡುತ್ತೇನೆ. ಮೆದುಳಿನ ಊತ ಕಡಿಮೆಯಾದರೇ ಮೆದುಳಿನ ಸಮಸ್ಯೆ ಕಡಿಮೆಯಾಗೋದಕ್ಕೆ ಅವಕಾಶ ಇರುತ್ತದೆ ಎಂದರು.