ನವದೆಹಲಿ: ದೇಶದ ರಾಜಧಾನಿಯಲ್ಲಿ ಆಕ್ಸಿಜನ್ ಕೊರತೆಯಾದ ಹಿನ್ನೆಲೆ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ಫೌಂಡೇಶನ್ ಮೂಲಕ ಆ್ಯಂಟಿ ವೈರಲ್ ಡ್ರಗ್ ಫ್ಯಾಬಿಫ್ಲೂ ಹಾಗೂ ಆಕ್ಸಿಜನ್ ಸಿಲಿಂಡರ್​ಗಳನ್ನು ದೆಹಲಿಯ ಕೊರೊನಾ ಸೋಂಕಿತರಿಗೆ ಹಂಚಲಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆಯೇ ತನ್ನ ಕ್ಷೇತ್ರ ಪೂರ್ವ ದೆಹಲಿಯಲ್ಲಿ ಕೊರೊನಾ ಸೋಂಕಿತರಿಗೆ ಮೆಡಿಸಿನ್ ಹಾಗೂ ಸಿಲಿಂಡರ್​ಗಳನ್ನು ವಿತರಿಸಲಾಗಿದೆ. ವೈದ್ಯರು ನೀಡಿದ ಚೀಟಿ ಮತ್ತು ಆಧಾರ್ ಕಾರ್ಡ್ ತೋರಿಸಿದರೆ ಅಂಥ ರೋಗಿಗಳಿಗೆ ಗಂಭೀರ್ ಅವರ ದೆಹಲಿಯ ಜಾಗೃತಿ ಎನ್​ಕ್ಲೇವ್ ಮತ್ತು ಪುಸಾ ರೋಡ್​ ಕಚೇರಿಗಳಲ್ಲಿ ನೀಡಲಾಗುತ್ತದೆ ಎನ್ನಲಾಗಿದೆ.

ಇನ್ನು ಈ ಕುರಿತು ಹೇಳಿಕೆ ನೀಡಿರುವ ಗೌತಮ್ ಗಂಭೀರ್.. ದೆಹಲಿ ನನ್ನ ಮನೆ.. ನನ್ನ ಕೊನೆಯುಸಿರು ಇರುವವರೆಗೂ ನನ್ನ ಜನರ ಸೇವೆ ಮಾಡುತ್ತೇನೆ. ಈಗಾಗಲೇ ಹಲವರು ಬೆಡ್,ಆಕ್ಸಿಜನ್ ಮತ್ತು ಮೆಡಿಸಿನ್​ಗಳಿಗೆ ಬೇಡಿಕೆ ಇಟ್ಟಿದ್ದು ಸಾಧ್ಯವಾದಷ್ಟೂ ಸಹಾಯ ಮಾಡಿದ್ದೇವೆ. ಇದು ಸಂಕಷ್ಟದ ಸಮಯ.. ಈ ಸಮಯದಲ್ಲಿ ಜನರು ಮಾಡುವ ಸಹಾಯವೇ ಭರವಸೆಯ ಬೆಳಕು ಎಂದು ಹೇಳಿದ್ದಾರೆ. ಇತ್ತೀಚೆಗೆ ಗೌತಮ್ ಗಂಭೀರ್ ಅವರ ಫೌಂಡೇಶನ್​ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ 1 ಕೋಟಿ ನೀಡಿದ್ದಾರೆ ಎನ್ನಲಾಗಿದೆ.

The post ನನ್ನ ಫೌಂಡೇಶನ್​ನಿಂದ ದೆಹಲಿಯ ಸೋಂಕಿತರಿಗೆ ಮೆಡಿಸಿನ್, ಆಕ್ಸಿಜನ್ ನೀಡ್ತೇನೆ- ಗೌತಮ್ ಗಂಭೀರ್ appeared first on News First Kannada.

Source: News First Kannada
Read More