ನನಗೊಂದು ಸಹಾಯ ಮಾಡಿ, ನನ್ನ ಕಳಿಸಿ, ನನ್ನ ತಮ್ಮ ಅಪ್ಪುನಾ ವಾಪಸ್ಸು ಕರೆಸಿ, ಪುನೀತ್ ಇಲ್ಲದೆ ನನ್ನ ಕೈಯಲ್ಲಿ ಬದುಕೋಗಾಲ್ಲ ಎಂದು ರಾಘಣ್ಣ ಕಣ್ಣೀರು ಹಾಕಿದರು. ಇಂದು ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ಮಾತಾಡಿದ ರಾಘಣ್ಣ, ನಾನು ಮತ್ತು ಶಿವಣ್ಣ ಬೇಗ ಹೋಗಬೇಕಿತ್ತು. ನಮ್ಮನ್ನು ಅವನು ಕಳಿಸಿಕೊಡಬೇಕಿತ್ತು. ನಾವು ಅವನನ್ನು ಕಳಿಸಿಕೊಡಬೇಕಾದ ಪರಿಸ್ಥಿತಿ ಬಂತು ಎಂದು ಕಣ್ಣೀರಿಟ್ಟರು.
ನಾನು ನನ್ನ ಮುಖನಾ ಕನ್ನಡಿಯಲ್ಲಿ ನೋಡಿದ್ರೆ ನಾಚಿಕೆ ಆಗುತ್ತೆ. ನಾನು ಮೊದಲು ಹೋಗಬೇಕಿತ್ತು. ನನ್ನ ಆಯಸ್ಸು ಅವನಿಗೆ ಇರಲಿ ಎಂದು ನಾನಂದೆ. ಈಗ ಅವನ ಆಯಸ್ಸು ನನಗೆ ಕೊಟ್ಟು ಹೊರಟುಬಿಟ್ಟ. ನನಗೆ ಅವನನ್ನು ವಾಪಸ್ಸಿ ಕರೆಸಿಬಿಡಿ ಎಂದು ಗದ್ಗದಿತರಾದರು.