ಬೆಂಗಳೂರು: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಅವರು ಒಬ್ಬರಿಗೆ ಕುಟುಂಬದಲ್ಲಿ ಎರಡೂ ಮಕ್ಕಳಿಗಿಂತ ಹೆಚ್ಚಿದ್ದರೆ ಅವರಿಗೆ ಸರ್ಕಾರಿ ಸೌಲಭ್ಯಗಳು ಸಿಗೋದಿಲ್ಲ ಎಂಬ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರು, ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿ ಕುರಿತಂತೆ ನ್ಯೂಸ್​ಫಸ್ಟ್​​ನೊಂದಿಗೆ ಮಾತನಾಡಿದ ಜಮೀರ್ ಅವರು, ಕಾಯ್ದೆಯನ್ನು ಜಾರಿ ಮಾಡಲು ಉತ್ತರ ಪ್ರದೇಶದಲ್ಲಿ ಮುಂದಾಗಿದ್ದಾರೆ. ಆದ್ರೆ ಇನ್ನೂ ಕಾಯ್ದೆ ಜಾರಿ ಮಾಡಿಲ್ಲ. ಜನಸಂಖ್ಯೆಯನ್ನು ಕಡಿಮೆ ಮಾಡಬೇಕು ಅಂತಾ ಏನೋ ಮಾಡಲು ಹೊರಟ್ಟಿದ್ದಾರೆ. 20 ವರ್ಷದ ಹಿಂದೆ ಯಾರಿಗಾದ್ರು ನಿನಗೆ ಎಷ್ಟು ಮಂದಿ ಅಣ್ಣ-ತಮ್ಮಂದಿರು ಎಂದರೇ 8-10 ಅಂತಾ ಹೇಳುತ್ತಿದ್ದರು. ಮುಸ್ಲಿಮರಿಗೆ ಮಾತ್ರ ಅಷ್ಟು ಮಕ್ಕಳು ಇರುತ್ತಿರಲಿಲ್ಲ. ಈಗ ಜನರಿಗೆ ಜನಸಂಖ್ಯೆ ಬಗ್ಗೆ ಜಾಗೃತಿ ಬಂದಿದ್ದು, ಎಲ್ಲರೂ 2-3 ಮಕ್ಕಳು ಸಾಕು ಎಂದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಯ್ದೆ ತರುವ ಅಗತ್ಯವೇನಿದೆ ಎಂದು ನಾನು ಬಿಜೆಪಿ ನಾಯಕರಿಗೆ ಕೇಳುತ್ತೇನೆ ಎಂದರು.

ಈಗ ಸರ್ಕಾರ 2 ಮಕ್ಕಳಿಗಿಂತ ಜಾಸ್ತಿ ಇದ್ದರೇ ಏನೂ ಸೌಲಭ್ಯ ಕೊಡೋದಿಲ್ಲ ಅಂತಾ ಹೇಳ್ತಿದ್ದಾರೆ. ಆದರೆ ಶ್ರೀಮಂತರು ಅನುಕೂಲವಾಗಿ ಇರುವವರು ಎಷ್ಟಾದ್ರು ಮಕ್ಕಳು ಮಾಡಿಕೊಳ್ಳಬಹುದು. ಇದು ತಾರತಮ್ಯ ಅಲ್ವಾ.. ಮುಸ್ಲಿಂ ಸಮುದಾಯದ ಜನಸಂಖ್ಯೆ ಜಾಸ್ತಿ ಇದೆ ಅಂತಾ ಹೇಳಿ.. ಹಿಂದೂಗಳನ್ನು ಒಂದು ಮಾಡಲು ಹೋಗುತ್ತಿದ್ದಾರೆ. ಇದೆಲ್ಲಾ ರಾಜಕೀಯ ಗಿಮಿಕ್​ ಅಷ್ಟೇ. ಆದರೆ ಇವರಿಗೆ ಅಭಿವೃದ್ಧಿ ಬಗ್ಗೆ ಕಡೆ ಗಮನ ಇಲ್ಲ. ರಾಜ್ಯದಲ್ಲೇ ತಗೊಂಡರೂ.. ವ್ಯಾಕ್ಸಿನ್​ ಬಗ್ಗೆ ಕೋಟಿ ಕೋಟಿ ಖರ್ಚು ಮಾಡಿ ಜಾಹೀರಾತು ಕೊಡುತ್ತಿದ್ದಾರೆ. ಆದರೆ ಜನರಿಗೆ ವ್ಯಾಕ್ಸಿನ್​ ಸಿಗ್ತಾನೆ ಇಲ್ಲ.

ಮಕ್ಕಳು ಜಾಸ್ತಿ ಮಾಡಿಕೊಳ್ಳಲು ತಾಕತ್ ಇದ್ರೆ ಮಾಡಿಕೊಳ್ಳುತ್ತಾರೆ. ಕಾಯ್ದೆಯನ್ನು ಮುಸ್ಲಿಮರನ್ನು ಗುರಿಯಾಗಿಸಿಕೊಂಡೆ ಜಾರಿ ಮಾಡಲು ಮುಂದಾಗಿದ್ದಾರೆ. ಆದರೆ ಬಿಜೆಪಿ ಸರ್ಕಾರದ ಬಗ್ಗೆ ನಿರೀಕ್ಷೆಯೇ ಇಲ್ಲ. ರಾಜ್ಯದಲ್ಲಿ ಕೋವಿಡ್​ಗೆ 30 ಸಾವಿರ ಮಾತ್ರ ಸತ್ತಿದ್ದಾರೆ ಅಂತಿದ್ದಾರೆ.. ಆದರೆ 1 ಕೋಟಿಗೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸರ್ಕಾರ ಪರಿಹಾರ ಕೊಡಲು ತಾಂತ್ರೀಕ ಕಾರಣ ಹೇಳಿ ನಿರ್ಬಂಧಗಳನ್ನು ಹಾಕಿದೆ.

ಮಕ್ಕಳನ್ನು ಸಾಕೋ ತಾಕತ್ ಇದ್ರೆ, ನಾನು ಎಷ್ಟಾದ್ರು ಮಕ್ಕಳು ಮಾಡ್ಕೋಳ್ತೀನಿ.. ನೀವು ಕಾನೂನು ತಂದರೂ ಮಾಡೇ ಮಾಡುತ್ತಾರೆ. ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ಚುನಾವಣೆ ಇದೆ.  ಆದ್ದರಿಂದಲೇ ಇಷ್ಟೆಲ್ಲಾ ಗಿಮಿಕ್​​ ಮಾಡ್ತಿದ್ದಾರೆ. ಕರ್ನಾಟಕದಲ್ಲೂ ಕಾಯ್ದೆ ಜಾರಿ ಮಾಡಲು ಮುಂದಾದರೇ ನಾನು ಹಾಗೂ ಕಾಂಗ್ರೆಸ್​ ಪಕ್ಷ ಕೂಡ ವಿರೋಧ ಮಾಡುತ್ತದೆ ಎಂದರು.

The post ‘ನನಗೆ ತಾಕತ್​​ ಇದ್ಯಾ.. ಎಷ್ಟಾದ್ರು ಮಕ್ಕಳು ಮಾಡ್ಕೋಳ್ತೀನಿ’ ಜನಸಂಖ್ಯೆ ನಿಯಂತ್ರಣ ವಿರುದ್ಧ ಜಮೀರ್ ಕೆಂಡ appeared first on News First Kannada.

Source: newsfirstlive.com

Source link