ನನಗೆ ಅರ್ಧ, ಅಶೋಕ್​ಗೆ ಅರ್ಧ ಬೆಂಗಳೂರು ಉಸ್ತುವಾರಿ ಸಿಗಲಿ -ವಿ.ಸೋಮಣ್ಣ ಹೊಸ ಪ್ರಸ್ತಾಪ

ಬೆಂಗಳೂರು: ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ನಡೆಯುತ್ತಿರುವ ಪೈಪೋಟಿ ತೀವ್ರ ಸ್ವರೂಪ ಪಡೆದುಕೊಂಡಿದೆ. ವಸತಿ ಸಚಿವ ವಿ.ಸೋಮಣ್ಣ ಅವರು ಇಂದು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ.. ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಹೊಣೆ ವಿಭಾಗಿಸಲಿ. ಬೆಂಗಳೂರಿಗೆ ಬೇಕಾದ್ರೆ ಇಬ್ಬರು ಉಸ್ತುವಾರಿ ಮಾಡಲಿ. ನನಗರ್ಧ ಬೆಂಗಳೂರು, ಅಶೋಕ್​ಗೆ ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ ಎಂದಿದ್ದಾರೆ.

ಸಚಿವ ಆರ್.ಅಶೋಕ್ ವಿರುದ್ಧ ಗುಡುಗಿದ ಸಚಿವ ಸೋಮಣ್ಣ, ನಾನು ಸಚಿವ ಆಗಿದ್ದಾಗ ಅಶೋಕ್ ಇನ್ನೂ ಎಂಎಲ್​ಎ ಆಗಿರಲಿಲ್ಲ. ನಾನು ಸಭೆ ಕರೆದಿದ್ದೆ, ಅಶೋಕ್ ಬಂದಿರಲಿಲ್ಲ. ನಾನು ಏನು ಮಾಡ್ಲಿ? ಅವರು ಸಭೆ ಕರೆದ್ರೆ ನಾನು ಹೋಗ್ತೀನಿ. ನಾನು ಸಭೆ ಕರೆದ್ರೆ ಅವರು ಬರಬೇಕು. ಇಲ್ಲ ಅಂದ್ರೆ ಅವರಿಗೆ ಲಾಸ್ ಎಂದು ಕಿಡಿಕಾರಿದರು.

ಮನೆಗಳನ್ನು ನಮ್ಮ ಕಾರ್ಯಕರ್ತರಿಗೆ ಕೊಡುತ್ತೇನೆ ಅಷ್ಟೇ. ನಾನು ಸೀನಿಯರ್ ಇದ್ದೇನೆ. ಆದರೆ ಅವರಿಗೆ ಸಾಮ್ರಾಟ್ ಅಂತ ಅವರ ಅಪ್ಪ ಅಮ್ಮ ಯಾಕೆ ಹೆಸರಿಟ್ರೋ ಗೊತ್ತಿಲ್ಲ. ಅವನು ಸಾಮ್ರಾಟ್ ಥರನೇ ಆಡ್ತಾನೆ ಎಂದು ಲೇವಡಿ ಮಾಡಿದರು. ಬೆಂಗಳೂರು ಉಸ್ತುವಾರಿ ನೇಮಕ ಮಾಡಿಲ್ಲ. ಕೋವಿಡ್ ನಿರ್ವಹಣೆಗೆ ಅಶೋಕ್​ರನ್ನ ನೇಮಿಸಿದ್ದು. ಪಾಟ್ ಹೋಲ್ ಬಗ್ಗೆ ಅಶೋಕ್ ಯಾಕೆ ಸಭೆ ಮಾಡಿದ್ರು ಎಂದು ಅವರನ್ನ ಕೇಳಿ ಎಂದು ಗುಡುಗಿದರು. ಬೆಂಗಳೂರು ಉಸ್ತುವಾರಿ ಅರ್ಧ ಅರ್ಧ ಮಾಡಿ ಎಂದು ಸಿಎಂಗೆ ಹೇಳಿದ್ದೇನೆ ಎಂದು ಮತ್ತೆ ಪುನರಚ್ಚರಿಸಿದರು.

News First Live Kannada

Leave a comment

Your email address will not be published. Required fields are marked *