ಬೆಳಗಾವಿ: ಮಹಾರಾಷ್ಟ್ರ ಗಡಿಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಹರಿಯುವ ನದಿಗಳೆಲ್ಲಾ ತುಂಬಿ ಹರಿಯುತ್ತಿವೆ. ಕೃಷ್ಣಾ ನದಿಯಂತೂ ತುಂಬಿ ಹರಿಯುತ್ತಿದ್ದು, ಪ್ರವಾಹದ ಆತಂಕ ಸೃಷ್ಟಿಯಾಗಿದೆ.

ಇದರ ಮಧ್ಯೆ ವ್ಯಕ್ತಿಯೊಬ್ಬ ನಿಪ್ಪಾಣಿ ತಾಲೂಕಿನಲ್ಲಿ ಬರುವ ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಕ್ಕೋಳ-ಸಿದ್ನಾಳ ಸೇತುವೆ ದಾಟಲು ಹೋಗಿ ಗಾಬರಿ ಹುಟ್ಟಿಸಿದ ಪ್ರಸಂಗ ನಡೆಯಿತು. ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಸೇತುವೆ ಮುಳುಗಡೆಯಾಗಿತ್ತು. ಇದನ್ನೂ ಲೆಕ್ಕಿಸದೇ ದಿಗ್ವಿಜಯ್ ಕುಲಕರ್ಣಿ ಎಂಬಾತ ಸೇತುವೆ ದಾಟಲು ಮುಂದಾಗಿದ್ದ.

ನಂತರ ನೀರಿನಲ್ಲಿ ಕೊಚ್ಚಿ ಹೋದ ಈತ, ಹೇಗೋ ಮರದ ದಿಂಡನ್ನ ಹಿಡಿದು ನದಿಯ ಮಧ್ಯದಲ್ಲೇ ಕುಳಿತಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆ ಎನ್​ಡಿಆರ್​ಎಫ್​ ಪಡೆ ಸ್ಥಳಕ್ಕೆ ಆಗಮಿಸಿ ಸತತ 4 ಗಂಟೆಗಳ ಕಾರ್ಯಾಚರಣೆ ನಡೆಸಿ ಆತನನ್ನ ರಕ್ಷಣೆ ಮಾಡಿದೆ. ಇನ್ನು, ರಕ್ಷಣೆಗೊಳಗಾದ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.

The post ನದಿ ದಾಟಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ; ಕೊನೆಗೂ ಬಚಾವ್ ಮಾಡಿದ NDRF ಪಡೆ appeared first on News First Kannada.

Source: newsfirstlive.com

Source link