‘ನನಗೆ ಆ ಮನೆಯಲ್ಲಿ ಇರೋಕೆ ಆಗ್ತಿಲ್ಲ, ಹಿಂಸೆ ಆಗ್ತಿದೆ’; ಸಂಜುಗೆ ಶುರುವಾಯ್ತು ಹೊಸ ಸಂಕಟ – Jothe Jotheyali Serial Update Sanju Became frustrated after his wife Aradhana Torcher


ಅನು ತೆರಳಿದ ನಂತರದಲ್ಲಿ ಸುಬ್ಬು ಎದುರು ಕಣ್ಣೀರು ಹಾಕಿದ್ದಾನೆ ಸಂಜು. ‘ನನಗೆ ಆಗುತ್ತಿಲ್ಲ. ಕಾಳಜಿ ಹೆಸರಲ್ಲಿ ನನ್ನನ್ನು ಕಟ್ಟಿ ಹಾಕುತ್ತಿದ್ದಾರೆ’ ಎಂದು ಅತ್ತಿದ್ದಾನೆ.

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಅನುಗೆ ಝೇಂಡೆಯಿಂದ ಅಪಾಯ ಇದೆ ಎಂಬ ವಿಚಾರ ಸಂಜುಗೆ ಮನವರಿಕೆ ಆಗಿದೆ. ವಠಾರದ ಬಳಿ ಝೇಂಡೆ ಬಂದಿದ್ದ. ಆತ ಹುಡುಕಿ ಬಂದಿದ್ದು ಅನುಳನ್ನು ಎಂದು ಸಂಜು ಭಾವಿಸಿದ್ದಾನೆ. ಆದರೆ, ಆತ ಹುಡುಕಿ ಬಂದಿದ್ದು ಸಂಜುನ. ಅಸಲಿ ವಿಚಾರ ಏನು ಎಂಬುದು ಆತನಿಗೆ ಗೊತ್ತಿಲ್ಲ.

ಆರಾಧನಾಗೆ ಕಾಡಿದೆ ಅನುಮಾನ

ಸಂಜು ಹೇಳದೇ ಕೇಳದೆ ಮನೆ ಬಿಟ್ಟು ಹೋಗಿದ್ದಾನೆ. ಅನು ಗೆಳತಿ ರಮ್ಯಾಳ ಎಂಗೇಜ್​ಮೆಂಟ್ ನಡೆಯುತ್ತಿದೆ. ಅಲ್ಲಿಗೆ ಆತ ತೆರಳಿದ್ದಾನೆ. ಕಚೇರಿಯಿಂದ ಫೈಲ್​ಗಳನ್ನು ಸಹಿ ಹಾಕಿಸಲು ತೆಗೆದುಕೊಂಡು ವಠಾರಕ್ಕೆ ಹೋದ ಸಂಜು ಅಲ್ಲಿಯೇ ಉಳಿದುಕೊಂಡಿದ್ದ. ತಾನು ಎಲ್ಲಿದ್ದೇನೆ ಎನ್ನುವ ವಿಚಾರವನ್ನು ಆತ ಪತ್ನಿಗೆ ತಿಳಿಸಿರಲೇ ಇಲ್ಲ. ರಾತ್ರಿ ಇಡೀ ಅನೇಕ ಬಾರಿ ಆರಾಧನಾ ಕರೆ ಮಾಡಿದ್ದರೂ ಅದನ್ನು ಸ್ವೀಕರಿಸಲು ಸಂಜು ನಿರಾಕರಿಸಿದ್ದ.

ಸಂಜು ನಡೆದುಕೊಂಡ ರೀತಿ ಆರಾಧನಾಗೆ ಇಷ್ಟವಾಗಿಲ್ಲ. ತನ್ನನ್ನು ದೂರ ತಳ್ಳುವ ಉದ್ದೇಶದಿಂದಲೇ ಸಂಜು ಈ ರೀತಿ ಮಾಡುತ್ತಿದ್ದಾನೆ ಅನ್ನೋದು ಆರಾಧನಾ ಅನುಮಾನ. ಈ ಕಾರಣಕ್ಕೆ ಆತನನ್ನು ಕರೆದುಕೊಂಡು ವಿದೇಶಕ್ಕೆ ಹೋಗುವ ಆಲೋಚನೆಯಲ್ಲಿ ಅವಳಿದ್ದಾಳೆ. ಸಂಜುಗೆ ಹೊಸ ಜೀವನ ಬೇಕಿಲ್ಲ ಎಂದು ಆರಾಧನಾಗೆ ಬಲವಾಗಿ ಅನಿಸುತ್ತಿದೆ. ಇದರಿಂದ ಆಕೆ ಗೊಂದಲಕ್ಕೆ ಸಿಲುಕಿದ್ದಾಳೆ. ಮುಂದೇನು ಮಾಡಬೇಕು ಎಂಬುದನ್ನು ತಿಳಿಯದೇ ಒದ್ದಾಡುತ್ತಿದ್ದಾಳೆ.

ಸಂಜುಗೆ ಹಿಂಸೆ

ಸಂಜು ಮನೆಗೆ ಬಂದಿಲ್ಲ ಎಂಬ ವಿಚಾರದಲ್ಲಿ ಆರಾಧನಾ ದೊಡ್ಡ ರಂಪಾಟ ಮಾಡಿದ್ದಾಳೆ. ಈ ಕಾರಣಕ್ಕೆ ಆರ್ಯವರ್ಧನ್ ಸಹೋದರ ಹರ್ಷ ಅನೇಕರಿಗೆ ಕರೆ ಮಾಡಿ ವಿಚಾರಿಸಿದ್ದಾನೆ. ಆರ್ಯವರ್ಧನ್ ಪಿಎ ಆಗಿದ್ದ ಮೀರಾಗೆ ಕರೆ ಮಾಡಿ ಸಂಜು ಎಲ್ಲಿದ್ದಾನೆ ಎಂದು ಕೇಳಿದ್ದಾನೆ. ಆಕೆಗೆ ಈ ವಿಚಾರ ಗೊತ್ತಿರಲಿಲ್ಲ. ಅವಳು ಅನುಗೆ ಕರೆ ಮಾಡಿ ಸಂಜು ಬಗ್ಗೆ ವಿಚಾರಿಸಿದ್ದಾಳೆ. ಸಿಟ್ಟಾದ ಅನು ನೇರವಾಗಿ ಬಂದು ಸಂಜು ಬಳಿ ರಂಪಾಟ ಮಾಡಿದ್ದಾಳೆ. ‘ಹೆಂಡತಿಗೆ ಹೇಳದೆ ಇಲ್ಲಿಗೆ ಬಂದಿದ್ದೀರಲ್ಲ. ಮನಸ್ಸಾದರೂ ಹೇಗೆ ಬಂತು’ ಎಂದು ಪ್ರಶ್ನೆ ಮಾಡಿದ್ದಾಳೆ.

ಅನು ತೆರಳಿದ ನಂತರದಲ್ಲಿ ಸುಬ್ಬು ಎದುರು ಕಣ್ಣೀರು ಹಾಕಿದ್ದಾನೆ ಸಂಜು. ‘ನನಗೆ ಆಗುತ್ತಿಲ್ಲ. ಕಾಳಜಿ ಹೆಸರಲ್ಲಿ ನನ್ನನ್ನು ಕಟ್ಟಿ ಹಾಕುತ್ತಿದ್ದಾರೆ. ನನಗೆ ಹಿಂಸೆ ಆಗುತ್ತಿದೆ. ಆರಾಧನಾ ಬಂದಿರುವುದೇ ನನಗೆ ಸಮಸ್ಯೆ ಆಗಿದೆ’ ಎಂದು ಆತ ನೇರವಾಗಿ ಹೇಳಿದ್ದಾನೆ. ಇದರಿಂದ ಅನು ತಂದೆ ತಾಯಿ ಗೊಂದಲಕ್ಕೆ ಒಳಗಾಗಿದ್ದಾರೆ.

ಪ್ರಿಯದರ್ಶಿನಿ ತಲೆಯಲ್ಲಿ ಹುಳ

ಸಂಜುನೇ ಆರ್ಯವರ್ಧನ್ ಎನ್ನುವ ಸತ್ಯ ಪ್ರಿಯದರ್ಶಿನಿಗೆ ಗೊತ್ತಿದೆ. ಈ ವಿಚಾರವನ್ನು ಅವಳು ನೇರವಾಗಿ ಹೇಳಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಳು. ಆ ಸಮಯಕ್ಕೆ ಸರಿಯಾಗಿ ಝೇಂಡೆ ಬಂದು ಎಲ್ಲವನ್ನೂ ಕೆಡಿಸಿದ್ದ. ‘ಆರ್ಯವರ್ಧನ್ ವಿರುದ್ಧ ಅನು ದ್ವೇಷ ಸಾಧಿಸುತ್ತಿದ್ದಾಳೆ’ ಎಂಬ ಮಾತನ್ನು ಹೇಳಿದ್ದ. ಇದನ್ನು ಪ್ರಿಯಾ ನಂಬಿದ್ದಾಳೆ.

ಇದೇ ಸಮಯಕ್ಕೆ ಸರಿಯಾಗಿ ಹರ್ಷನ ಪತ್ನಿ ಮಾನ್ಸಿ ಬಳಿ ಪ್ರಿಯದರ್ಶಿನಿ ಆರ್ಯವರ್ಧನ್ ಹಾಗೂ ಅನು ಸಂಬಂಧದ ಬಗ್ಗೆ ವಿಚಾರಿಸಿದ್ದಾಳೆ. ಆಗ ಆಕೆ ಹೇಳಿದ ವಿಚಾರಗಳನ್ನು ಕೇಳಿ ಪ್ರಿಯಾ ಶಾಕ್ ಆಗಿದ್ದಾಳೆ. ಝೇಂಡೆ ಹೇಳಿದ ರೀತಿಯಲ್ಲೇ ಮಾನ್ಸಿ ಕೂಡ ಹೇಳಿದ್ದಾಳೆ. ಈ ಕಾರಣಕ್ಕೆ ಪ್ರಿಯದರ್ಶಿನಿ ತಲೆಯಲ್ಲಿ ಹುಳ ಬಿಟ್ಟಂತೆ ಆಗಿದೆ. ಯಾವುದೇ ಕಾರಣಕ್ಕೂ ನಿಜ ವಿಚಾರ ಹೇಳಲೇ ಬಾರದು ಎನ್ನುವ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ. ಹೀಗಾಗಿ ಸತ್ಯ ಮತ್ತಷ್ಟು ದಿನ ಒಳಗೇ ಇರಲಿದೆ.

TV9 Kannada


Leave a Reply

Your email address will not be published.