ರಾಮನಗರ: ಸದ್ಯದಲ್ಲೇ ಎದುರಾಗಲಿರುವ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಈ ಸಂಬಂಧ ಮಾತಾಡಿದ ವಾಟಾಳ್ ನಾಗರಾಜ್, ಪ್ರಜಾಪ್ರಭುತ್ವ ಆಧಾರದ ಮೇಲೆ ಸ್ಪರ್ಧೆ ಮಾಡುತ್ತೇನೆ ಹೊರತು ವ್ಯಾಪಾರಕ್ಕಲ್ಲ ಎಂದರು.
ಇಂದು ವಿಧಾನ ಪರಿಷತ್ ನಲುಗಿದೆ. ಈಗಾಗಿ ಶಕ್ತಿವಂತರು, ಹೋರಾಟಗಾರರು ಬೇಕಾಗಿದ್ದು, ನಾನು ಸ್ಪರ್ಧಿಸುತ್ತೇನೆ. ಗ್ರಾಮ ಪಂಚಾಯತಿಗಳಿಗೆ ಗೌರವ ಬರಬೇಕಾಗಿದೆ, ಶಕ್ತಿ ಬರಬೇಕಿದೆ. ಗ್ರಾಮ ಪಂಚಾಯತಿ ಸದಸ್ಯರಿಗೆ ವೇತನ ಹೆಚ್ಚಿಸಬೇಕು. ಅಧ್ಯಕ್ಷರಿಗೆ 10 ಸಾವಿರ, ಉಪಾಧ್ಯಕ್ಷರಿಗೆ 7 ಸಾವಿರ ಹಾಗೂ ಸದಸ್ಯರಿಗೆ 5 ಸಾವಿರ ಸಂಬಳ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ನಾವು ಅವರ ಪರವಾಗಿ ಹೋರಾಟ ಮಾಡಲು ಸಿದ್ದ. ಬಡವರ ಪರವಾಗಿ, ಪ್ರಜಾಪ್ರಭುತ್ವದ ಪರವಾಗಿ ಹೋರಾಟ ಮಾಡುತ್ತೇನೆ. ನನ್ನ ಗೆಲುವು ರಾಜ್ಯದ ಗೆಲುವು, ಪ್ರಜಾಪ್ರಭುತ್ವದ ಗೆಲುವು ಎಂದರು ವಾಟಾಳ್.
ಇದನ್ನೂ ಓದಿ: ಕೃಷಿ ಕಾಯ್ದೆಗಳು ರೈತರ ಮರಣ ಶಾಸನ.. ಬಂದ್ ಬೇಕೆಬೇಕ್ -ವಾಟಾಳ್ ನಾಗರಾಜ್