ಕೋವಿಡ್ ಮಹಾಮಾರಿ ಮನುಜ ಕುಲವನ್ನ ನುಂಗಿ ನೀರು ಕುಡಿಯುತ್ತಿದೆ. ಸದಾ ಟ್ವೀಟ್ಟರ್ ಲೋಕದಲ್ಲಿ ಸಕ್ರಿಯರಾಗಿ ತಮ್ಮ ಮನದ ಮಾತುಗಳನ್ನ ಅಕ್ಷರ ರೂಪದಲ್ಲಿ ಇಳಿಸುವ ನವರಸ ನಾಯಕ ಜಗ್ಗೇಶ್ ಈ ಬಾರಿ ತಮ್ಮ ಅಕ್ಷರಗಳಲ್ಲೇ ಕಣ್ಣೀರಾಗಿದ್ದಾರೆ. ಕಾರಣ ಜಗೇಶ್ ಅವರ ಆತ್ಮೀಯರೊಬ್ಬರ ಮಗ ಕೋವಿಡ್​ನಿಂದಾಗಿ ಸಾವನ್ನಪ್ಪಿದ್ದಾರೆ.

ಬಹು ವರ್ಷಗಳಿಂದ ಜಗೇಶ್ ಅವರ ಜೊತೆ ಮಾದೇಗೌಡ ಎಂಬುವ ಮೇಕಪ್ ಕಲಾವಿದರು ಕೆಲಸ ಮಾಡ್ತಿದ್ದಾರೆ. ಜಗ್ಗೇಶ್ ಅವರ ಬಗ್ಗೆ ಏನೇ ಕೇಳ ಬೇಕು ಅಂದ್ರು ಮಾದೇಗೌಡ್ರೆ ಮೊದಲು ಪರಿಶಿಲಿಸಿ ಜಗ್ಗೇಶ್ ಅವರಿಗೆ ವಿಷಯ ಮುಟ್ಟಿಸೋದು. ಇದೀಗ ಜಗ್ಗೇಶ್ ಅವರ ಆತ್ಮೀಯ ಮಾದೇಗೌಡ್ರ ಮಗ ಕೋವಿಡ್​​ಗೆ ಬಲಿಯಾಗಿದ್ದಾನೆ. ನನ್ನ ಮಗನಿಗಿಂತ 1 ವರ್ಷ ಕಿರಿಯ ಆತ. ಅವನಿಗೆ ಮಗಳು ಹುಟ್ಟಿ 6 ತಿಂಗಳು ಆಗಿದೆ. ಹೇಗೆ ಸಹಿಸುತ್ತಾನೆ ಈ ದುಃಖ ಮಾದೆಗೌಡ! ನನ್ನ ದೇಹವೆ ಸುಟ್ಟಂತೆ ಆಗಿದೆ1 ಕ್ರೂರವಿಧಿ ಇದು ಎಂದು ಬರೆದುಕೊಂಡಿದ್ದಾರೆ ಜಗೇಶ್​​..

ಜಗೇಶ್ ಟ್ವೀಟ್ ನುಡಿಗಳು
ನನ್ನ ಉಸಿರಿನಂತೆ ಬೆನ್ನಿಗೆ ನಿಂತು ನನ್ನ ಬದುಕಿನ ಬಹುಭಾಗ ಒಡಹುಟ್ಟಿದವನಂತೆ ಬಾಳಿದವ ಮಾದೇಗೌಡ. ಅವನ ಮಗನ ಈ ಪೀಡೆ ರೋಗ ನುಂಗಿ ಹಾಕಿತು. ಇದ್ದವನು ಒಬ್ಬನೆ ಮಗ ಮಸಣ ಸೇರಿಬಿಟ್ಟ. ಬಹಳ ನೊಂದು ಹೋಗಿರುವೆ. ನನ್ನ ಮಗನಿಗಿಂತ 1 ವರ್ಷ ಕಿರಿಯ ಅವನಿಗೆ ಮಗಳು ಹುಟ್ಟಿ 6 ತಿಂಗಳು ಆಗಿದೆ. ಹೇಗೆ ಸಹಿಸುತ್ತಾನೆ ದುಃಖ ಮಾದೆಗೌಡ. ನನ್ನ ದೇಹವೇ ಸುಟ್ಟಂತೆ ಆಗಿದೆ. ಕ್ರೂರವಿಧಿ.

ಕೆಲದಿನ ನಾ ಇಲ್ಲಿಂದ ದೂರ ಉಳಿಯುವೆ ಮಾದೇಗೌಡನ ಮಗನ ಸಾವಿನಿಂದ ನನ್ನ ಮನಸ್ಸು ಒಡೆದು ಚೂರಾಗಿದೆ. ಏನು ಮಾಡಿದರು ಸಮಾಧಾನ ಆಗುತ್ತಿಲ್ಲ. ಬಂಗಾರದಂತ ನನ್ನ ಆತ್ಮೀಯ ಹೃದಯಗಳೇ ನಿಮ್ಮ ನೀವು ಕಾಪಾಡಿಕೊಳ್ಳಿ. ಯಾರು ನಮಗಾಗಿ ಬರರು ಇಂದಿನ ಯಾಂತ್ರಿಕ ಚಿಂತನೆ ಜಗದಲ್ಲಿ. ಸ್ವಾರ್ಥ ಮೋಸ ಧನಧಾಹಿ ಜಗತ್ತು. ಒಳ್ಳೆಯವರಿಗಲ್ಲ ಇಂದಿನ ಜಗತ್ತು. ಕ್ಷಮೆಯಿರಲಿ.

The post ‘ನನ್ನ ದೇಹವೇ ಸುಟ್ಟಂತೆ ಆಗಿದೆ’ ನಟ ಜಗ್ಗೇಶ್ ಭಾವುಕರಾಗಿದ್ದೇಕೆ..? appeared first on News First Kannada.

Source: newsfirstlive.com

Source link