2021ರ ಐಪಿಎಲ್​ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸ್ಟಾರ್ ಆಟಗಾರ ಶುಭ್​​ಮನ್​​ ಗಿಲ್​​ ಸತತವಾಗಿ ವಿಫಲವಾಗುತ್ತಿದ್ದಾರೆ. ಆದರೆ ಗಿಲ್​ ಮತ್ತೆ ಖಂಡಿತ ಫಾರ್ಮ್​ಗೆ ಮರಳುತ್ತಾರೆ ಎಂದು ಕೆಕೆಆರ್​ ಮೆಂಟರ್​ ಡೇವಿಡ್​​​ ಹಸ್ಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೂರ್ನಿಯಲ್ಲಿ ಇದುವರೆಗೂ ಐದು ಪಂದ್ಯಗಳನ್ನು ಆಡಿರುವ ಗಿಲ್​​, ಐದು ಪಂದ್ಯಗಳಿಂದ ಕನಿಷ್ಠ ನೂರು ರನ್​​ ಕೂಡ ಸಿಡಿಸಿಲ್ಲ. ಈ ಹಿನ್ನೆಲೆಯಲ್ಲಿ ಗಿಲ್​ ವಿರುದ್ಧ ಸಾಕಷ್ಟು ವಿಮರ್ಶೆಗಳು ಕೇಳಿ ಬರುತ್ತಿದ್ದು, ಕೆಕೆಆರ್​ ಸೋಲಿಗೆ ಆರಂಭಿಕನಾಗಿ ಗಿಲ್​ ಸತತ ವೈಫಲ್ಯಗಳನ್ನು ಅನುಭವಿಸುತ್ತಿರುವುದೇ ಕಾರಣ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಸ್ಸಿ, ಗಿಲ್​​ ಪ್ರದರ್ಶನದ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಿಲ್​​ ಸ್ಟಾರ್ ಪ್ಲೇಯರ್​ ಆಗಿದ್ದು, ಟೆಕ್ನಿಕಲ್​​ ಆಗಿ ಸಹ ಉತ್ತಮ ಕೌಶಲ್ಯ ಹೊಂದಿದ್ದಾರೆ. ಫಾರ್ಮ್​ ಅನ್ನೋದು ಬರುತ್ತೆ.. ಹೋಗುತ್ತೆ. ಕ್ಲಾಸ್​ ಅನ್ನೋದು ಎಂದಿಗೂ ಶಾಶ್ವತವಾಗಿ ಇರುತ್ತೆ. ಆತ ಒಬ್ಬ ಕ್ಲಾಸ್​ ಆಟಗಾರ. ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಈ ಸೀಜನ್​ ಮುಗಿಯುವ ವೇಳೆಗೆ ಆತ ಅತ್ಯಧಿಕ ಸ್ಕೋರ್​ ಗಳಿಸುತ್ತಾನೆ ಎಂದು ಡೇವಿಡ್​ ಹಸ್ಸಿ ಸವಾಲು ಹಾಕಿದ್ದಾರೆ.

The post ‘ನನ್ನ ಮಾತು ಬರೆದಿಟ್ಟುಕೊಳ್ಳಿ’- ಶುಭ್​​ಮನ್​​ ಗಿಲ್​​ ಕುರಿತು ಸವಾಲೆಸೆದ ಕೆಕೆಆರ್ ಮೆಂಟರ್ appeared first on News First Kannada.

Source: News First Kannada
Read More