ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ ಗಾಂಧಿ.. ನನ್ನ ತಾಯಿಯ ಬಗ್ಗೆ ಅವರು ಹಾಗೇ ಹೇಳಬಾರದಿತ್ತು. ಅವಳು ಹುತಾತ್ಮನ ವಿಧವೆ. ನನ್ನ ಅಮ್ಮ ತಮ್ಮ ಜೀವನವನ್ನ ದೇಶಕ್ಕಾಗಿ ಮುಡಿಪಿಟ್ಟಿದ್ದಾರೆ ಎಂದಿದ್ದಾರೆ.
ಅಮ್ಮನ ಬಗ್ಗೆ ಅಷ್ಟೊಂದು ಕೀಳು ಮಟ್ಟದ ಹೇಳಿಕೆ ನೀಡುವ ಅಗತ್ಯ ಏನಿತ್ತು..? ಅವರನ್ನ ಯಾಕೆ ಈ ಕೀಳು ಮಟ್ಟಕ್ಕೆ ಎಳೆಯಬೇಕು..? ಚುನಾವಣೆಯನ್ನ ಮೌಲ್ಯಗಳ ಆಧಾರದ ಮೇಲೆ, ಐಡಿಯಾಲಜಿಗಳ ಮೇಲೆ, ಪ್ರಚಲಿತ ಘಟನೆಗಳ ಮೇಲೆ ನಡೆಸಲಿ. ಬೇರೆಯವರಿಗೆ ಅವಮಾನ ಮಾಡೋದಲ್ಲ, ಕ್ಷುಲ್ಲಕ ವಿಚಾರಗಳನ್ನ ಇಟ್ಟುಕೊಂಡು ರಾಜಕೀಯ ಮಾಡೋದಲ್ಲ ಎಂದು ಗುಡುಗಿದ್ದಾರೆ.