ಬೆಂಗಳೂರು: ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ ಎಂಟು ದಿನಗಳಾಗಿವೆ. ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕುಟುಂಬ ಸಮೇತ ಪುನೀತ್ ರಾಜ್ಕುಮಾರ್ ಸಮಾಧಿ ದರ್ಶನ ಪಡೆದಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ.. ಅಪ್ಪು ಅವರ ಅಕಾಲಿಕ ಮರಣ ಕುಟುಂಬ ವರ್ಗಕ್ಕೆ ಚಿತ್ರರಂಗದವರಿಗೆ, ಕೋಟ್ಯಂತರ ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ. ಅವರ ಸಮಾಜ ಸೇವೆಯನ್ನ ನಾನು ನೋಡಿದ್ದೇನೆ. ರೈತರಿಗೆ ಗೋ ಶಾಲೆ, ಆಶ್ರಮ, ವಿದ್ಯಾಭ್ಯಾಸದ ಖರ್ಚು ಅವೆಲ್ಲಾ ನಮಗೆ ಆದರ್ಶವಾಗಿವೆ. ಅವರ ಮುಂದೆ ನಾವೇನೂ ಅಲ್ಲ ಎಂದಿದ್ದಾರೆ.
ಇನ್ನು ರಾಜ್ಯ ದೀಪಾವಳಿಯ ಸಂಭ್ರಮದಲ್ಲಿದೆ. ಆದರೆ ಅವರ ಅಭಿಮಾನಿಗಳಿಗೆ ಯಾವುದೇ ಹಬ್ಬ ಇಲ್ಲ, ಎಲ್ಲಾ ಕತ್ತಲಾಗಿದೆ. ಗಲ್ಲಿ ಗಲ್ಲಿಗಳಲ್ಲಿ ಇವರ ಫೋಟೋ ಹಾಕಿ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ನನಗೆ ಸರ್ಜರಿಯಾಗಿ ರೆಸ್ಟ್ನಲ್ಲಿದ್ದರೂ ಅವರನ್ನ ನೋಡೋಕೆ ಬಂದೆ. ಇನ್ನು ಮೈಸೂರಿನಲ್ಲಿರುವ ಶಕ್ತಿಧಾಮಕ್ಕೆ ನಾನು ಕೂಡ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.