ನನಗೆ ಸುಕೃತಾ ಜತೆ ಮದುವೆ ಫಿಕ್ಸ್​ ಆಗಿದೆ ಎಂದ ಬಿಗ್​ ಬಾಸ್​ ಶೈನ್ ಶೆಟ್ಟಿ | Shine Shetty Funny conversation about Marriage in Anubandha Awards Making Video

ನನಗೆ ಸುಕೃತಾ ಜತೆ ಮದುವೆ ಫಿಕ್ಸ್​ ಆಗಿದೆ ಎಂದ ಬಿಗ್​ ಬಾಸ್​ ಶೈನ್ ಶೆಟ್ಟಿ

ಶೈನ್​ ಶೆಟ್ಟಿ

ಶೈನ್​ ಶೆಟ್ಟಿ ಹೆಸರು ಕೇಳಿದ್ರೆ ಸಾಕಷ್ಟು ಹುಡುಗಿಯರಿಗೆ ಖುಷಿ ಆಗುತ್ತದೆ. ಅವರು ಬಿಗ್​ ಬಾಸ್​ ಮನೆಗೆ ಎಂಟ್ರಿ ಪಡೆದು, ವಿನ್ನರ್​ ಆಗಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡರು. ತಮ್ಮ ಮಾತಿನ ಮೂಲಕ, ಸ್ಟೈಲ್​ ಮೂಲಕ ಸಾಕಷ್ಟು ಹುಡುಗಿಯರ ಹೃದಯ ಕದ್ದಿದ್ದಾರೆ ಅವರು. ಈಗ ಅವರು ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ತಮಗೆ ಸುಕೃತಾ ಎಂಬುವವರ ಜತೆ ಮದುವೆ ಫಿಕ್ಸ್​ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಂತ ಇದು ತೆರೆಯ ಹಿಂದಿನ ವಿಚಾರ ಅಲ್ಲವೇ ಅಲ್ಲ.

ಕಲರ್ಸ್​ ಕನ್ನಡ ವಾಹಿನಿ ಅನುಬಂಧ ಅವಾರ್ಡ್ಸ್​​ ಮೂಲಕ ಪ್ರೇಕ್ಷಕರ ಎದುರು ಬರುತ್ತಿದೆ. ಕಲರ್ಸ್​ನಲ್ಲಿ ಪ್ರಸಾರವಾದ ಮತ್ತು ಪ್ರಸಾರವಾಗುತ್ತಿರುವ ಧಾರಾವಾಹಿ ಕಲಾವಿದರು ಹಾಗೂ ರಿಯಾಲಿಟಿ ಶೋಗಳ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಭರಪೂರ ಮನರಂಜನೆ ಈ ಕಾರ್ಯಕ್ರಮದಲ್ಲಿ ಇರಲಿದೆ. ಪ್ರತಿ ವರ್ಷವೂ ಈ ಕಾರ್ಯಕ್ರಮ ನಡೆದು ಬಂದಿದೆ. ಇದನ್ನು ವಾಹಿನಿ ಕುಟುಂಬದ ಕಾರ್ಯಕ್ರಮ ಎಂದೇ ಹೇಳುತ್ತದೆ. ಬಿಗ್​ ಬಾಸ್​ ಮನೆ ಪ್ರವೇಶಿಸುವ ಮೂಲಕ ಶೈನ್​ ಶೆಟ್ಟಿ ಕೂಡ ಕಲರ್ಸ್​ ಕನ್ನಡ ವಾಹಿನಿಯ ಭಾಗವಾದರು. ಈ ಕಾರಣಕ್ಕೆ ಅವರು ಅನುಬಂಧ ಅವಾರ್ಡ್​ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

ಅಕ್ಟೋಬರ್​ 15,16,17ರಂದು ಸಂಜೆ 7ಗಂಟೆಗೆ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಅನುಬಂಧ ಅವಾರ್ಡ್​ ಅನ್ನೋದು ತುಂಬಾನೇ ದೊಡ್ಡ ಕಾರ್ಯಕ್ರಮ. ಹೀಗಾಗಿ, ಇದರ ಮೇಕಿಂಗ್​ಗೆ ಹೆಚ್ಚಿನ ಸಮಯ ಹಿಡಿದಿರುತ್ತದೆ. ಈ ಕಾರಣಕ್ಕೆ ವಾಹಿನಿ ಇದರ ಮೇಕಿಂಗ್ ವಿಡಿಯೋ ಪ್ರಸಾರ ಮಾಡುತ್ತಿದೆ. ಭಾನುವಾರ (ಅಕ್ಟೋಬರ್​ 10) ಸಂಜೆ 4:30ಕ್ಕೆ ಮೇಕಿಂಗ್​ ಪ್ರಸಾರವಾಗಲಿದೆ.

ಅನುಬಂಧ ಅವಾರ್ಡ್ಸ್​ ಕಾರ್ಯಕ್ರಮದ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದರಲ್ಲಿ, ಯುವತಿ ಒಬ್ಬಳು ಬಂದು ಶೈನ್​ ಶೆಟ್ಟಿ ಮೈ ಮೇಲೆ ಬೀಳುತ್ತಾಳೆ. ಈ ವೇಳೆ ಶೈನ್​ ಶೆಟ್ಟಿ, ಇಲ್ಲ ನನಗೆ ಸುಕೃತಾ ಎಂಬುವವರ ಜತೆ ಮದುವೆ ಫಿಕ್ಸ್​ ಆಗಿದೆ ಎಂದು ಹೇಳುತ್ತಲೇ ಸುಕೃತಾಗೆ ಕರೆ ಮಾಡಿ ಮುದ್ದು ಎಂದೆಲ್ಲ ಕರೆದಿದ್ದಾರೆ. ಈ ವಿಡಿಯೋ ಮಾಡಿದ್ದೇಕೆ? ಎಂಬಿತ್ಯಾದಿ ಪ್ರಶ್ನೆಗೆ ಮೇಕಿಂಗ್​ನಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ:  ಅಳಿಸಿದ್ದಾಯ್ತು, ನಗಿಸಿದ್ದಾಯ್ತು.. ಈಗ ಭಯ ಹುಟ್ಟಿಸುವ ಲುಕ್​ನಲ್ಲಿ ಶ್ರುತಿ; ಹುಟ್ಟುಹಬ್ಬಕ್ಕೆ ಖಡಕ್​ ಪೋಸ್ಟರ್​

ಕನ್ನಡ ಬಿಗ್ ಬಾಸ್​ನಿಂದ ಹೊರ ಬಂದ ರಘು ಗೌಡ ಗತಿ ನೋಡಿ ನಕ್ಕ ಶೈನ್​ ಶೆಟ್ಟಿ

TV9 Kannada

Leave a comment

Your email address will not be published. Required fields are marked *