ನಡು ಬೀದಿಯಲ್ಲೇ ಮಹಿಳೆ ಹಿಡಿದು ಕೊರೊನಾ ವ್ಯಾಕ್ಸಿನ್​ ಹಾಕಿಸಿದ ಕುಟುಂಬಸ್ಥರು, ವಿಡಿಯೋ ವೈರಲ್ | Family forcibly vaccinated women in mandya video gets viral


ಮಂಡ್ಯ: ಮಹಾಮಾರಿ ಕೊರೊನಾ ವೈರಸ್ ಪ್ರತಾಪ ಹೆಚ್ಚಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಎಲ್ಲರಿಗೂ ಕೊರೊನಾ ಲಸಿಕೆ ನೀಡಲು ಮುಂದಾಗಿದೆ. ಆದ್ರೆ ಈಗಲೂ ಲಸಿಕೆ ಪಡೆಯಲು ಕೆಲ ಜನ ಮುಂದೆ ಬರುತ್ತಿಲ್ಲ. ಸದ್ಯ ಮಂಡ್ಯದಲ್ಲೂ ಇಂತಹದ್ದೇ ಪರಿಸ್ಥಿತಿ ಕಂಡು ಬಂದಿದ್ದು ಲಸಿಕೆ ಪಡೆಯಲು ನಿರಾಕರಿಸಿದ ಮಹಿಳೆಗೆ ಕುಟುಂಬಸ್ಥರು ಹಿಡಿದು ಲಸಿಕೆ ಹಾಕಿಸಿದ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯಲ್ಲಿ ಮೊದಲ ಡೋಸ್ ತೆಗೆದುಕೊಳ್ಳದ 15 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ಹೀಗಾಗಿ ಆರೋಗ್ಯ ಅಧಿಕಾರಿಗಳು ಲಸಿಕೆ ನೀಡಲು ಮುಂದಾಗಿದ್ದಾರೆ. ಆದ್ರೆ ಲಸಿಕೆ ಪಡೆಯಲು ಜನ ಆಸಕ್ತಿ ತೋರಿಸುತ್ತಿಲ್ಲ. ಪ್ರತಿಯೊಬ್ಬರಿಗೂ ಲಸಿಕೆ ನೀಡುವ ನಿಟ್ಟಿನಲ್ಲಿ ಸದ್ಯ ಲಸಿಕೆ ನಿರಾಕರಿಸುತ್ತಿರುವ ಜನರ ಪಟ್ಟಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ ಸ್ಥಳೀಯ ಮುಖಂಡರನ್ನು ಕರೆದುಕೊಂಡು ಹೋಗಿ ಮನೆ ಮನೆಗೆ ತೆರಳಿ ಗಂಟೆಗಟ್ಟಲೆ ಮನವೊಲಿಸಿ ಡಿಎಚ್ಓ ಡಾ.ಧನಂಜಯ ತಾವೇ ಲಸಿಕೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಪಡೆಯದಿದ್ರೆ ಆಗುವ ಅಪಾಯದ ಬಗ್ಗೆ ಮಾಹಿತಿ ನೀಡಿ ಮನವೂಲಿಕೆ ಮಾಡಲಾಗುತ್ತಿದೆ. ಈ ವೇಳೆ ಲಸಿಕೆ ಪಡೆಯಲು ನಿರಾಕರಿಸಿದ ಮಹಿಳೆಗೆ ಕುಟುಂಬಸ್ಥರೇ ಹಿಡಿದು ಲಸಿಕೆ ಹಾಕಿಸಿದ ಘಟನೆ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

ನಡು ಬೀದಿಯಲ್ಲೇ ಮಹಿಳೆ ಹಿಡಿದುಕೊಂಡು ಬಲವಂತವಾಗಿ ವ್ಯಾಕ್ಸಿನ್ ಹಾಕಲಾಗಿದೆ. ವ್ಯಾಕ್ಸಿನ್ ನೀಡುವಾಗ ಮಹಿಳೆ ಬಾಯಿಗೆ ಬಂದಂತೆ ಬೈದಿದ್ದಾರೆ. ಬಲವಂತವಾಗಿ ವ್ಯಾಕ್ಸಿನ್ ಹಾಕದಂತೆ ಡಿಎಚ್ಒ ಡಾ.ಧನಂಜಯ ಸೂಚನೆ ನೀಡಿದ್ದು ಮನವೊಲಿಸಿ ವ್ಯಾಕ್ಸಿನ್ ನೀಡುವಂತೆ ಆರೋಗ್ಯ ಸಿಬ್ಬಂದಿಗೆ ಸಲಹೆ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *