ಬೆಳಗಾವಿ: ಟ್ರಾಫಿಕ್ ಪೇದೆ, ಸರ್ಕಾರಿ ಬಸ್ ನಿರ್ವಾಹಕ ನಡುವೆ ಮಾರಾಮರಿ ನಡೆದಿರುವ ಘಟನೆ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ನಡೆದಿದೆ.
ಬಸ್ ನಿಲ್ಲಿಸುವ ವಿಚಾರಕ್ಕೆ ಮುಖ್ಯ ಪೇದೆ, ನಿರ್ವಾಹಕ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಇಬ್ಬರು ಕೈ ಕೈ ಮೀಲಾಯಿಸಿದ್ದಾರೆ. ನಗರ ಸಾರಿಗೆ ಬಸ್ ಬಿ.ಕೆ.ಕಂಗ್ರಾಳಿಯಿಂದ ಸಿಬಿಟಿ ಬಸ್ ನಿಲ್ದಾಣಕ್ಕೆ ತೆರಳುತ್ತಿತ್ತು. ಈ ವೇಳೆ ಚನ್ನಮ್ಮ ವೃತ್ತದಲ್ಲಿ ಸಿಗ್ನಲ್ ಮಧ್ಯೆ ಚಾಲಕ ನಗರ ಸಾರಿಗೆ ಬಸ್ ನಿಲ್ಲಿಸಿ ಪ್ರಯಾಣಿಕರ ಇಳಿಸುತ್ತಿದ್ದ. ಸಿಗ್ನಲ್ನಲ್ಲಿ ಬಸ್ ನಿಲ್ಲಿಸಿದ್ದನ್ನು ಟ್ರಾಫಿಕ್ ಮುಖ್ಯಪೇದೆ ಪ್ರಶ್ನಿಸಿದರು.
ಈ ನಡುವೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಟ್ರಾಫಿಕ್ ಮುಖ್ಯಪೇದೆಗೆ ಅವಾಚ್ಯ ಶಬ್ದಗಳಿಂದ ಚಾಲಕನಿಂದ ನಿಂದನೆ ಮಾಡಿದ್ದರಂತೆ. ಇದರಿಂದ ಆಕ್ರೋಶಗೊಂಡ ಮುಖ್ಯಪೇದೆ ನಿರ್ವಾಹಕನಿಗೆ ಕಪಾಳಮೋಕ್ಷ ಮಾಡಿದ್ದರಂತೆ. ಜಗಳ ವಿಕೋಪಕ್ಕೆ ಹೋಗಿ ಇಬ್ಬರು ಪರಸ್ಪರ ಬೈದಾಡಿ, ಬಡಿದಾಡಿಕೊಂಡಿದ್ದಾರೆ ಎನ್ನಲಾಗಿದೆ.
The post ನಡುರಸ್ತೆಯಲ್ಲಿ ಟ್ರಾಫಿಕ್ ಪೇದೆ, ಸರ್ಕಾರಿ ಬಸ್ ನಿರ್ವಾಹಕನ ನಡುವೆ ಬಡಿದಾಟ appeared first on News First Kannada.