ಗದಗ: ನನ್ನಿಂದ ಕುಟುಂಬಸ್ಥರಿಗೆಲ್ಲಾ ಕೊರೊನಾ ತಗಲಬಾರದು ಎಂಬ ಕಾರಣಕ್ಕೆ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಮಹಾಂತೇಶ್ ಕುದರಿ (32) ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಹಾಂತೇಶ್ ಕುರ್ತಕೋಟಿ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶಿಕ್ಷಕ ಮಹಾಂತೇಶ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಆದರೆ ಶಿಕ್ಷಕ ಮಾತ್ರ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು. ಕೊರೊನಾ ಪಾಸಿಟಿವ್ ಆಗಿದ್ದರಿಂದಾಗಿ ಮನೆ ಮಂದಿಗೆಲ್ಲಾ ತಗುಲುತ್ತೆ. ಅವರಿಗೆ ನಾನೇ ಕಂಠಕವಾಗಬಹುದು ಎಂದು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ನರೇಗಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ದೂರು ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಗದಗನ ನರೇಗಲ್ ಪಿಎಸ್‍ಐ ಮಾಹಿತಿ ನೀಡಿದ್ದಾರೆ.

The post ನನ್ನಿಂದ ಕುಟುಂಬಸ್ಥರಿಗೆ ಕೊರೊನಾ ತಗಲಬಾರದು- ಶಿಕ್ಷಕ ನೇಣಿಗೆ ಶರಣು appeared first on Public TV.

Source: publictv.in

Source link