ರವಿಚಂದ್ರನ್ ಅಭಿನಯದ ‘ದೃಶ್ಯ’ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾದ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಅನಾವರಣ ಮಾಡಿದರು. ಬಳಿಕ ಮಾತಾಡಿದ ಸುದೀಪ್, ನನಗೆ ತಂಗಿ ತಮ್ಮ ಇಲ್ಲ. ಹಾಗಾಗಿ ರವಿ ಸಾರ್ ಮಕ್ಕಳೇ ಎಲ್ಲ. ಇವರ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದು ಖುಷಿ ತಂದಿದೆ ಎಂದರು.
‘ದೃಶ್ಯ 2’ ಸಿನಿಮಾದ ನಾಯಕ ರವಿಚಂದ್ರನ್ ಮತ್ತು ನಾಯಕಿ ನವ್ಯಾ ನಾಯರ್. ಪುತ್ರಿ ಪಾತ್ರದಲ್ಲಿ ನಟಿ ಆರೋಹಿ ನಾರಾಯಣ್ ಅಭಿನಯಿಸಿದ್ದಾರೆ. ಸಿನಿಮಾದ ಟ್ರೇಲರ್ ಸಾಕಷ್ಟು ಸಸ್ಪೆನ್ಸ್ಗಳಿಂದ ಕೂಡಿದೆ. ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ.