– ಕಂಟಕ ಎದುರಾಗಿಸಿದ ಮೂವರು ಯಾರು..?

ಬೆಂಗಳೂರು: ಇನ್ನು ಕೆಲವೇ ದಿನಗಳಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಪದತ್ಯಾಗ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬೆನ್ನಲ್ಲೇ ಬಿಎಸ್‍ವೈ ತಮ್ಮ ಆಪ್ತರ ಬಳಿ ಭಾವಕರಾಗಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ನನ್ನವರೇ ನನಗೆ ಶತ್ರುವಾದರು ಎಂದು ಬಿಎಸ್‍ವೈ ಅವರು ತಮ್ಮ ಆಪ್ತರ ಬಳಿ ಭಾವುಕರಾಗಿದ್ದಾರೆ. ತಾವೇ ಕರೆತಂದ ಮೂವರಿಂದ ಬಿಎಸ್‍ವೈ ಕುರ್ಚಿಗೆ ಕಂಟಕವಾಗಿದೆಯಂತೆ. ತನ್ನ ಬೆನ್ನಿಗೆ ನಿಲ್ತಾರೆ ಅಂದುಕೊಂಡಿದ್ದವರಿಂದಲೇ ಸಿಎಂಗೆ ಸಂಕಷ್ಟ ಎದುರಾಗಿದೆ.

ಆ ಮೂವರು ವ್ಯಕ್ತಿಗಳು ಯಾರು.?
ಬಸನಗೌಡ ಪಾಟೀಲ್ ಯತ್ನಾಳ್: ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ್ ಅಂದು ಬಿಎಸ್‍ವೈ ವಿರೋಧಿ ಬಣದಲ್ಲಿದ್ದರು. ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆ ಅಂದೇ ನೋಟಿಸ್ ನೀಡಲಾಗಿತ್ತು. ಈ ನೋಟಿಸ್‍ನಿಂದ ನೊಂದು ಜೆಡಿಎಸ್‍ಗೆ ಜಂಪ್ ಆದರು. 2018ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ವಾಪಸ್ ಆಗಿದ್ದರು. ಆದರೆ ಈ ಸಂದರ್ಭದಲ್ಲಿ ತೀವ್ರ ವಿರೋಧದ ನಡುವೆಯೂ ಬಿಎಸ್‍ವೈ ಅವರು ಯತ್ನಾಳ್ ರನ್ನು ಪಕ್ಷಕ್ಕೆ ಕರೆತಂದು ವಿಜಯಪುರದಿಂದ ಟಿಕೆಟ್ ಕೊಟ್ಟು ಗೆಲ್ಲಿಸಿದ್ದರು. ಈಗ ಬಿಎಸ್‍ವೈ ವಿರುದ್ಧವೇ ಯತ್ನಾಳ್ ಉಲ್ಟಾ ಹೊಡೆಯುತ್ತಿದ್ದು, ಎಲ್ಲಾ ಕಡೆ ಬಿಎಸ್‍ವೈ ವಿರುದ್ಧ ಮಾತಾಡಿ ಡ್ಯಾಮೇಜ್ ಮಾಡಿದ್ದಾರೆ.

ಸಿ.ಪಿ.ಯೋಗೇಶ್ವರ್: ಬಿಜೆಪಿಯಿಂದ ಕಾಂಗ್ರೆಸ್, ಎಸ್‍ಪಿಗೆ ಹೋಗಿದ್ದ ಸಿಪಿವೈ, ಪಕ್ಷ ಸೇರ್ಪಡೆಗೆ ಮೂಲ ಬಿಜೆಪಿಗರ ವಿರೋಧವಿತ್ತು. ದ್ರೋಹ ಬಗೆದವರು ಬೇಡ ಅಂತಾ ವಿರೋಧ ಉಂಟಾಗಿತ್ತು. ಆದರೂ ಹೈಕಮಾಂಡ್‍ನ್ನು ಒಪ್ಪಿಸಿ ಬಿಎಸ್‍ವೈ ಅವರು ಸಿಪಿವೈಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದರು. ಇದನ್ನೂ ಓದಿ: ನನ್ನ ಪರವಾಗಿ ಯಾರೂ ಪ್ರತಿಭಟನೆಗೆ ಮುಂದಾಗಬಾರದು – ಬಿಎಸ್‍ವೈ ಮನವಿ

2019ರಲ್ಲಿ ಸರ್ಕಾರ ಬರಲು ಯೋಗೇಶ್ವರ್ ಕೂಡ ಕಾರಣರಾಗಿದ್ದರು. 17 ಜನರನ್ನ ಪಕ್ಷಕ್ಕೆ ಕರೆತರುವಲ್ಲಿ ಯೋಗೇಶ್ವರ್ ಪಾತ್ರ ಬಹುಮುಖ್ಯವಾಗಿದ್ದು, ಅದಕ್ಕಾಗಿ ಬಿಎಸ್‍ವೈ ಅವರು ಸಿಪಿವೈಯನ್ನು ಎಂಎಲ್‍ಸಿ ಮಾಡಿ ಸಚಿವ ಸ್ಥಾನ ನೀಡಿದ್ದರು. ಈ ವೇಳೆಯೂ ಬಿಎಸ್‍ವೈ ಅವರು ವಿರೋಧ ಎದುರಿಸಿ ಸಚಿವ ಸ್ಥಾನ ನೀಡಿದ್ದರು. ನಂತರ ಬಿಎಸ್‍ವೈ ವಿರುದ್ಧವೇ ಯೋಗೇಶ್ವರ್ ಬಹಿರಂಗ ಸಮರ ಸಾರಿದ್ದರು.

ಹೆಚ್.ವಿಶ್ವನಾಥ್: ಮೋದಿ, ಬಿಎಸ್‍ವೈಯವರನ್ನು ಬೈದುಕೊಂಡೇ ಬಂದಿದ್ದರು. ಸೈದ್ಧಾಂತಿಕವಾಗಿ ಬಿಜೆಪಿಯ ಕಟ್ಟಾ ವಿರೋಧಿಯಾಗಿದ್ರು. 2014ರ ಲೋಕ ಸಮರದಲ್ಲಿ ಮೋದಿ ವಿರುದ್ಧ ಮಾತಾಡಿದ್ದರು. 17 ಮಂದಿಯನ್ನು ಪಕ್ಷಕ್ಕೆ ಕರೆತರುವಲ್ಲಿ ವಿಶ್ವನಾಥ್ ಪಾತ್ರ ಕೂಡ ಇದ್ದು, ವಿರೋಧದ ನಡುವೆಯೂ ಬಿಎಸ್‍ವೈಯವರು ವಿಶ್ವನಾಥ್ ರನ್ನು ಪಕ್ಷಕ್ಕೆ ಕರೆತಂದರು.

ಬಿಜೆಪಿ ಸೇರ್ಪಡೆಗೆ ಮೂಲ ಬಿಜೆಪಿಗರ ವಿರೋಧವಿತ್ತು. ಬೈಎಲೆಕ್ಷನ್‍ನಲ್ಲಿ ಸೋತರೂ ವಿಶ್ವನಾಥ್ ಕೈಬಿಡದ ಬಿಎಸ್‍ವೈ, ಹೈಕಮಾಂಡ್ ಮುಂದೆ ಪಟ್ಟು ಹಿಡಿದು ಪರಿಷತ್ ಸದಸ್ಯರಾಗಿ ನೇಮಕ ಮಾಡಿದ್ದರು. ಆದರೆ ಇದೀಗ ಬಿಎಸ್‍ವೈ ವಿರುದ್ಧವೇ ವಾಗ್ದಾಳಿ ಮಾಡಿ ಡ್ಯಾಮೇಜ್ ಮಾಡಿದ್ದಾರೆ.  ಇದನ್ನೂ ಓದಿ : ಯಡಿಯೂರಪ್ಪ ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ: ಸುಬ್ರಮಣಿಯನ್ ಸ್ವಾಮಿ

The post ‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್‍ವೈ ಭಾವುಕ..! appeared first on Public TV.

Source: publictv.in

Source link