ನನ್ನ ಮಕ್ಕಳನ್ನ ನಾನು ಕ್ಷಮಿಸೋದಿಲ್ಲ! ಕ್ಷಮೆಗೆ ಅವರು ಅರ್ಹರಲ್ಲ!

ನನ್ನ ಮಕ್ಕಳನ್ನ ನಾನು ಕ್ಷಮಿಸೋದಿಲ್ಲ! ಕ್ಷಮೆಗೆ ಅವರು ಅರ್ಹರಲ್ಲ!

ಮನಸ್ಸುಗಳ ಮಾತು ಮಧುರ ಅಂತಾ ಹೇಳ್ತಾರೆ. ಹೌದು ಇದು ಅಕ್ಷರಶಃ ನಿಜ. ಆದ್ರೆ, ಮನಸ್ಸುಗಳ ನಡುವೆ ಗೋಡೆ ಇದ್ದರೆ ಮನಸ್ಸುಗಳು ಮಾತನಾಡೋದಿಲ್ಲ. ಆ ಗೋಡೆ ಕಣ್ಮರೆಯಾದಾಗ ಮಾತ್ರ ಮನಸ್ಸಿನಲ್ಲಿರೋ ನೋವು-ನಲಿವುಗಳೆಲ್ಲಾ ಹೊರಗಡೆ ಬರೋದು. ರಾಜ ರಾಣಿ ರಿಯಾಲಿಟಿ ಶೋನ ಮನಸ್ಸುಗಳ ಮಾತು ಮಧುರ ಟಾಸ್ಕ್‌ನಲ್ಲಿ ದಂಪತಿಗಳ ನಡುವೆ ನಡೆದ ಮಾತುಕತೆ ಮನಸ್ಸನ್ನೇ ಮೌನವಾಗಿಸಿತು.

ರಾಜು ತಾಳಿಕೋಟೆ ಹಾಗೂ ಅವರು ಇಬ್ಬರು ಪತ್ನಿಯರಾದ ಪ್ರೇಮ್ ಅಂಡ್ ಪ್ರೇಮ ಅವರ ಮಾತುಕತೆ ನೋಡುಗರ ಕಣ್ಣಲ್ಲಿ ನೀರು ತರಿಸಿತು. ಕೇವಲ ವೀಕ್ಷಕರು ಮಾತ್ರವಲ್ಲ, ತೀರ್ಪುಗಾರರಾದ ಸೃಜನ್ ಲೋಕೇಶ್‌ ಹಾಗೂ ನಟಿ ತಾರ ಕೂಡ ಕಣ್ಣೀರಿಟ್ಟರು.

ಮೊದಲು ರಾಜು ತಾಳಿ ಕೋಟಿ ಆರೋಗ್ಯದ ಬಗ್ಗೆ ಮಾತನಾಡಿದ ಪತ್ನಿಯರು.. ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನವಹಿಸಿ, ಹೆಚ್ಚು ಸ್ಟ್ರೆಸ್​ ತಗೋಬೇಡಿ.. ನಿಮಗೆ ಏನಾದ್ರು ಆದ್ರೆ ನಮಗೆ ಅದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ನೀವು ನಮಗೆ ದೇವ್ರು, ನಮಗೆ ಎಲ್ಲವನ್ನು ಕೊಟ್ಟಿದ್ದೀರಾ ಸುಖ, ನೆಮ್ಮದಿ, ಖುಷಿ ಎಲ್ಲವು.. ಆದರೇ ನೀವು ಇಲ್ಲದೆ ನಮ್ಮ ಜೀವನ ಹೇಗೇ? ಕೊನೆಯ ಕಾಲದಲ್ಲಿ ನಮಗೆ ಯಾವ ಮಕ್ಕಳು ಬರಲ್ಲ ಸೊಸೆಯಂದಿರು ಬರಲ್ಲಾ ನೆಂಟರು ಬರಲ್ಲ ನಮಗೆ ನೀವು ನಿಮಗೆ ನಾವು ಅಂತಾ ಕಣ್ಣೀರುಡುತ್ತಾರೆ.

ಈ ಮಾತುಕತೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಮಾತನಾಡಿ ಈ ಜೋಡಿ.. ನಾವು ನಮ್ಮ ಮಕ್ಕಳಿಗೆ ಯಾವುದನ್ನು ಕಡಿಮೆ ಮಾಡಿಲ್ಲಾ. ಹುಟ್ಟಿಸಿದ್ವಿ, ಹುಟ್ಟಿಸಿದ ತಪ್ಪಿಗೆ ಬೆಳೆಸಿದ್ವಿ ಬೆಳೆಸಿದ ತಕ್ಕನಾಗಿ ವಿದ್ಯಾಭ್ಯಾಸ ಕೊಡಿಸಿದ್ವಿ.. ಅದು ನಮ್ಮ ಕರ್ತವ್ಯ ಈಗಾ ನಮ್ಮನ್ನ ನೋಡುದು ಬಿಡೋದು ಅವರ ಧರ್ಮ ಎಂದರು.

ಎಲ್ಲಾ ರಂಗ ಭೂಮಿಯಾ ಕಲಾವಿದ್ರು ತಮ್ಮ ಮಕ್ಕಳಿಗೋಸ್ಕರ ಏನಲ್ಲಾ ತ್ಯಾಗ ಮಾಡಿದ್ದಾರೆ ಹಾಗೇ ನಾವು ಮಾಡಿದ್ದೀವಿ.. ಮಕ್ಕಳನ್ನ ಮುಂದಿನ ಪೀಳಿಗೆಗೆ ರಂಗಭೂಮಿಗೆ ಯಾರು ತರೋಕೆ ಇಷ್ಟ ಪಟ್ಟಿರಲಿಲ್ಲ. ಹಾಗೆಯೇ ನಾವು ಇಷ್ಟ ಪಟ್ಟಿರಲಿಲ್ಲಾ. ಹಾಸ್ಟೆಲ್​ನಲ್ಲಿ ಇಟ್ಟು ಓದಿಸಿದ್ವಿ ಮುಂದೆ ಅನಿವಾರ್ಯತೆಯಿಂದ ರಂಗಭೂಮಿಗೆ ಬಂದ್ರು.. ಆಗ್ಲು ಕೂಡಾ ನಾವು ಸಂತೋಷದಿಂದ ಸ್ವಾಗತ ಮಾಡಿದ್ದೀವಿ. ಆದ್ರೇ ರಂಗಭೂಮಿಯಲ್ಲಿ ಅವರು ಹೇಗೇ ಉಳಿಬೇಕು ಹಾಗೆ ಉಳಿಲಿಲ್ಲಾ ಅದೇ ಸ್ವಲ್ಪ ನೋವಿದೆ..ಅಂತಾ ರಾಜು ತಾಳಿ ಕೋಟೆ ಹೇಳ್ತಾರೆ.. ಅದಕ್ಕೆ ಅವರ ಪತ್ನಿ ಇಷ್ಟು ದಿನ ಆಗಿದ್ದು ಆಗಿ ಹೋಯ್ತು..ಬಂದ್ರೆ ಅವರ ದೈವಾ, ಬರಲಿಲ್ಲಾ ಅಂದ್ರೆ ಅವ್ರ ಕರ್ಮ ಅಂತಾರೆ. ಇದಕ್ಕೆ ರಾಜು ತಾಳಿ ಕೋಟೆ ಕಣ್ಣೀರಿಡುತ್ತಾರೆ.

ಬಳಿಕ ರಾಜು ತಾಳಿ ಕೋಟೆ ಪತ್ನಿ ಕೊನೆಯದಾಗಿ ಒಂದು ಪ್ರಶ್ನೆ ಕೇಳ್ತೀನಿ ಕೋಪ ಮಾಡಿಕೊಳಲ್ಲ ಅಲ್ವಾ ಅಂತಾರೆ.. ರಾಜು ತಾಳಿ ಕೋಟೆ ಇಲ್ಲಾ ಹೇಳು ಅಂತಾರೆ.. ಮಕ್ಕಳು ನಮ್ದು ತಪ್ಪಾಯ್ತು ಅಂತಾ ಬಂದ್ರೆ ಕ್ಷಮಿಸ್ತೀರಾ ಇಲ್ವಾ ಅವರನ್ನಾ ಅಂತಾರೆ. ರಾಜು ತಾಳಿ ಕೋಟೆ ಇಲ್ಲಾ ಯಾವುದೇ ಕಾರಣಕ್ಕೂ ಅವರನ್ನ ಕ್ಷಮಿಸಲ್ಲಾ. ನನ್ನ ಹತ್ರ ಕ್ಷಮೆಗೆ ಅರ್ಹರಲ್ಲ ಅವ್ರು. ಅವ್ರು ನನಗೆ ಕೆಟ್ಟಕೆಟ್ಟದಾಗಿ ಮಾತನಾಡಿಲ್ಲಾ ಆದ್ರೆ ನಿಮಗೆ ಮಾತನಾಡಿದ್ದಾರೆ ಅಂತಾ ಹೇಳ್ತಾರೆ.

ಅದಕ್ಕೆ ಪತ್ನಿ ಪ್ರೇಮ, ನಾವು ಅವರನ್ನ ಕ್ಷಮಿಸ್ತಿವಿ ದೊಡ್ಡ ಮನಸ್ಸು ಮಾಡಿ. ಯಾಕಂದ್ರೆ ಹೆಣ್ಣಿಗೆ ಭೂಮಿಯಂತೆ ವಿಶಾಲವಾದ ಮನಸ್ಸು ಇರತ್ತೆ.. ನಾವು ಅವರನ್ನ ಹೆತ್ತಿದ್ದಿವಿ ನಮ್ಮ ಮಕ್ಕಳು ನಮಗೆ ಮಾತಾಡಿದ್ರೆ ನಮಗೆ ಮಾತನಾಡ್ತಾರೆ ಅಂದಾಗ ರಾಜು ತಾಳಿ ಕೋಟೆ ನೀವು ಆ ವಿಷಯವನ್ನು ಬಿಡದಿದ್ರೆ ನಾನು ಇಲ್ಲಿಂದ ಎದ್ದು ಹೋಗ್ತೀನಿ ಅಂತಾರೆ.

ಬಳಿಕ ಕ್ಯಾಂಡಲ್​ ಲೈಟ್​ ಡೇಟ್​ನಲ್ಲಿ ನನ್ನಿಂದ ಬಹಳಷ್ಟು ತಪ್ಪುಗಳಾಗಿವೆ. ಇನ್ಮುಂದೆ ಮಾಡಲ್ಲಾ ಅದನ್ನು ಸರಿ ಪಡಿಸಿಕೊಳ್ತಿನಿ. ನನಗೆ ಒಂದು ನೋವು ಮಾತ್ರ ಈಗಲೂ ಕಾಡ್ತಿದೆ. ನಾವು ಒಂದು ಕಂಪನಿಯಲ್ಲಿ ದುಡಿಯುವಾಗ ಅವಳು ಪ್ರೆಗ್​ನೆಂಟ್​ ಇದ್ಲು. ಆಗ ಕಂಪನಿ ಓನರ್​ ಕರೆದು, ನೋಡಪ್ಪ ನನಗೆ ಎರಡು ಮೂರು ಕ್ಯಾಂಪ್​ಗೆ ಹೊಡತ ಬಿತ್ತು. ಕಚ್ಚಿಕೊಂಡಿದೆ ಈ ಕಲೆಕ್ಷನ್​. ನಿನ್ನ ಪತ್ನಿಗೆ ಆಬಾರ್ಶನ್‌ ​ ಮಾಡಿಸು ಅಂದ್ರು. ನನಗೆ ಆಗಾ ಎಲ್ಲಿಲ್ಲದ ನೋವು ಆಯ್ತು.. ಬಳಿಕಾ ಅಬೋರ್ಷನ್​ ಮಾಡಿಸಿದ್ವಿ… ಆ ನೋವು ನನಗೆ ಈಗಲು ನೋವು ಕಾಡತ್ತೆ. ರಂಗಭೂಮಿಗಾಗಿ ಆ ತ್ಯಾಗ ಮಾಡಿದ್ದಿವಿ.. ಅದು ಬೇರೆಯವರಿಗೆ ಸುಲಭ ಅನಿಸಬಹುದು ಆದ್ರೆ ನನಗೆ ತುಂಬಾ ನೋವಿದೆ ಎನ್ನುತ್ತಾರೆ.

ಇನ್ನು ನೀವು ಕೆಲವು ಪ್ರಶ್ನೆಗಳನ್ನು ಕೇಳಿದ್ರಿ ಮಕ್ಕಳ ವಿಚಾರದ ಕುರಿತು ಅದಕ್ಕೆ ನನ್ನ ಸಮ್ಮತಿ ಇಲ್ಲಾ. ಯಾಕಂದ್ರೆ ಅವರು ನನಗೆ ಏನು ಹೇಳಿಲ್ಲಾ ಹೇಳಿರೋದು ನಿಮಗೆ ಅದು ನನಗೆ ಬೇಜಾರಿದೆ ಹಾಗಾಗಿ ನಾನು ಕ್ಷಮಿಸಲ್ಲಾ. ನಾನು ಇರೋವರೆಗೂ ಅದು ಸಾಧ್ಯವಿಲ್ಲಾ ನಾನು ಹೋದಮೇಲೆ ನೀವು ಏನಾದ್ರು ಮಾಡಿ ನನಗೆ ಅವರನ್ನು ಕ್ಷಮಿಸಲು ಸಾಧ್ಯವಿಲ್ಲಾ ಇನ್ನು ಮುಂದೆ ಆ ಬಗ್ಗೆ ನನ್ನ ಬಳಿ ಕೇಳ್ಬೇಡಿ ಅಂತಾರೆ.

ಇವರ ಮಾತು ಕಥೆ ಮುಗಿದ ಮೇಲೆ ಜಡ್ಜ್​ ತಾರಾ ಮಕ್ಕಳ ವಿಷಯದ ಬಗ್ಗೆ ಮಾತನಾಡಿ.. ಅಣ್ಣ ಮಕ್ಕಳು ತಪ್ಪು ಮಾಡಿದ್ರೆ ದೇವ್ರು ಕ್ಷಮಿಸ್ತಾನೆ… ನೀನು ಕೂಡಾ ನಿನ್ನ ಮಕ್ಕಳ ತಪ್ಪನ್ನು ಕ್ಷಮಿಸಿ ಒಂದು ಸಲ ನೋಡಿ .ಆಗಾ ಈ ಎರಡು ತಾಯಿಯಂದಿರು ಸಂತೊಷವಾಗ್ತಾರೆ ಅಂತಾರೆ. ಅದಕ್ಕೆ ತಾಳಿಕೋಟೆ ಸರಿ ಅಂತ ಒಪ್ಪಿಕೊಳ್ತಾರೆ. ಸೃಜನ್‌ ಲೋಕೇಶ್‌ ಕೂಡ ಇದೇ ಮಾತನ್ನ ಕೇಳಿದಾಗ, ಕ್ಷಮಿಸ್ತೀನಿ ಸಾರ್ ಅಂತಾರೆ ರಾಜು ತಾಳಿ ಕೋಟೆ.

ಹೀಗೇ.. ರಾಜ ರಾಣಿ ಕಾರ್ಯಕ್ರಮದಲ್ಲಿ ರಾಜು ತಾಳಿಕೋಟೆ ಅವರ ಕುಟುಂಬದ ಆ ನೋವು ಹೊರಬಂತು. ಅದಕ್ಕೆ ಒಂದು ಮಟ್ಟಿಗೆ ಪರಿಹಾರವೂ ಸಿಕ್ಕಿತು.

The post ನನ್ನ ಮಕ್ಕಳನ್ನ ನಾನು ಕ್ಷಮಿಸೋದಿಲ್ಲ! ಕ್ಷಮೆಗೆ ಅವರು ಅರ್ಹರಲ್ಲ! appeared first on News First Kannada.

Source: newsfirstlive.com

Source link