‘ನಟ ಸೂರ್ಯ ಒಬ್ಬ ಸ್ವಾರ್ಥಿ’ ಎಂದ BJP ಮುಖಂಡ


ಚೆನ್ನೈ: ಒಟಿಟಿ ಪ್ಲಾಟ್​​ಫಾರ್ಮ್​ನಲ್ಲಿ​ ನವೆಂಬರ್ 2 ರಂದು ಬಿಡುಗಡೆಯಾಗಿರುವ ಸೂರ್ಯ ಅಭಿನಯದ ತಮಿಳು ಚಿತ್ರ ‘ಜೈ ಭೀಮ್’ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಹಿಂದುಳಿದ ಸಮುದಾಯದ ನೋವಿಗೆ ಸೂರ್ಯ ವಕೀಲನ ಪಾತ್ರದಲ್ಲಿ ಮಿಂಚಿ ನ್ಯಾಯಕ್ಕಾಗಿ ಹೋರಾಡುವ ಪರಿಗೆ ಸಿನಿ ಪ್ರೇಕ್ಷಕರು ಚಿತ್ರಕ್ಕೆ ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ.

​ಇನ್ನು ಚಿತ್ರದ ಕುರಿತು ಅಲ್ಲಲ್ಲಿ ಪರ ಹಾಗೂ ವಿರುದ್ಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಅನೇಕ ಮಂದಿ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರೆ, ತಮಿಳುನಾಡು ಬಿಜೆಪಿ ಮುಖಂಡ ಹೆಚ್ ರಾಜಾ, ಟ್ವೀಟರ್​​ನಲ್ಲಿ ಸೂರ್ಯರನ್ನು ಟೀಕಿಸಿ ಸ್ವಾರ್ಥಿ ಅಂತ ಕರೆದಿದ್ದಾರೆ.

ಹೌದು ತಮಿಳುನಾಡು ಬಿಜೆಪಿ ಮುಖಂಡ ನಟ ಸೂರ್ಯ ಒಬ್ಬ ಸ್ವಾರ್ಥಿ ಎಂದು ಕರೆದಿದ್ದು ಸೂರ್ಯನ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಬಿಕೆಪಿ ಮುಖಂಡ ಮಾಡಿದ್ದ ಟ್ವೀಟ್​​ಗೆ ಸೂರ್ಯ ಲೈಕ್ ಮಾಡಿದ್ದು, ನಟನ ಪರವಾಗಿ ಅನೇಕ ಮಂದಿ ಬಿಜೆಪಿ ಮುಖಂಡರಿಗೆ ರೀಟ್ವೀಟ್​ ಮಾಡುವ ಮೂಲಕ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.

News First Live Kannada


Leave a Reply

Your email address will not be published. Required fields are marked *