‘ನನಗಾಗಿ 24ರ ಪ್ರಾಯದ ಹುಡುಗನನ್ನು ಕಳಿಸು’: ಸೋನು ಶ್ರೀನಿವಾಸ್​ ಗೌಡ ವಿಶೇಷ ಮನವಿ | Bigg Boss Kannada OTT: Sonu Srinivas Gowda wants 24 years old man as partner


Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಈ ರೀತಿ ಬೇಡಿಕೊಂಡಿದ್ದಾರೆ. ‘24 ವರ್ಷದ ಹುಡುಗನೇ ಯಾಕೆ ಬೇಕು’ ಎಂದು ರಾಕೇಶ್​ ಅಡಿಗ ಪ್ರಶ್ನೆ ಮಾಡಿದ್ದಾರೆ.

‘ನನಗಾಗಿ 24ರ ಪ್ರಾಯದ ಹುಡುಗನನ್ನು ಕಳಿಸು’: ಸೋನು ಶ್ರೀನಿವಾಸ್​ ಗೌಡ ವಿಶೇಷ ಮನವಿ

ಸೋನು ಶ್ರೀನಿವಾಸ್ ಗೌಡ

ಬಿಗ್​ ಬಾಸ್​ ಮನೆಯಲ್ಲಿ ಅನೇಕರು ಜೋಡಿಯಾದ ಉದಾಹರಣೆ ಇದೆ. ವೂಟ್​ ಸೆಲೆಕ್ಟ್​ನಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಮತ್ತು ರಾಕೇಶ್​ ಅಡಿಗ ನಡುವೆ ಒಂದು ಬಗೆಯ ಒಡನಾಟ ಬೆಳೆದಿದೆ. ಆದರೆ ಐದನೇ ವಾರದ ಅಂತ್ಯದಲ್ಲಿ ಇವರಿಬ್ಬರ ನಡುವೆ ಸಣ್ಣ ಗ್ಯಾಪ್​ ಮೂಡಿದೆ. ಇಷ್ಟು ದಿನ ಏಕವಚನದಲ್ಲಿ ಅವರಿಬ್ಬರು ಮಾತನಾಡಿಕೊಳ್ಳುತ್ತಿದ್ದರು. ಈಗ ರಾಕೇಶ್​ ಅಡಿಗ (Rakesh Adiga) ವರಸೆ ಬದಲಿಸಿದ್ದಾರೆ. ‘ಇನ್ಮೇಲೆ ಹೋಗಿ ಬನ್ನಿ ಅಂತ ಕರೆಯಬೇಕು’ ಎಂದಿದ್ದಾರೆ. ‘ಈಗ ಒಂದು ಹುಡುಗಿಯ ಜತೆ ಕ್ಲೋಸ್​ ಆಗಿ ಗುರುತಿಸಿಕೊಂಡು, ನಂತರ ಟಿವಿ ಬಿಗ್​ ಬಾಸ್​ಗೆ ಹೋಗುವ ಚಾನ್ಸ್​ ಸಿಕ್ಕರೆ ಅಲ್ಲಿ ಬೇರೆ ಹುಡುಗಿ ಜತೆ ಕನೆಕ್ಷನ್​ ಬೆಳೆಯಲ್ಲ’ ಎಂದು ರಾಕೇಶ್​ ನೇರವಾಗಿ ಹೇಳಿದ್ದಾರೆ. ಈ ವಿಚಾರವಾಗಿ ಒಂದಷ್ಟು ಮಾತುಕಥೆ ನಡೆದಿದೆ.

ರಾಕೇಶ್​ ಅಡಿಗ ಅವರಲ್ಲಿ ಆದ ಈ ಸಡನ್​ ಬದಲಾವಣೆಯನ್ನು ಅಷ್ಟೇ ಕೂಲ್​ ಆಗಿ ಸೋನು ಶ್ರೀನಿವಾಸ್​ ಗೌಡ ಸ್ವೀಕರಿಸಿದ್ದಾರೆ. ‘ಫ್ಲರ್ಟ್​ ಯಾಕೆ ಮಾಡಬೇಕು? ಹಾಗೆ ಬೇಕೆಂದರೆ ಟೈಂ ಪಾಸ್​ ಮಾಡುವ ಹುಡುಗಿಯರೇ ಸಿಕ್ತಾರೆ’ ಎಂದು ಸೋನು ಹೇಳಿದ್ದಾರೆ. ಅಲ್ಲದೇ ಪ್ರೀತಿ, ಕಾಳಜಿ ವಿಚಾರದಲ್ಲಿ ತಮ್ಮ ನಿಲವು ಏನು ಎಂಬುದನ್ನು ಕೂಡ ಅವರು ತಿಳಿಸಿದ್ದಾರೆ.

‘ಅಪ್ಪ ದೇವರೇ.. ನೀನು ಇರುವುದೇ ನಿಜವಾದರೆ.. ನನಗೆ ಈಗ 22 ವರ್ಷ, ಸಖತ್​ ಆಗಿ ಇರುವ 24 ವರ್ಷದ ಹುಡುಗನನ್ನು ಕಳಿಸಿಕೊಡು ದೇವರೇ’ ಎಂದು ಸೋನು ಗೌಡ ಅವರು ಬಿಗ್​ ಬಾಸ್​ ಮನೆಯಲ್ಲಿ ಬೇಡಿಕೊಂಡರು. ‘ಎದುರಲ್ಲೇ ಇದ್ದಾನಲ್ಲ’ ಎಂದು ಜಶ್ವಂತ್​ ಕಡೆಗೆ ರಾಕೇಶ್​ ಕೈ ತೋರಿಸಿದರು. ‘ಅವನು ಬೇಡ, ಅವನು ಯಂಗೇಜ್ ಆಗಿದ್ದಾನೆ’ ಅಂತ ಸೋನು ಹೇಳಿದರು. ‘ನಾನು ಯಂಗೇಜ್ಡ್​ ಅಲ್ಲ, ಕಮಿಟೆಡ್​’ ಎಂದರು ಜಶ್ವಂತ್​.

‘ನನಗೆ ಲವ್​ ಅಂದರೆ ಅಸಹ್ಯ. ಆದರೆ ಪಾರ್ಟ್ನರ್​ ಬೇಕು. ಇಬ್ಬರೂ ಪರಸ್ಪರ ಕೇರ್​ ಮಾಡುತ್ತೇವೆ. ಲವ್ವಲ್ಲಿ ಏನೂ ಸಿಗಲ್ಲ’ ಎಂದು ಸೋನು ಹೇಳಿದ್ದಾರೆ. ‘ಕಾಳಜಿ ತೋರಿಸಲು 24 ವರ್ಷದ ಹುಡುಗನೇ ಯಾಕೆ ಬೇಕು’ ಎಂದು ರಾಕೇಶ್​ ಅಡಿಗ ಪ್ರಶ್ನೆ ಮಾಡಿದ್ದಾರೆ.

ಬಿಗ್​ ಬಾಸ್​ ಒಟಿಟಿ ಮನೆಯಲ್ಲಿ ಈಗ ಕೇವಲ 8 ಜನರು ಉಳಿದುಕೊಂಡಿದ್ದಾರೆ. ಶೀಘ್ರದಲ್ಲೇ ಫಿನಾಲೆ ನಡೆಯಲಿದೆ. ನಂತರ ಟಿವಿಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಆರಂಭ ಆಗಲಿದೆ.

TV9 Kannada


Leave a Reply

Your email address will not be published.