ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ವಿರುದ್ಧ ಮತ್ತೊಂದು ಹಲ್ಲೆ ಆರೋಪ ಕೇಳಿ ಬಂದಿದೆ. ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ತಡರಾತ್ರಿ ನಲಪಾಡ್ ಆ್ಯಂಡ್ ಟೀಂ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ಸಂಬಂಧ ಮಾತಾಡಿದ ನಲಪಾಡ್ ನನಗ್ಯಾಕೊ ಭಯ ಆಗ್ತಾ ಇದೆ ಎಂದಿದ್ದಾರೆ.
ನ್ಯೂಸ್ಫಸ್ಟ್ ಜೊತೆಗೆ ಮಾತನಾದ ನಲಪಾಡ್ ಈ ರೀತಿಯ ಯಾವುದೇ ವಿಚಾರಗಳು ಆಗಿಲ್ಲ. ನಮ್ಮಲ್ಲಿ ಅಂತಾ ಯಾವುದೇ ಜಗಳಗಳು ನಡೆದಿಲ್ಲ. ಊಹಾಪೊಹದ ಮೇಲೆ ಕೆಲವರು ಈ ರೀತಿಯಲ್ಲಿ ಸೃಷ್ಟಿ ಮಾಡ್ತಿದ್ದಾರೆ. ಇದನ್ನೇ ಹಿಡ್ಕಂಡು ನನ್ನ ಮೇಲೆ ದಾಳಿ ಮಾಡಿದ್ರೆ ಮುಂದೆ ಏನಾಗುತ್ತೋ ಅಂತಾ ಭಯ ಆಗುತ್ತೆ ಎಂದು ನಲಪಾಡ್ ಆತಂಕ ವ್ಯಕ್ತಪಡಿಸಿದ್ದಾರೆ.