ರಾಮನಗರ: ತೀವ್ರ ವಿರೋಧಗಳ ಬಳಿಕ ಕಾಂಗ್ರೆಸ್ ನಾಯಕರು ಪಾದಯತ್ರೆಗೆ ಬ್ರೇಕ್ ಹಾಕಿದ್ದಾರೆ. ಕಾಂಗ್ರೆಸ್ ಈ ನಿರ್ಧಾರಕ್ಕೂ ಮುನ್ನ ನ್ಯೂಸ್ಫಸ್ಟ್ ಜೊತೆ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ.. ನಮ್ಮ ತಾಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ತುಂಬಾನೇ ಕಡಿಮೆ ಇದೆ. ಒಂದು ವೇಳೆ ಕೊರೊನಾ ಸೋಂಕು ಹೆಚ್ಚಾದರೆ ಅದಕ್ಕೆ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ನಾಯಕರೇ ಕಾರಣ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ನವರು ಪಾದಯಾತ್ರೆ ಮೂಲಕ ಕೊರೊನಾ ಹರಡಿಸುವ ಕೆಲಸವನ್ನ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರೋದ್ರಿಂದ ಈಗ ಪಾದಯಾತ್ರೆ ಮಾಡುವಂತಹ ಉದ್ದೇಶ ಏನಿತ್ತು? ಪಾದಯಾತ್ರೆಯನ್ನ ಎರಡ್ಮೂರು ತಿಂಗಳು ಬಿಟ್ಟು ಮಾಡಿದರೆ ಆಗುತ್ತಿರಲಿಲ್ಲವಾ? ಅರ್ಜೆಂಟ್ ಆಗಿ ಪಾದಯಾತ್ರೆ ಮಾಡುವ ಅವಶ್ಯಕತೆ ಏನಿತ್ತು? ಇವರು ಕೊರೊನಾವನ್ನ ಹರಡಿಸುತ್ತಿದ್ದಾರೆ.
ನನ್ನ ತಾಲೂಕಿನಲ್ಲಿ ಕೊರೊನಾ ಹೆಚ್ಚಾದರೆ ಇವರೇ ಕಾರಣ. ಖಂಡಿತವಾಗಿಯೂ ನಮಗೆ ಕೊರೊನಾ ಬಗ್ಗೆ ಭಯ ಶುರುವಾಗಿದೆ. ಇವರಿಗೆ ಈ ಟೈಂನಲ್ಲಿ ಯಾಕೆ ಬೇಕಾಗಿತ್ತು? ಜನರ ಜೀವ ಉಳಿಸೋದು ಫಸ್ಟ್. ರಾಜಕಾರಣ ಮಾಡೋದು ಆಮೇಲೆ ಎಂದು ವಾಗ್ದಾಳಿ ನಡೆಸಿದ್ದಾರೆ.