ನವದೆಹಲಿ: ದೆಹಲಿಯ ಕೆಲವು ಗೋಡೆಗಳ ಮೇಲೆ ಮೋದಿ ವಿರುದ್ಧ ಗೋಡೆ ಬರಹಗಳನ್ನ ಬರೆಯಲಾಗಿತ್ತು. ಈ ಹಿನ್ನೆಲೆ ತನಿಖೆ ನಡೆಸಿದ ದೆಹಲಿ ಪೊಲೀಸರು 17 ಜನರನ್ನ ಬಂಧಿಸಿ ಅವರ ವಿರುದ್ಧ 21 ಕೇಸ್​​ಗಳನ್ನ ದಾಖಲಿಸಲಾಗಿದೆ. ಈ ಹಿನ್ನೆಲೆ ತನ್ನನ್ನೂ ಬಂಧಿಸಿ ಎಂದು ರಾಹುಲ್ ಗಾಂಧಿ ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮೋದಿ ವಿರುದ್ಧ ಗೋಡೆಬರಹ.. 17 ಜನರ ಬಂಧಿಸಿ 21 ಕೇಸ್ ಹಾಕಿದ ದೆಹಲಿ ಪೊಲೀಸ್

ದೆಹಲಿ ನಗರದ ಗೋಡೆಗಳ ಮೇಲೆ.. ಮೋದಿ ಜೀ ನಮ್ಮ ಮಕ್ಕಳ ಲಸಿಕೆಗಳನ್ನ ವಿದೇಶಗಳಿಗೆ ಯಾಕೆ ಕಳುಹಿಸಿದ್ರಿ..? ಎಂಬ ಗೋಡೆಬರಹಗಳನ್ನ ಬರೆಯಲಾಗಿತ್ತು. ಈ ಹಿನ್ನೆಲೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ನಡೆಯ ವಿರುದ್ಧ ಆಕ್ರೋಶ ಹೊರಹಾಕಿರೋ ರಾಹುಲ್ ಗಾಂಧಿ ‘ಮೋದಿ ಜೀ ನಮ್ಮ ಮಕ್ಕಳ ಲಸಿಕೆಗಳನ್ನ ವಿದೇಶಗಳಿಗೆ ಯಾಕೆ ಕಳುಹಿಸಿದ್ರಿ..?’ ಎಂಬ ಬರಹವಿರುವ ಫೋಟೋವನ್ನ ಹಂಚಿಕೊಂಡು ನನ್ನನ್ನೂ ಅರೆಸ್ಟ್ ಮಾಡಿ ಎಂದು ಬರೆದುಕೊಂಡಿದ್ದಾರೆ.

ಇತ್ತ ರಾಷ್ಟ್ರೀಯ ಕಾಂಗ್ರೆಸ್​ನ ಅಧಿಕೃತ ಟ್ವಿಟರ್ ಖಾತೆ ಪ್ರೊಫೈಲ್ ಫೋಟೋವನ್ನಾಗಿ ಇದೇ ಬರಹವಿರುವ ಫೋಟೋವನ್ನ ಬದಲಿಸಿಕೊಂಡಿದೆ.

The post ನನ್ನನ್ನೂ ಅರೆಸ್ಟ್ ಮಾಡಿ: ರಾಹುಲ್ ಗಾಂಧಿ ಹೀಗೆ ಹೇಳ್ತಿರೋದೇಕೆ..? appeared first on News First Kannada.

Source: newsfirstlive.com

Source link