ನಟಿ ಪ್ರಿಯಾಮಣಿ ಹಾಗೂ ಮುಸ್ತಫಾ ರಾಜ್​ ಇದೀಗ ಎಲ್ಲೆಲ್ಲೂ ಸುದ್ದಿಯಾಗ್ತಿದ್ದಾರೆ. ಮುಸ್ತಫಾ ತಮ್ಮ ಮೊದಲ ಹೆಂಡ್ತಿಗೆ ಡಿವೋರ್ಸ್​ ನೀಡದೇ, ನಟಿಪ್ರಿಯಾಮಣಿಯನ್ನ ಮದುವೆಯಾಗಿದ್ದಾರೆ ಅಂತ ಮೊದಲ ಪತ್ನಿ ಆಯೇಷಾ ಕ್ರಿಮಿನಲ್​ ಮೊಕದ್ದಮೆ ಹೂಡಿದ್ದಾರೆ. ಇದೀಗ, ಮೊದಲ ಪತ್ನಿ ಆಯೇಷಾಗೆ ಎರಡನೇ ಪತ್ನಿ ಪ್ರಿಯಾಮಣಿ ತಿರುಗೇಟು ಕೊಟ್ಟಿದ್ದಾರೆ. ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್​ ಮೂಲಕ ಈ ಇಡೀ ದೇಶಕ್ಕೆ ಪರಿಚಯರಾಗಿರೋ ಬಹುಭಾಷಾ ನಟಿ, ಕನ್ನಡತಿ ಪ್ರಿಯಾಮಣಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾದ ಹಿನ್ನೆಲೆ ಅವರು, ಮುಸ್ತಫಾ ಅವರ ಮೊದಲ ಪತ್ನಿ ಆಯೇಷಾಗೆ ತಿರುಗೇಟು ನೀಡಿದ್ದಾರೆ.

‘ನನ್ನ ಮತ್ತು ಮುಸ್ತಫಾ ಸಂಬಂಧ ಚೆನ್ನಾಗಿದೆ’

ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ನಟಿ ಪ್ರಿಯಾಮಣಿ, ‘‘ನನ್ನ ಮತ್ತು ಮುಸ್ತಫಾ ಸಂಬಂಧ ಗಟ್ಟಿಯಾಗಿದೆ. ಈಗ್ಲೂ, ನನ್ನ ಗಂಡ ಕೆಲಸದ ಮೇಲೆ ಅಮೆರಿಕಾದಲ್ಲಿದ್ದಾರೆ. ಅವ್ರು ಪ್ರತಿ ಸಲ ನನಗೆ ಫೋನ್​ ಮಾಡಿ ಎಲ್ಲವನ್ನೂ ವಿಚಾರಿಸಿಕೊಳ್ತಾರೆ. ಇಲ್ಲ, ಅವ್ರು ಬ್ಯುಸಿಯಿದ್ದಾಗ, ನಾನೇ ಅವ್ರಿಗೆ ಫೋನ್​ ಮಾಡಿ ವಿಚಾರುಸ್ತೀನಿ. ನಾವಿಬ್ರೂ ಆರಾಮಾಗಿ ಇದ್ದೀವಿ. ಜಾಸ್ತಿ ಮಾತು ಮಾತಾಡದಿದ್ದಾಗ, ಅಟ್​ಲೀಸ್ಟ್​​ ‘ಆರಾಮಾಗಿದ್ದೀರ’ ಅಂತನಾದ್ರೂ ನಾವು ಮಾತಾಡ್ಕೊತೀವಿ ಅಂತ ಹೇಳಿದ್ದಾರೆ.

ಇದನ್ನೂ ಓದಿ:  ಪ್ರಿಯಾಮಣಿ ಮತ್ತು ಪತಿ ವಿರುದ್ಧ ಕ್ರಿಮಿನಲ್ ಕೇಸ್; ಸಿಡಿದೆದ್ದ ಮುಸ್ತಫಾ ಮೊದಲ ಪತ್ನಿ

ಮುಸ್ತಫಾ ರಾಜ್ ಅವರು ತಮ್ಮ ಮೊದಲ ಪತ್ನಿ ಆಯೆಷಾ ಅವರಿಂದ 2013ರಲ್ಲಿ ದೂರವಾಗಿದ್ದರು. ನಂತರ 2017ರಲ್ಲಿ ಪ್ರಿಯಾಮಣಿ ಅವರನ್ನು ವಿವಾಹವಾದರು. ಇದೀಗ, ಪ್ರಿಯಾಮಣಿ ಮೇಲೆ ಆಯೇಷಾ ಕ್ರಿಮಿನಲ್​ ಮೊಕದ್ದಮ್ಮೆ ಹಾಕಿದ್ದಕ್ಕೆ, ಪ್ರಿಯಾಮಣಿ ಉತ್ತರ ನೀಡಿದ್ದಾರೆ.

The post ನನ್ನ ಮತ್ತು ಮುಸ್ತಫಾ ಸಂಬಂಧ ಗಟ್ಟಿಯಾಗಿದೆ; ಗಂಡನ ಮೊದಲ ಪತ್ನಿಗೆ ತಿರುಗೇಟು ಕೊಟ್ಟ ಪ್ರಿಯಾಮಣಿ appeared first on News First Kannada.

Source: newsfirstlive.com

Source link