ಬೆಂಗಳೂರು: ಚಾಮರಾಜಪೇಟೆಯಲ್ಲಿ ಪೌರಕಾರ್ಮಿಕರಿಗೆ ಫುಡ್​ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ.. ಜಮೀರ್ ಅಹ್ಮದ್ ಖಾನ್ ಹಾಗೂ ನಮ್ಮ ದೇಹದಲ್ಲಿ ಹರಿಯುತ್ತಿರುವ ರಕ್ತ ಒಂದೇ ಎಂದು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ಯಾವತ್ತಿಗೂ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ. ಅಧಿಕಾರ ಇರ್ಲಿ ಇರದೇ ಹೋಗಲಿ.. ಎಲ್ಲಾ ಜಾತಿ, ಧರ್ಮದ ಬಡವರನ್ನ ಸಮಾನವಾಗಿ ಕಾಣ್ಬೇಕು, ಅವರಿಗೆ ಆರ್ಥಿಕ ಸಹಾಯಗಳನ್ನ ಮಾಡ್ಬೇಕು ಅನ್ನೋದು ನಮ್ಮ ಉದ್ದೇಶ. ಜಮೀರ್ ಅಹ್ಮದ್ ಖಾನ್ ಅವ್ರು ಪಕ್ಷ ಹೇಳಿದ್ದಕ್ಕಿಂತಲೂ ಜಾಸ್ತಿಯಾಗಿ ಸಹಾಯ ಮಾಡ್ತಿದ್ದಾರೆ. ಅವ್ರು ಯಾವುದೇ ಧರ್ಮ, ಜಾತಿಯನ್ನ ನೋಡೋಕೋಗಲ್ಲ. ಯಾರು ಕಷ್ಟದಲ್ಲಿದ್ದಾರೋ ಅವ್ರಿಗೆ ಸಹಾಯ ಮಾಡ್ಬೇಕು. ಅದು ಮನುಷ್ಯನ ಧ್ಯೇಯ ಕೂಡ. ಎಲ್ಲಾ ಜಾತಿಯವ್ರು ಧರ್ಮದವರೂ ಮನುಷ್ಯರೇ..

ನನ್ನ ಶರೀರದಲ್ಲಿ ಹರಿಯುವ ರಕ್ತವೂ ಒಂದೇ.. ಜಮೀರ್ ಅಹ್ಮದ್ ಖಾನ್ ಅವರ ಶರೀರದಲ್ಲಿ ಹರಿಯುತ್ತಿರೋ ರಕ್ತವೂ ಒಂದೇ. ನಮಗೆ ರಕ್ತ ಬೇಕಾದಾಗ ಅವರ ರಕ್ತ ತಗೊಳ್ತೀವಿ.. ಅವರಿಗೆ ರಕ್ತ ಬೇಕಾದಾಗ ನಾವು ಕೊಡ್ತೇವೆ. ಆಗ ಜಾತಿ, ಧರ್ಮ ಇರಲ್ಲ.. ಆಮೇಲೆ ಜಾತಿ, ಧರ್ಮ ಎಲ್ಲ ಹುಟ್ಟಾಕ್ತಾರೆ. ಜಮೀರ್ ಅಹ್ಮದ್ ಖಾನ್ ಶಾಸಕರಾದ್ಮೇಲೆ ಎಲ್ಲ ಜಾತಿ, ಧರ್ಮದವರನ್ನ ಸಮಾನವಾಗಿ ಕಾಣ್ತಿದ್ದಾರೆ. ಅದು ಪ್ರತಿಯೊಬ್ಬ ರಾಜಕಾರಣಿಯ ಕರ್ತವ್ಯವಾಗಬೇಕು. ಇದು ಸಂವಿಧಾನ ನಮಗೆ ಹೇಳಿರುವ ಜವಾಬ್ದಾರಿ. ಯಾರು ತಪ್ಪು ಮಾಡಿದ್ರೂ ತಪ್ಪೇ..ಯಾರು ಒಳ್ಳೇದು ಮಾಡಿದ್ರೂ ಅದು ಒಳ್ಳೇದೇ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ರು.

The post ನನ್ನ ಮತ್ತು ಜಮೀರ್ ದೇಹದಲ್ಲಿ ಹರಿಯುತ್ತಿರುವ ರಕ್ತ ಒಂದೇ: ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link