ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ಸಂಜನಾ ಗಲ್ರಾನಿ ನ್ಯೂಸ್​​ಫಸ್ಟ್​​ನೊಂದಿಗೆ ಮಾತನಾಡಿದ್ದು, ನನಗೆ ಕೊರೊನಾ ಪಾಸಿಟಿವ್ ಬಂದಿರುವುದು ಅಚ್ಚರಿ ಮೂಡಿಸಲಿಲ್ಲ. ಆದರೆ ನನ್ನ ಪತಿ ಡಾ. ಅಜೀಜ್ ಪಾಷಾ ಕೊರೊನಾ ವಾರಿಯರ್ ಆಗಿದ್ದು, ಮಣಿಪಾಲ್​ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ನನಗೆ ಕೊರೊನಾ ಪಾಸಿಟಿವ್ ಬಂದಿತ್ತು ಎಂದು ಹೇಳಿದ್ದಾರೆ.

ನನಗೆ ಏಳನೇ ತರಗತಿಯಿಂದಲೇ ಉಸಿರಾಟದ ಸಮಸ್ಯೆ ಕಾಡಿತ್ತು. ಅಂದಿನಿಂದ ಇಂದಿಗೂ ನನಗೆ ಉಸಿರಾಟದ ಸಮಸ್ಯೆ ಇದೆ. ಆದ್ದರಿಂದ ನಾನು ಇಂದಿಗೂ ಬ್ರೀದಿಂಗ್ ಮಷೀನ್ ಯೂಸ್​ ಮಾಡುತ್ತಿದ್ದೇನೆ. ನನಗೆ ಸ್ವಲ್ಪ ಎದೆ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಇದು ಸ್ವಲ್ಪ ನನಗೆ ಆತಂಕವನ್ನು ಉಂಟು ಮಾಡಿತ್ತು ಅಷ್ಟೇ. ಆದರೆ ಸೋಂಕು ದೃಢವಾದ ಬಳಿಕ ಚಿಕಿತ್ಸೆ ಪಡೆದುಕೊಂಡಿದ್ದರಿಂದ ನಾನು ಇಂದು ಚೇತರಿಕೆ ಆಗಿದ್ದೇನೆ ಎಂದರು.

ಕೊರೊನಾ ಸೋಂಕು ಎಂಬುವುದು ಮನಕುಲಕ್ಕೆ ಶಾಪ ಇದ್ದಂತೆ. ಸಮಸ್ತ ಭಾರತ ಜನರು ಕೊರೊನಾ ಲಸಿಕೆ ಪಡೆದುಕೊಳ್ಳುವವರೆಗೂ ಸೋಂಕು ನಮ್ಮ ಜೀವನದಿಂದ ದೂರ ಆಗಲ್ಲ. ಆದ್ದರಿಂದ ನಾವು ಕೊರೊನಾ ಬಂದಿದೇ ಎಂದು ದೃಢವಾಗುತ್ತಲೇ ಆತಂಕಕ್ಕೆ ಒಳಗಾಗಬಾರದು. ವೈದ್ಯರ ನೆರವು ಪಡೆದುಕೊಂಡು ಸೂಕ್ತ ಚಿಕಿತ್ಸೆ ಪಡೆದರೆ ಸೋಂಕಿನಿಂದ ಗುಣಮುಖವಾಗುವುದು ಎಂದು ಹೇಳಿದ್ದಾರೆ.

The post ನನ್ನ ಗಂಡ ಡಾ. ಅಜೀಜ್ ಪಾಷಾ​ರಿಂದ ನನಗೆ ಕೊರೊನಾ ಬಂತು- ಸಂಜನಾ ಗಲ್ರಾನಿ appeared first on News First Kannada.

Source: newsfirstlive.com

Source link