ನನ್ನ ಮದುವೆಗೆ ಯಾರು ಬರಲ್ಲ ಅಂತೆ: ರಮ್ಯಾ

ಬೆಂಗಳೂರು: ನಾನು ಯಾರ ಮದುವೆ, ಸಂಭ್ರಮಗಳಿಗೆ ಹೋಗಿಲ್ಲ. ಅದಕ್ಕೆ ನನ್ನ ಅಮ್ಮ ನಿನ್ನ ಮದುವೆಗೆ ಯಾರು ಬರಲ್ಲ ಎಂದು ಹೇಳುತ್ತಿರುತ್ತಾರೆ. ಅದಕ್ಕೆ ನಾನು ಇದು ಒಳ್ಳೆದು ಎಂದು ಅವರಿಗೆ ಹೇಳುತ್ತೇನೆ ಎಂದು ರಮ್ಯಾ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:  ನಾನು ಇನ್ನೂ ಲಸಿಕೆ ಪಡೆದುಕೊಂಡಿಲ್ಲ: ರಮ್ಯಾ

ಕೊರೊನಾ ಸಮಯದಲ್ಲಿ ಹೆಚ್ಚಿನವರು ಕಷ್ಟದಲ್ಲಿದ್ದರು. ನಾನು ಏನಾದರೂ ಖರೀದಿ ಮಾಡಲು ಹೋದಾಗ ನಾನು ಹೆಚ್ಚಿನ ಹಣವನ್ನು ಕೊಟ್ಟು ಬರುತ್ತಾ ಇದ್ದೆ. ಎಲ್ಲರೂ ಕಷ್ಟದಲ್ಲಿದ್ದಾರೆ. ಹೀಗಾಗಿ ನಾನು ಎಲ್ಲೇ ಹೋದರು ನನ್ನಿಂದ ಆದಷ್ಟು ಹೆಚ್ಚಿನ ಹಣವನ್ನು ಕೊಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಕಾಮಿಡಿಯನ್ ಸೋನು ವೇಣುಗೋಪಾಲ್ ಹಲವು ಪ್ರಶ್ನೆಗಳಿಗೆ ಉತ್ತರಿಸುವಾಗ ಅವರಿಗೆ ಇಷ್ಟವಾಗುವ ಆಹಾರಗಳ ಕುರಿತಾಗಿ ಹೇಳಿದ್ದಾರೆ. ನಾನು ಮಾಂಸಹಾರವನ್ನು ಸೇವಿಸುವುದಿಲ್ಲ. ನನಗೆ ಇಡ್ಲಿ ಅಂದ್ರೆ ನನಗೆ ಇಷ್ಟ ಇಲ್ಲ. ನನಗೆ ಚಿಕ್ಕವಳಿದ್ದಾಗ ನನಗೆ ಆರೋಗ್ಯ ಸರಿ ಇಲ್ಲ ಅಂದ್ರೆ ಇಡ್ಲಿಯನ್ನು ಹೆಚ್ಚಾಗಿ ಕೊಡುತ್ತಾ ಇದ್ದರು. ಹೀಗಾಗಿ ಅಷ್ಟು ಇಷ್ಟವಾಗುವುದಿಲ್ಲ. ಇಡ್ಲಿ ಜೊತೆಗೆ ಚಟ್ನಿ ಇದ್ರೆ ಇಷ್ಟವಾಗುತ್ತದೆ. ಅವರೇಕಾಳು ಸಾಂಬಾರ್, ಐಸ್ ಕ್ರೀಮ್ ಎಂದರೆ ನನೆ ತುಂಬಾ ಇಷ್ಟ. ನನಗೆ ಉತ್ತರ ಕರ್ನಾಟಕದ ಬದನೇಕಾಯಿ ಎಣ್ಣೆಗಾಯಿ ಅಂದ್ರೆ ಪ್ರಾಣ. ಮೊಟ್ಟೆ ಕೇಕ್, ಮಶ್ರೂಮ್ ತಿನ್ನುತ್ತೇನೆ ಎಂದಿದ್ದಾರೆ.

 

View this post on Instagram

 

A post shared by Sonu Venugopal (@sonuvenugopaal)

ನುಗ್ಗೆಕಾಯಿ ಇಷ್ಟ ಇಲ್ಲ. ಹಾಲು ಕುಡಿಯಲ್ಲ. ಸಿನಿಮಾದಲ್ಲಿ ಇದ್ದಾಗ ಡಯೇಟ್, ಯೋಗ ಮಾಡುತ್ತಾ ಇದ್ದೇನು. ಇದೀಗ ಅದೆಲ್ಲ ನಾನು ಹೆಚ್ಚಾಗಿ ಮಾಡಲ್ಲ. ಎಲ್ಲ ಆಹಾರಗಳನ್ನು ಇಷ್ಟ ಪಟ್ಟು ತಿನ್ನುತ್ತೇನೆ. ದಿನಕ್ಕೇ ಮೂರು ಲೀಟರ್ ನೀರು ಕುಡಿಯುತ್ತೇನೆ ಎಂದು ತಮ್ಮ ಆಹಾರದ ಸಿಕ್ರೇಟ್ ಹೇಳಿಕೊಂಡಿದ್ದಾರೆ.

ನೀವು ಯಾವುದನ್ನು ತುಂಬಾ ಯಾವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರಾ? ಸಿನಿಮಾನಾ ಅಥವಾ ಮಾಂಸಾಹಾರನಾ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ ಪ್ರಶ್ನೆಗೆ ರಮ್ಯಾ ನಾನು ಯಾವುದನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ. ಸಿನಿಮಾ ಬೇಕಾದಾಗ ನೋಡುತ್ತೇನೆ. ಮಾಂಸವನ್ನು ಬೇಕು ಎಂದಾಗ ಸೇವಿಸುತ್ತೇನೆ ಎಂದು ಹೇಳುವ ಮೂಲಕವಾಗಿ ಸ್ಮಾರ್ಟ್ ಆಗಿ ಉತ್ತರಿಸಿದ್ದಾರೆ. ಹಾಗೇ ಅಭಿಮಾನಿಗಳು ರಮ್ಯಾ ಅವರು ಎಲ್ಲಿದ್ದಾರೆ ಎಂದು ಕೇಳಿದಾಗಲೂ ಕೂಡಾ ನಾನು ಮನೆಯಲ್ಲಿ ಇದ್ದೇನೆ ಎಂದು ಹೇಳು ಮೂಲಕವಾಗಿ ತಾವೂ ಎಲ್ಲಿ ವಾಸವಾಗಿದ್ದಾರೆ ಎನ್ನುವುದರ ಕುರಿತಾಗಿ ಸುಳಿವು ಕೊಟ್ಟಿಲ್ಲ. ಹುಟ್ಟುಹಬ್ಬದ ಪ್ಲ್ಯಾನ್ ಏನು ಎಂದು ಕೇಳಿದಾಗ. 39ನೇ ವರ್ಷದಲ್ಲಿ ಏನು ಮಾಡಲಿ ಹೇಳಿ ಅಷ್ಟು ದೂರ ಯಾಕೆ ಯೋಚನೆ ಮಾಡುವುದು ಎಂದು ಹೇಳಿದ್ದಾರೆ.

ನಾನು ಅಮೆರಿಕಾದ ವ್ಯಾಕ್ಸಿನ್‍ಗೆ ಕಾಯುತ್ತಾ ಇದ್ದೇನೆ. ನಾನಿನ್ನೂ ವ್ಯಾಕ್ಸಿನ್ ತೆಗೆದುಕೊಂಡಿಲ್ಲ. ನಾನು ಮೊಡೆರ್ನಾಗೆ ಕಾಯುತ್ತಿದ್ದೇನೆ. ಫೈಜರ್ ವ್ಯಾಕ್ಸಿನ್‍ನ್ನು ಮೂರು ಡೋಸ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಸಿಕ್ಕಪಟ್ಟೆ ಗೊಂದಲ ಶುರುವಾಗಿದೆ. ಮೊಡೆರ್ನಾಗೆ ಸದ್ಯ ಅನುಮತಿ ಸಿಕ್ಕಿದೆ ನನಗೆ ಅದು ಖುಷಿಯ ವಿಚಾರವಾಗಿದೆ.

ಹಲವು ವರ್ಷಗಳ ನಂತರ ರಮ್ಯಾ ಇನ್‍ಸ್ಟಾಗ್ರಾಮ್ ಲೈವ್ ಬಂದಿದ್ದು, ಅಭಿಮಾನಿಗಳಿಗೆ ಖುಷಿಯಾಗುವುದರ ಜೊತೆಗೆ ರಮ್ಯಾ ಅವರ ಕುರಿತಾದ ಹಲವು ಸಿಕ್ರೇಟ್‍ಗಳು ಬಹಿರಂಗವಾಗಿದೆ.

The post ನನ್ನ ಮದುವೆಗೆ ಯಾರು ಬರಲ್ಲ ಅಂತೆ: ರಮ್ಯಾ appeared first on Public TV.

Source: publictv.in

Source link