ವಂಚಕ ಮೆಹುಲ್ ಚೋಕ್ಸಿ ಸದ್ಯ ಡೊಮಿನಿಕಾದ ಜೈಲಿನಲ್ಲಿ ಬಂಧಿಯಾಗಿದ್ದು, ತನ್ನ ಅಪಹರಣ ಆಗಿದೆ ಅಂತ ವಕೀಲರ ಮೂಲಕ ಅಂಟಿಗುವಾ ಪೊಲೀಸರ ಬಳಿ ದೂರು ದಾಖಲಿಸಿದ್ದಾನೆ.

5 ಪುಟಗಳಲ್ಲಿ ದೂರು ದಾಖಲಿಸಿರುವ ಚೋಕ್ಸಿ, ಅಂಟಿಗುವಾದಿಂದ ತನ್ನನ್ನು ಅಪಹರಣ ಮಾಡಲಾಗಿತ್ತು. ಈ ಅಪಹರಣದ ಹಿಂದೆ ಬರ್ಬಾರಾ ಜಬ್ರಿಕಾ ಎಂಬ ಯುವತಿಯ ಸಹಕಾರ ಇದೆ ಅಂತ ತಿಳಿಸಿದ್ದಾನೆ. ಮೇ 23ರಂದು ಅವಳ ಮನೆಯಿಂದ 8 ರಿಂದ 10 ಜನ ನನ್ನನ್ನು ಅಪಹರಣ ಮಾಡಿದ್ದಾರೆ ಅಂತ ಹೇಳಿದ್ದಾನೆ.

ನನ್ನ ಅಪಹರಣ ಹಿಂದೆ ರಾಜಕಾರಣಿಯೊಬ್ಬರ ಕೈವಾಡವಿದೆ ಅಂತ ಚೋಕ್ಸಿ ದೂರು ಸಲ್ಲಿಸಿದ್ದಾನೆ.

The post ನನ್ನ ಅಪಹರಣವಾಗಿದೆ ಎಂದು ಚೋಕ್ಸಿ ದೂರು, ಯುವತಿ ಕೈವಾಡವೆಂದು ಆರೋಪ appeared first on News First Kannada.

Source: newsfirstlive.com

Source link