ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು

ಪ್ರತಿವಾರ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಯೆಸ್ ಆರ್ ನೋ ಪ್ರಶ್ನೆಗಳನ್ನು ಮನೆಯ ಸ್ಪರ್ಧಿಗಳನ್ನು ಕೇಳುತ್ತಾರೆ. ಹಾಗೆಯೇ ಈ ವಾರ ಸುದೀಪ್, ಮೊದಲ ಪ್ರಶ್ನೆಯಲ್ಲಿಯೇ ಸ್ನಾನಕ್ಕೆ ಹೋದ ಮೇಲೆ ಇನ್ಮುಂದೆ ಯಾವುದೇ ಕಾರಣಕ್ಕೂ ರಘುರವರು ಬಾಗಿಲು ತೆಗೆಯುವುದಿಲ್ಲ ಎಂದು ಹೇಳುತ್ತಾರೆ.

ಈ ವೇಳೆ ಮನೆಮಂದಿ ಯೆಸ್ ಎಂದು ಉತ್ತರಿಸಿದ್ದಾರೆ. ಆಗ ಸುದೀಪ್‍ರವರು ಯೆಸ್ ಯಾಕೆ ಎಂದು ಪ್ರಶಾಂತ್ ಸಂಬರ್ಗಿಯವರನ್ನು ಕೇಳಿದಾಗ, ರಘು ಈಗ ಹೆದರಿಕೊಂಡು ಬಿಟ್ಟಿದ್ದಾರೆ. ಸೋಪ್ ಬೇಕು, ಟವೆಲ್ ಬೇಕು ಎಂದು ಏನೂ ಕೇಳುವುದಿಲ್ಲ. ಬಟ್ಟೆ ಹಾಕಿಕೊಂಡು ಆಚೆ ಬರುತ್ತಾರೆ ಎನ್ನುತ್ತಾರೆ. ನಂತರ ಶಮಂತ್ ಇನ್ನು ಏನೂ ಉಳಿದಿಲ್ಲ ಎಂದು ಹೇಳುತ್ತಾರೆ.

ಆದರೆ ನೋ ಎಂದಿದ್ದ ಚಕ್ರವರ್ತಿಯವರು, ಶೋ ಮುಗಿದ ನಂತರ ಎಲ್ಲಾ ಗೊತ್ತಾಗಿರುತ್ತದೆ. ಏನು ಭಯವಿರುವುದಿಲ್ಲ. ಒಂದು ಸಾರಿ ಆ ರೀತಿ ಆಗುವ ತನಕ ಅಷ್ಟೇ. ರಘು ಈಗ ಯಾವ ಕಾನ್ಫಿಡೆಂಟ್ಸ್ ಲೆವರ್‍ನಲ್ಲಿದ್ದಾರೆ ಎಂದರೆ ರೊಚ್ಚು ರಘು ಆಗಿದ್ದಾರೆ ಎಂದಿದ್ದಾರೆ.

ಕೊನೆಗೆ ರಘುರವರು ನಾನು ಆ ಆಘಾತದಿಂದ ಆಚೆ ಬರುವುದಕ್ಕೆ ಆಗುತ್ತಿಲ್ಲ ಎಂದಾಗ, ಸುದೀಪ್‍ರವರು ಪ್ರಶಾಂತ್‍ರವರಿಗೂ ಬರಲು ಆಗುತ್ತಿಲ್ಲ ಎನ್ನುತ್ತಾರೆ. ಈ ವೇಳೆ ರಘು ಪ್ರಶಾಂತ್‍ರವರಿಗೆ ಆಘಾತವಾಗಿರುವಂತೆ ನನಗೆ ಒಂದು ಪರ್ಸೆಂಟ್ ಕೂಡ ಕಾಣಿಸುತ್ತಿಲ್ಲ. ಸ್ನಾನಕ್ಕೆ ಹೋಗುವುದಕ್ಕೂ ಮುನ್ನ ಸೋಪ್, ಶ್ಯಾಂಪೂ ಎಲ್ಲ ಇದ್ಯಾ ಎಂದು ಚೆಕ್ ಮಾಡುತ್ತೇನೆ. ಆದರೆ ಅವತ್ತು ಜಗ್‍ನನ್ನು ಮರೆತು ಹೋಗಿದ್ದೆ ಅಷ್ಟೇ ಸರ್. ಬಾಗಿಲು ತೆರೆದು ಸ್ವಲ್ಪ ಕೈ ಆಚೆ ಹಾಕಿದ್ದೆ ಅಷ್ಟೋತ್ತಿಗೆ ಇವರು ಬಂದು ಬಿಟ್ಟರು. ಅದರಲ್ಲೂ ಅಂದು ನನ್ನನ್ನು ಎಳೆದು ಈಚೆ ಎಲ್ಲಿ ಹಾಕಿಬಿಡುತ್ತಾರೋ ಎಂದು ಭಯವಾಗಿತ್ತು ಎಂದು ಹೇಳುತ್ತಾರೆ. ಈ ವೇಳೆ ರಘು ಮಾತು ಕೇಳಿ ಮನೆಮಂದಿಯೆಲ್ಲಾ ಸಿಕ್ಕಾಪಟ್ಟೆ ನಕ್ಕಿದ್ದಾರೆ.

The post ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು appeared first on Public TV.

Source: publictv.in

Source link