ಬೆಂಗಳೂರು: ನನಗೆ ನಮ್ಮ ಪಕ್ಷದವರು, ಬೇರೆ ಪಕ್ಷದವರು ಎಂದು ಗೊತ್ತಿಲ್ಲ. ನನ್ ವಿಚಾರ ಏನಂದ್ರೆ ನಾನು ಕೆಲಸ ಮಾಡ್ತಿದೀನಿ. ನನ್ನ ಕೆಲಸದಿಂದ ಏನೋ ತಪ್ಪಾಗುತ್ತಿದೆ, ಇಲ್ಲಂದ್ರೆ ನನ್ನಲ್ಲೇನೋ ಒಂದು ಒಳ್ಳೆ ಗುಣ ಇದೆ. ನನ್ನಲ್ಲಿರೋ ಒಳ್ಳೆ ಗುಣನಾ ಹೋಗಿಸಬೇಕು ಎಂದು ಕೆಲವರು ಪ್ರಯತ್ನ ಮಾಡ್ತಿದಾರೆ ಎಂದರು ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್.
ಹೀಗೆ ಮುಂದುವರಿದು ಮಾತಾಡಿದ ನಲಪಾಡ್, ನಾನು ಫೆಬ್ರವರಿ 1ನೇ ತಾರಿಕು ಅಧ್ಯಕ್ಷ ಆಗ್ತಿನಾ ಇಲ್ಲವೋ ಎಂದು ಕೆಲವರಿಗೆ ಡೌಟ್ ಇದೆ. ಜನವರಿ 31ಕ್ಕೆ ರಕ್ಷಾ ರಾಮಯ್ಯ ಅಧ್ಯಕ್ಷರಾಗಿ ಲಾಸ್ಟ್ ಡೇ. ಈಗಾಗಲೇ ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರು, ನಾನು ಫೆಬ್ರವರಿ 1ನೇ ತಾರೀಕಿನಿಂದ ಸ್ಟೇಟ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಎಂದು ಸೈನ್ ಮಾಡಿದ್ದಾರೆ. ಈ ಟೈಮ್ನಲ್ಲಿ ಇಂಥಾ ಆರೋಪಗಳ ಬರ್ತಿವೆ ಎಂದು ಹೇಳಿದರು.