ಕಳೆದ ಒಂದು ವಾರಗಳಿಂದ ನಟಿ ವಿಜಯಲಕ್ಷ್ಮಿ ಮತ್ತೆ ಸುದ್ದಿಯಾಗಿದ್ದಾರೆ. ಕನ್ನಡದ ನಟಿ ಉಷಾ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಚಿಕಿತ್ಸೆಗೂ ದುಡ್ಡಿಲ್ಲ ಅಂತ ಈ ಹಿಂದೆ ನಟಿ ವಿಜಯಲಕ್ಷ್ಮಿ ವಿಡಿಯೋ ಮೂಲಕ ಶಿವಣ್ಣಗೆ ವಿಚಾರ ಮುಟ್ಟಿಸಿದ್ದರು. ಇದಾದ ಬಳಿಕ ಸಾಕಷ್ಟು ಆರೋಪಗಳಿಗೆ ಗುರಿಯಾದ ವಿಜಯಲಕ್ಷ್ಮಿ, ತಾವು ಯಾಮಾರಿಸಿದ್ದಾಗಿ, ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಅನ್ನೋ ವಿಚಾರಗಳು ಮತ್ತೆ ಒಂದೊಂದಾಗೇ ಹೊರ ಬರುತ್ತಾ ಹೋಯ್ತು. ಇದಕ್ಕೆ ಸದ್ಯ ಉತ್ತರ ಕೊಟ್ಟಿರುವ ವಿಜಯಲಕ್ಷ್ಮಿ, ಮತ್ತೆ ವಿಡಿಯೋ ಮಾಡುವ ಮೂಲಕ ಒಂದಷ್ಟು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹೌದು.. ನಟಿ ಉಷಾ, ನಟಿ ಜಯಪ್ರದಾ ಅವರ ಸಹೋದರನ ಪತ್ನಿ. ಆದ್ರೆ ಹತ್ತು ವರ್ಷಗಳ ಹಿಂದೆ ಉಷಾ ಪತಿ ದೂರವಾಗಿದ್ದು, ಮಗುವನ್ನೂ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಇನ್ನೂ ಡೈವೋರ್ಸ್​ ಆಗಿಲ್ಲ. ಈ ಬಗ್ಗೆ ನಟಿ ವಿಜಯಲಕ್ಷ್ಮಿ ತಮ್ಮ ವಿಡಿಯೋದಲ್ಲಿ ಸ್ಪಷ್ಟ ಚಿತ್ರಣ ನೀಡಿದ್ದು, ‘ನನ್ನ ಬ್ಗಗೆ ಇಷ್ಟು ಮಾತನಾಡೋರು, ನಟಿ ಜಯಪ್ರದಾರನ್ನ ಯಾಕೆ ಪ್ರಶ್ನೆ ಮಾಡುತ್ತಿಲ್ಲ’ ಅಂತ ಯೂ ಟ್ಯೂಬ್​ನಲ್ಲಿ ಬರ್ತಿರುವ ಎಲ್ಲಾ ಅವಹೇಳನಕಾರಿ ವಿಡಿಯೋಗಳಿಗೆ ತಿರುಗೇಟು ನೀಡಿದ್ದಾರೆ.

‘ಕರ್ನಾಟಕದಲ್ಲಿರುವ ನನ್ನ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಕನ್ನಡ ಚಿತ್ರರಂಗದ ಎಲ್ಲಾ ಹಿರಿಯರಿಗೆ ನನ್ನ ನಮಸ್ಕಾರಗಳು. ಎರಡು ದಿನಗಳಿಂದ ನಾವು ಗಮನಿಸುತ್ತಿದ್ದೇವೆ, ಉಷಾ ಅವರ ಆರೋಗ್ಯ ಬಹಳ ಗಂಭೀರವಾಗಿದೆ. ಮಾತಾಡೋದಕ್ಕೂ ಆಗದೇ ತುಂಬಾ ಕಷ್ಟ ಪಡುತ್ತಿದ್ದಾರೆ. ಅದಕ್ಕೆ ನಾವು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಬಹಳಷ್ಟು ವಿಚಾರಗಳನ್ನ ನಾನು ಗಮನಿಸಿದೆ. ಬೀದಿಗೆ ಬಂದಾಯ್ತು ವಿಜಯಲಕ್ಷ್ಮಿ ಅಂತ ಒಂದು ಕಡೆ. ಮತ್ತೊಂದು ಕಡೆ, ಸಹಾಯ ಕೇಳಿದ್ರು, ಹೀಗೆ ಬಹಳಷ್ಟು ವಿಚಾರಗಳು. ಎರಡು ದಿನಗಳಲ್ಲಿ ಶಿವಣ್ಣ ಅವರು, ಯಶ್​ ಸರ್​, ದರ್ಶನ್​ ಸರ್​ ಸಹಾಯ ಮಾಡಿದ್ರು ಅಂತ ಯೂ ಟ್ಯೂಬ್​ನಲ್ಲಿ ಹಾಕಿದ್ದಾರೆ.

ನನಗೆ ಒಂದೇ ಒಂದು ಪ್ರಶ್ನೆ ಇದೆ.. ಇಷ್ಟೆಲ್ಲಾ ನನ್ನ ಬಗ್ಗೆ ಬೈದು ಮಾತನಾಡ್ತೀರಿ ಅಲ್ವಾ? ಅವನನ್ನ ಯಾಮಾರಿಸಿಬಿಟ್ಟೆ..ಕನ್ನಡದ ಬಗ್ಗೆ ಹಾಗೇ ಹೇಳ್ಬಿಟ್ಟೆ ಅಂತೆಲ್ಲಾ. ಒಂದು ವಿಚಾರ ಅಂತೂ ಮೊನ್ನೆಯಿಂದ ಹೇಳ್ತಾನೆ ಇದ್ದೀನಿ. ಉಷಾ ಅವರ ಗಂಡ , ನಟಿ ಜಯಪ್ರದಾ ಅವರ ಸಹೋದರ ಇವರನ್ನ ಬಿಟ್ಟು ಮಗುನ ಕರೆದುಕೊಂಡು ಹೋಗಿ ಹತ್ತು ವರ್ಷ ಆಯ್ತು, ಆದ್ರೆ ಇನ್ನೂ ಡೈವೋರ್ಸ್​​ ಕೊಟ್ಟಿಲ್ಲ. ಅವರ ಜೀವನವನ್ನ ಸಂಪೂರ್ಣವಾಗಿ ಹಾಳು ಮಾಡಿ ಇಟ್ಟಿದ್ದಾರೆ. ಮಗುವನ್ನೋ ತೋರಿಸಿಲ್ಲ. ಈ ವಿಚಾರವನ್ನ, ‘ಕನ್ನಡದ ನಟಿ ಉಷಾ ಜೀವನವನ್ನ ತೆಲುಗು ನಟಿ ಜಯಪ್ರದಾ ಅವರು ಹಾಳು ಮಾಡಿದ್ದಾರೆ’ ಅಂತ ಯಾಕೆ ಹಾಕ್ಬಾರದು ನೀವೆಲ್ಲಾ? ನಿಜವಾಗ್ಲೂ ನಾನು ಇದನ್ನ ಗೊತ್ತಿಲ್ದೇ ಕೇಳ್ತಿದ್ದೀನಿ. ನಾನು ಸತ್ತೋಗ್ತಿದ್ದೀನಿ, ನಾನು ಕಷ್ಟ ಪಡ್ತಿದ್ದೀನಿ ಅಂದ್ರೇನೇ ಎಲ್ಲರಿಗೂ ಸಂತೋಷ. ಅದಕ್ಕೆ ಅವಹೇಳನ ಮಾಡುವಂತದ್ದು ಮಾತ್ರ ಹಾಕ್ತಿದ್ದೀರ’ ಅಂತ ಹೇಳಿರುವ ನಟಿ ವಿಜಯಲಕ್ಷ್ಮಿ, ನಟಿ ಉಷಾ ಜೀವನ ಹಾಳು ಮಾಡಿರೋದ್ರಲ್ಲಿ ಜಯಪ್ರದಾ ಅವರು ಕೂಡ ಶಾಮೀಲಾಗಿದ್ದಾರೆ ಅಂತ ನೇರವಾಗಿ ಈ ವಿಡಿಯೋ ಮೂಲಕ ಆರೋಪಿಸಿದ್ದಾರೆ.

The post ನನ್ನ ಬಗ್ಗೆ ಇಷ್ಟು ಮಾತನಾಡೋರು.. ಜಯಪ್ರದಾರನ್ನ ಯಾಕೆ ಪ್ರಶ್ನೆ ಮಾಡುತ್ತಿಲ್ಲ.? ವಿಜಯ​ಲಕ್ಷ್ಮೀ ಪ್ರಶ್ನೆ appeared first on News First Kannada.

Source: newsfirstlive.com

Source link