ಬಿಗ್‌ಬಾಸ್​ ರಂಗೇರುತ್ತಿದ್ದು, ತಾರಾಬಲದ ಎರಡನೇ ಟಾಸ್ಕ್ ‘ಥರಾಥರಾ ಈ ಎತ್ತರ’ದಲ್ಲಿ ಮೊದಲ ಸುತ್ತನ್ನು ಕೆ.ಪಿ ಅರವಿಂದ ನೇತೃತ್ವದ ತಂಡ ಸೂರ್ಯ ಸೇನೆ ಗೆಲ್ಲುತ್ತದೆ. ಇದರಿಂದ ಲ್ಯಾಗ್​ ಮಂಜು ನೇತೃತ್ವದ ಕ್ವಾಟ್ಲೆ ಕಿಲಾಡಿಗಳು ತಂಡದಲ್ಲಿ ಅಸಹನೆ ಉಂಟಾಗುತ್ತದೆ.

ಶುಭಾ ಪೂಂಜಾ ಅವರ ಸಲಹೆಯನ್ನು ಕ್ಯಾಪ್ಟನ್​ ಮಂಜು ಅವರು ತೆಗೆದುಕೊಳ್ಳದ ಕಾರಣಕ್ಕೆ ಶುಭಾ ಅವರು ಬೇಸರ ವ್ಯಕ್ತಪಡಿಸಿದರು. ಶುಭಾ ಪೂಂಜಾ, ಎಲ್ಲದಕ್ಕೂ ನನ್ನನ್ನು ನೆಗ್ಲೆಟ್​ ಮಾಡೋದು ಸರಿಯಲ್ಲ. ನಾನು ಅಷ್ಟು ದಡ್ಡಿಯಲ್ಲ. ನನಗೂ ನನ್ನದೇ ಆದ ಆಲೋಚನೆಗಳಿವೆ. ಸರಿ ಯಾವುದು? ತಪ್ಪು ಯಾವುದು ಅರ್ಥ ಆಗುತ್ತದೆ. ನಾನೇ ಸರಿ ಇದ್ದೀನಿ ಅನ್ನೋದನ್ನ ಮೊದಲು ಬಿಡಿ ಎಂದು ಮಂಜು ಅವರ ವಿರುದ್ಧ ಹರಿಹಾಯ್ದುರು.

The post ನನ್ನನ್ನ ನೆಗ್ಲೆಟ್ ಮಾಡ್ಬೇಡಾ ಮಂಜ.. ನಾನು ದಡ್ಡಿಯಲ್ಲ! appeared first on News First Kannada.

Source: newsfirstlive.com

Source link