‘ನನಗೆ ನಿನ್ನ ಮೇಲೆ ಫೀಲಿಂಗ್ಸ್​ ಇದೆ’; ರಾಕೇಶ್​ಗೆ ನೇರವಾಗಿ ಹೇಳಿದ ಸೋನು ಗೌಡ | Sonu Gowda Express her Feeling For Rakesh Adiga In Bigg Boss House Kannada


ಸೋನು ಹಾಗೂ ರಾಕೇಶ್ ಮಧ್ಯೆ ಸಾಕಷ್ಟು ಮಾತುಕತೆ ನಡೆದಿದೆ. ಈ ಕಾರಣದಿಂದ ಇಬ್ಬರ ನಡುವೆ ಆಪ್ತತೆ ಬೆಳೆದಿದೆ.

ಸೋನು ಗೌಡ (Sonu Gowda) ಅವರು ಬಿಗ್ ಬಾಸ್ ಮನೆಯಲ್ಲಿ ಸುದ್ದಿ ಆಗುತ್ತಿದ್ದಾರೆ. ಅವರು ಮನೆಯಲ್ಲಿ ಸಾಕಷ್ಟು ಬಾರಿ ಕಣ್ಣೀರು ಹಾಕಿದ್ದಾರೆ. ಈಗ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸೋನುಗೆ ರಾಕೇಶ್​ ಅಡಿಗ (Rakesh Adiga) ಅವರ ಮೇಲೆ ಭಾವನೆಗಳು ಹುಟ್ಟಿಕೊಳ್ಳುತ್ತಿವೆ. ಅದನ್ನು, ಅವರು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಹೈಲೈಟ್ ಆಗುತ್ತಿದೆ. ರಾಕೇಶ್ ಅವರು ಈ ವಿಚಾರದಲ್ಲಿ ತಟಸ್ಥವಾಗಿ ಪ್ರತಿಕ್ರಿಯಿಸಿದ್ದಾರೆ.

ಬಿಗ್ ಬಾಸ್ ಆರಂಭದಲ್ಲಿ ಸೋನು ಗೌಡ ತಮಗಾದ ಅವಮಾನ ಬಗ್ಗೆ ಹೇಳಿಕೊಂಡಿದ್ದರು. ಈ ವೇಳೆ ಅತ್ತಿದ್ದರು. ಆ ಸಂದರ್ಭದಲ್ಲಿ ರಾಕೇಶ್ ಅಡಿಗ ಅವರು ಸೋನುಗೆ ಸಮಾಧಾನ ಮಾಡಿದ್ದರು. ನೀನು ಧೈರ್ಯವಾಗಿ ಮುನ್ನಡೆಯಬೇಕು ಎಂದು ಅವರಿಗೆ ಸ್ಫೂರ್ತಿ ತುಂನಿದ್ದರು. ನಂತರ ಸೋನು ಹಾಗೂ ರಾಕೇಶ್ ಮಧ್ಯೆ ಸಾಕಷ್ಟು ಮಾತುಕತೆ ನಡೆದಿದೆ. ಈ ಕಾರಣದಿಂದ ಇಬ್ಬರ ನಡುವೆ ಆಪ್ತತೆ ಬೆಳೆದಿದೆ.

ರಾಕೇಶ್ ಅವರು ಎಲ್ಲರ ಜತೆಯೂ ಫ್ಲರ್ಟ್ ಮಾಡುತ್ತಿದ್ದಾರೆ. ಸ್ಫೂರ್ತಿ ಗೌಡ ಅವರ ಜತೆ ಅವರು ಕ್ಲೋಸ್ ಆಗಿದ್ದಾರೆ. ಈ ವಿಚಾರಕ್ಕೆ ಸೋನು ಗೌಡ ಅವರು ಸಖತ್ ಉರಿದುಕೊಳ್ಳುತ್ತಿದ್ದಾರೆ. ಇದನ್ನು ಸೋನು ಅವರು ಓಪನ್ ಆಗಿಯೇ ತೋರಿಸಿದ್ದಾರೆ.

ರೂಪೇಶ್ ಶೆಟ್ಟಿ ಬಳಿ ಬಂದ ಸೋನು ಗೌಡ, ‘ನನಗೆ ರಾಕೇಶ್ ಇಷ್ಟವಾಗಿದ್ದಾನೆ. ಆದರೆ, ಆತ ಎಲ್ಲರ ಜತೆಯೂ ಫ್ಲರ್ಟ್ ಮಾಡುತ್ತಾನೆ. ಅದು ನನಗೆ ಇಷ್ಟವಿಲ್ಲ’ ಎಂದರು. ಆ ಬಳಿಕ ರಾಕೇಶ್ ಬಳಿ ತೆರಳಿದ ಸೋನು ಗೌಡ, ‘ನಿನ್ನ ಮೇಲೆ ನಿಜಕ್ಕೂ ಫೀಲಿಂಗ್ಸ್​ ಇದೆ’ ಎಂದರು. ಇದಕ್ಕೆ ರಾಕೇಶ್​ ‘ನಿಜನಾ?’ ಎಂದು ಮರು ಪ್ರಶ್ನೆ ಮಾಡಿದ್ದರು. ‘ನಿನ್ನ ಮೇಲೆ ಫೀಲಿಂಗ್ಸ್​ ಇದೆ. ಬೇಕು ಅಂದರೆ ಒಪ್ಪಿಕೋ, ಇಲ್ಲ ಅಂದ್ರೆ ಇಲ್ಲ. ನಾನು ಹೇಳಬೇಕು ಅನ್ನಿಸ್ತು ಹೇಳಿದೆ’ ಎಂದರು ಸೋನು. ಇದಕ್ಕೆ ರಾಕೇಶ್ ಪ್ರತಿಕ್ರಿಯಿಸಿದ್ದು, ‘ನಿನ್ನ ಫೀಲಿಂಗ್ಸ್​​ ಜತೆ ಆಡಲ್ಲ’ ಎಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *