ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಪರೀಕ್ಷೆ ಮಾಡಬೇಕು ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ.. ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಾಪ.. ಅವರಿಗೆ ಅವರಿಗೆ ಪಾಪ ಅನ್ನಬೇಕೋ, ಏನ್ ಅನ್ನಬೇಕೋ ಗೊತ್ತಿಲ್ಲ. ಅವರದ್ದು ಸ್ವಂತ ಅಭಿಪ್ರಾಯಗಳು ಯಾವುದೂ ಇರಲ್ಲ. ಪಿಯುಸಿ ಪರೀಕ್ಷೆ ಮುಂದಕ್ಕೆ ಹಾಕ್ತಾರೆ, ಎಸ್​​ಎಸ್​ಎಲ್​​ಸಿ ಪರೀಕ್ಷೆ ನಡೆಸ್ತಾರೆ. ನನ್ನ ಪ್ರಕಾರ ಇದು ಸರಿಯಲ್ಲ.

ಇದರಲ್ಲಿ ಯಾವುದು ಇಂಪಾರ್ಟೆಂಟ್? ಪಿಯುಸಿ ಪರೀಕ್ಷೆ.. ಈ ಪಿಯುಸಿ ಪರೀಕ್ಷೆ ಮುಂದಕ್ಕೆ ಹಾಕುವುದನ್ನ ಬಿಟ್ಟು, ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸ್ತೇವೆ ಅಂತಾರೆ. ಈ ರಾಜ್ಯ ಸರ್ಕಾರಕ್ಕೆ ಬುದ್ಧಿ ಇದ್ಯಾ? ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಸಿಇಟಿ ಪರೀಕ್ಷೆಯನ್ನೂ ನಡೆಸಬೇಕು. ಇದು ಕೋಡ ವಿದ್ಯಾರ್ಥಿಗಳಿಗೆ ಮಹತ್ವ, ಎಸ್​ಎಸ್​ಎಲ್​ಸಿ, ಪಿಯುಸಿ ಹಾಗೂ ಸಿಇಟಿ ಪರೀಕ್ಷೆಗಳನ್ನೂ ನಡೆಸಬೇಕಿತ್ತು. ಸರ್ಕಾರ ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಬೇಕಿತ್ತು. ಅದನ್ನ ಬಿಟ್ಟು ಎಸ್​ಎಸ್​ಎಲ್​ಸಿ ಮಾತ್ರ ನಡೆಸ್ತೀವಿ ಅನ್ನೋದು ಸರಿ ಅಲ್ಲ ಎಂದರು.

The post ‘ನನ್ನ ಪ್ರಕಾರ ಪಿಯುಸಿ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಯಬೇಕು’ appeared first on News First Kannada.

Source: newsfirstlive.com

Source link