ಕೊರೊನಾ ಸಂಕಷ್ಟ ಸಮಯದಲ್ಲಿ ಬಡವರ ನೆರವಿಗೆ ಧಾವಿಸಿರುವ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್​ ರಾಜ್​ ಅವರು ಇತ್ತೀಚೆಗಷ್ಟೇ ಫುಡ್​ ಕಿಟ್​ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದರು. ಆದರೆ ತಮ್ಮ ಜೀವನದಲ್ಲಿ ಎದುರಾದ ಕಷ್ಟಗಳನ್ನು ನೆನಪಿಸಿಕೊಂಡ ಲೀಲಾವತಿ ಅವರು, ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.

ನ್ಯೂಸ್​​ಫಸ್ಟ್​ನೊಂದಿಗೆ ಮಾತನಾಡಿದ ಲೀಲಾವತಿ ಅವರು.. ತಮ್ಮ ಮಗನ ಉಜ್ವಲ ಭವಿಷ್ಯ ಹಾಗೂ ಎದುರಾದ ಅವಮಾನಗಳ ಕುರಿತು ಮಾತನಾಡಿದ್ದಾರೆ. ವಿನೋದ್​​ ರಾಜ್​​ ಬಹಳ ಶ್ರಮಜೀವಿ. ಆತ ಮಹಾನ್ ಶ್ರಮಜೀವಿ. ಮಗ ಕೈಯಿಂದ ದುಡಿಸಿಕೊಂಡು ತಿನ್ನುತ್ತಾರೆ ಎಂದು ಕೊಳ್ಳಬೇಡಿ. ಏಕೆಂದರೆ ಒಬ್ಬ ತಾಯಿ ತನ್ನ ಮಗನಿಗಾಗಿ ಏನಾದರೂ ಮಾಡಲು ಸಿದ್ಧವಾಗಿರುತ್ತಾಳೆ. ಅಂತೆಯೇ ನನ್ನ ಮಗನ ಮೇಲೆ ನನಗೆ ಪ್ರೀತಿ ಇದೆ. ತಾಯಿ ಮಕ್ಕಳಿಗೆ ಏನೂ ಮಾಡ್ತಾರೆ ಅದನ್ನು ಮಾಡಬಲ್ಲಳು. ಅದನ್ನೂ ಲೀಲಾವತಿ ಮಾಡಿಲ್ಲ ಎಂದು ತಿಳಿದುಕೊಂಡಿದ್ದರೆ, ಅದು ಹೌದು ಆಗಿರಬಹುದು ಅಥವಾ ಅಲ್ಲ ಕೂಡ ಆಗಿರಬಹುದು. ಸಮಯ ಬಂದಾಗ ತಾನಾಗಿಯೇ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಯಾವ ತಾಯಿ ತಾನೇ ತನ್ನ ಮಗನ ಭವಿಷ್ಯ ಉಜ್ವಲವಾಗಿ ಇರಲಿ ಎಂದು ಬಯಸುವುದಿಲ್ಲ. ಆದರೆ ಸಾಕಷ್ಟು ಜಿಗುಪ್ಸೆ, ನೋವುಗಳು ಎಲ್ಲ ಎದುರಾದವು. ಮಾಡಲೇ ಬೇಕು ಎಂದು ಮಾಡುವ ಅಗತ್ಯವಿಲ್ಲ. ಆದ್ದರಿಂದಲೇ ಆತನಿಗೆ ಕೃಷಿಯಲ್ಲಿ ತೊಡಗಿಕೊಳ್ಳಲು ಹೇಳಿದೆ. ಆಗ ಮಗನ ಕೈಲಿ ದುಡಿಸಿಕೊಂಡು ಸುಮ್ಮನೆ ಕುಳಿತುಕೊಂಡಿದ್ದಾರೆ ಅಂದಿದ್ರು. ಆದರೆ ನನ್ನ ತೋಟಕ್ಕೆ ಈಗ ಯಾರೇ ಬಂದರೂ ಸ್ವರ್ಗ ಅಂತಾ ಕರೆಯುತ್ತಾರೆ ಅಷ್ಟು ಸಾಕು ಎಂದರು.

ಚಿಕ್ಕವನಿದ್ದಾಗ ಮೈಕಲ್​ ಜಾಕ್ಸನ್​​ ನೋಡಿಕೊಂಡು ವಿನೋದ್​ ಡಾನ್ಸ್ ಮಾಡುತ್ತಿದ್ದ. ಶೋಲ್ಡರ್​ ಸ್ಪಿನ್​ ಮಾಡೋವಾಗ ಅಮ್ಮ ಬಾ ಹಿಡಿಕೋ ಅಂತಾ ಕರೆಯುತ್ತಿದ್ದ. ಆತನಿಗೆ ಡಾನ್ಸ್​ ಅಂದರೇ ಅಷ್ಟು ಹುಚ್ಚು ಇತ್ತು, ಕೆಲವೊಮ್ಮೆ ಇದು ನನಗೆ ಕೋಪ ತರಿಸಿದ್ದೂ ಇದೆ. ಆದರೆ ಆತನಿಗೆ ಇದುವರಿಗೂ ಚೆನ್ನಾಗಿ ಮಾಡಿದ್ದೀಯಾ ಅಂತಾ ಒಂದು ಅವಾರ್ಡ್ ಅಥವಾ ಒಂದು ಸಿನಿಮಾ ಅವಕಾಶ ಕೊಟ್ರಾ? ಏಕೆ, ಲೀಲಾವತಿ ಮಗ ಮಾಡಿರೋ ತಪ್ಪು ಏನೂ? ಎಂದು ಪ್ರಶ್ನೆ ಮಾಡಿ ಭಾವುಕಾದರು.

The post ‘ನನ್ನ ಮಗನನ್ನ ಯಾಕ್​ ತುಳುದ್ರಿ’ ಕಣ್ಣೀರಿಟ್ಟ ಲೀಲಾವತಿ appeared first on News First Kannada.

Source: newsfirstlive.com

Source link