ಕೆಲವರು ಸರ್ಕಾರ ಮಾಡುವ ತಪ್ಪಿನ ವಿರುದ್ಧ ಧ್ವನಿ ಎತ್ತಿದರೆ ಇನ್ನೂ ಕೆಲವರು ಸುಮ್ಮನಿರುತ್ತಾರೆ. ಪ್ರಕಾಶ್ ರಾಜ್ ಅವರು ಧ್ವನಿ ಎತ್ತುವ ಕೆಲಸವನ್ನು ಮುಂದುವರಿಸಲಿದ್ದಾರಂತೆ.

ಪ್ರಕಾಶ್ ರೈ
ನಟ ಪ್ರಕಾಶ್ ರಾಜ್ (Prakash Raj) ಅವರು ಹಲವು ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಎಂತಹ ಪಾತ್ರ ನೀಡಿದರೂ ಅವರು ಮಾಡಿ ತೋರಿಸುತ್ತಾರೆ. ನಟನೆ ಜತೆಗೆ ಅವರು ತಮ್ಮ ರಾಜಕೀಯ ನಿಲುವುಗಳ ಮೂಲಕವೂ ಸುದ್ದಿ ಆಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರವನ್ನು ಅವರು ಟೀಕಿಸುತ್ತಲೇ ಬಂದಿದ್ದಾರೆ. ಸರ್ಕಾರವನ್ನು ಟೀಕಿಸುವುದರಲ್ಲಿ ಅವರು ಎಂದಿಗೂ ಹಿಂಜರಿದಿಲ್ಲ. ಇದು ಅವರ ವೃತ್ತಿ ಜೀವನದ ಮೇಲೆ ಪ್ರಭಾವ ಬೀರಿದೆ. ಅನೇಕರು ಪ್ರಕಾಶ್ ರೈ ಜತೆ ಕೆಲಸ ಮಾಡಲು ನಿರಾಕರಿಸುತ್ತಿದ್ದಾರಂತೆ.
‘ನನ್ನ ರಾಜಕೀಯ ನಿಲುವುಗಳು ನನ್ನ ವೃತ್ತಿ ಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಕೆಲವರು ನನ್ನ ಜತೆ ಸಿನಿಮಾ ಮಾಡುತ್ತಿಲ್ಲ. ನನ್ನನ್ನು ದೂರ ಇಟ್ಟಿದ್ದಾರೆ. ನನ್ನ ಜತೆ ಸಿನಿಮಾ ಮಾಡಬೇಡಿ ಎಂದು ಅವರಿಗೆ ಯಾರೂ ಹೇಳಿಲ್ಲ. ಆದರೆ, ನನ್ನ ಜತೆ ಕೆಲಸ ಮಾಡಿದರೆ ಕೆಲವರು ಅವರನ್ನು ಒಪ್ಪದೆ ಇದ್ದರೆ ಎನ್ನುವ ಭಯ ಅಷ್ಟೇ. ನಾನು ಅಂತಹ ಆಫರ್ಗಳನ್ನು ಬಿಡುವಷ್ಟು ಬಲಶಾಲಿ ಹಾಗೂ ಶ್ರೀಮಂತನಾಗಿದ್ದೇನೆ. ನನ್ನ ಭಯವೇ ಮತ್ತೊಬ್ಬರ ಶಕ್ತಿ ಆಗಬಹುದು’ ಎಂದು ಪ್ರಕಾಶ್ ರೈ ಹಿಂದುಸ್ತಾನ್ ಟೈಮ್ಸ್ ಜತೆ ಮಾತನಾಡಿದ್ದಾರೆ.
ಕೆಲವರು ಸರ್ಕಾರ ಮಾಡುವ ತಪ್ಪಿನ ವಿರುದ್ಧ ಧ್ವನಿ ಎತ್ತಿದರೆ ಇನ್ನೂ ಕೆಲವರು ಸುಮ್ಮನಿರುತ್ತಾರೆ. ಪ್ರಕಾಶ್ ರಾಜ್ ಅವರು ಧ್ವನಿ ಎತ್ತುವ ಕೆಲಸವನ್ನು ಮುಂದುವರಿಸಲಿದ್ದಾರಂತೆ. ‘ಕೆಲ ಕಲಾವಿದರು ಸೈಲೆಂಟ್ ಆಗಿದ್ದಾರೆ. ನಾನು ಅವರನ್ನು ದೂರುವುದಿಲ್ಲ. ಬಹುಶಃ ಅವರು ಅದನ್ನು ಭರಿಸಲಾರರು. ನಾನು ಟೀಕೆಯನ್ನು ಮುಂದುವರಿಸುತ್ತೇನೆ’ ಎಂದಿದ್ದಾರೆ ಪ್ರಕಾಶ್ ರೈ.
ಈ ಮೊದಲು ಕೂಡ ಪ್ರಕಾಶ್ ರಾಜ್ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ರಾಜಕೀಯ ಹಿನ್ನಲೆಯನ್ನು ಗಮನಿಸಿ ಬಾಲಿವುಡ್ನವರು ತಮ್ಮ ಜತೆ ಕೆಲಸ ಮಾಡಲು ಹಿಂದೇಟು ಹಾಕಿದ್ದರು ಎಂಬುದಾಗಿ ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದರು.