ನದಿಯಲ್ಲಿ ಮುಳುಗಿ ಸಾವನ್ನಪ್ಪಿದವನ ಮೃತದೇಹ ಹುಡುಕಲು ಹೋದ 3 ಮಂದಿ ಸಾವು

ಬಾಗಲಕೋಟೆ: ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಶಿವಪ್ಪ ಎಂಬ ವ್ಯಕ್ತಿಯ ಮೃತದೇಹ ಹುಡುಕಲು ನೀರಿಗಿಳಿದ ಮೂವರು ವಿದ್ಯುತ್ ತಗುಲಿ ಸಾವನ್ನಪ್ಪಿರುವ ದುರಂತ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ನಾರಾಯಣಪುರ ಜಲಾಶಯ ಹಿನ್ನೀರಿನಲ್ಲಿ ನಡೆದಿದೆ.

ಶವ ಹುಡುಕೋದಕ್ಕೆ ಹೋಗಿ ವಿದ್ಯುತ್ ತಗುಲಿ ಶಿವಪ್ಪನ ಮಗ  ಯಮನಪ್ಪ ಅಮಲೂರ(45) ಅಳಿಯ ಶರಣಗೌಡ ಬಿರಾದಾರ (30) ಬೋಟ್ ಆಪರೇಟರ್ ಪರಶು ಎಂಬುವವರು ಸಾವನ್ನಪ್ಪಿದ್ದಾರೆ. ಮೃತರು ವಿಜಯಪುರ ಜಿಲ್ಲೆ ತಾಳಿಕೋಟಿ ತಾಲ್ಲೂಕಿನ ಹರನಾಳ ಮೂಲದವರು ಎನ್ನಲಾಗಿದೆ.

ಶಿವಪ್ಪ ಅಮಲೂರು(70) ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ಇವರು ನದಿಯಲ್ಲಿ ‌ಮುಳುಗಿ ಸಾವನ್ನಪ್ಪಿದ್ದರು. ಶವ ಹುಡುಕಲು ಬೋಟ್ ಮೂಲಕ ಹೋದ ಅಳಿಯ, ಮಗ ಹಾಗೂ ಬೋಟ್ ಆರಪೇಟರ್ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹುನಗುಂದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.

News First Live Kannada

Leave a comment

Your email address will not be published. Required fields are marked *