ಕರ್ನಾಟಕದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ಇವತ್ತಿಗೆ 16 ದಿನಗಳು ಕಳೆದಿವೆ. ಇವತ್ತಿಗೂ ಅಪ್ಪು ಅಭಿಮಾನಿಗಳು ನೆಚ್ಚಿನ ನಟನನ್ನು ನೆನೆದು ಕಣ್ಣೀರು ಹಾಕ್ತಿದ್ದಾರೆ. ರಾಜ್ಯದಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದ್ದರು ಲೆಕ್ಕಿಸದ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಸಾಗರೀಪಾದಿಯಲ್ಲಿ ಆಗಮಿಸಿ ಅಪ್ಪು ಸಮಾಧಿ ದರ್ಶನ ಪಡೆಯುತ್ತಿದ್ದಾರೆ..
ಇನ್ನು ರಾಘವೇಂದ್ರ ರಾಜಕುಮಾರ್ ದಿನನಿತ್ಯ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಅಪ್ಪು ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಇಂದು ಕೂಡ ಅಪ್ಪು ಸಮಾಧಿ ದರ್ಶನ ಪಡೆದ ಬಳಿಕ ರಾಘಣ್ಣ ನ್ಯೂಸ್ಫಸ್ಟ್ನೊಂದಿಗೆ ಮಾತಾನಾಡಿದ್ದಾರೆ. ಅಪ್ಪು ಅತೀ ಕಡಿಮೆ ಅವಧಿಯಲ್ಲಿ ಸಾಕಷ್ಟು ಜನರನ್ನ ಸಂಪಾದಿಸಿ ಈ ಭೂಮಿ ಮೇಲೆ ಬಿಟ್ಟು ಹೋಗಿದ್ದಾನೆ. ಆ ಜನರೇ ಇಂದು ಮಳೆ ಗಾಳಿ ಅಂತ ಲೆಕ್ಕಿಸದೆ ಬಂದು ಅವನ ದರ್ಶನ ಪಡೆಯುತ್ತಿದ್ದಾರೆ ಎಂದರು.
ಇನ್ನು ಅಪ್ಪು ಸಾಕಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾನೆ. ಅವನು ಮಾಡಿರೋ ಕೆಲಸಗಳನ್ನ ಯಾರಿಗೂ ಹೇಳಿಲ್ಲ ಇನ್ಮುಂದೆ ನಾವು ಕೂಡ ಯಾರಿಗೂ ಹೇಳಿದಂತೆ ಪಾಲಿಸಿಕೊಂಡು ಹೋಗುತ್ತೇವೆ. ನಾನು ಶಿವಣ್ಣ ಅಪ್ಪು ಒಬ್ಬರಿಗೊಬ್ಬರು ತುಂಬಾ ಪ್ರೀತಿಯಿಂದ ಇದ್ದೋರು. ಅಪ್ಪು ನಮಗಿಂತ 10 ವರ್ಷ ಚಿಕ್ಕೋನು. ಹೀಗಾಗಿ ನನಗೆ ಮೊದಲು ಅಪ್ಪು ಆಮೇಲೆ ನನ್ನ ಮಕ್ಕಳು ಎಂದರು.