
ಕೆಜಿಎಫ್ ಬಾಬು
ಶಾಸಕ ಜಮೀರ್ ಅಹ್ಮದ್ ಅವರಿಗೆ 3 ಕೋಟಿ ರೂ. ಸಾಲ ನೀಡಿದ್ದೆ. ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ನಡೆದಿತ್ತು. ಈ ವೇಳೆ ನನ್ನ ಇಡಿ ವಿಚಾರಣೆಗೆ ಕರೆದಾಗ ಸಾಲದ ಬಗ್ಗೆ ಹೇಳಿದ್ದೆ
ಬೆಂಗಳೂರು: ಇಡಿ ಅಧಿಕಾರಿಗಳು (ED Officials) ದಾಳಿ ಮುಕ್ತಾಯವಾದ ಬಳಿಕ ಉದ್ಯಮಿ ಕೆಜಿಎಫ್ ಬಾಬು (KGF Babu) ಸುದ್ದಿಗೋಷ್ಟಿ ನಡೆಸಿದ್ದಾರೆ. ನನ್ನ ವಿರೋಧಿಗಳು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇಡಿ ಅಧಿಕಾರಿಗಳು ಸರ್ಚಿಂಗ್ ವಾರಂಟ್ ಸಮೇತ ಬಂದಿದ್ದರು. ನನ್ನ ಅಕೌಂಟ್ಸ್ ಎಲ್ಲಾ ಕ್ಲಿಯರ್ ಇದೆ. ಇಡಿ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇನೆ. ಮನೆಯಲ್ಲಿ 8 ಲಕ್ಷ 60 ಸಾವಿರ ರೂಪಾಯಿ ಹಣ ಇತ್ತು. 1 ಕೋಟಿ 70 ಲಕ್ಷ ರೂ.ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ದಾಖಲೆ ಸಮೇತ ದೆಹಲಿಗೆ ಬರುವಂತೆ ಇಡಿಯವರು ಹೇಳಿದ್ದಾರೆ ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಕೆಜಿಎಫ್ ಬಾಬು, ಶಾಸಕ ಜಮೀರ್ ಅಹ್ಮದ್ ಅವರಿಗೆ 3 ಕೋಟಿ ರೂ. ಸಾಲ ನೀಡಿದ್ದೆ. ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ನಡೆದಿತ್ತು. ಈ ವೇಳೆ ನನ್ನ ಇಡಿ ವಿಚಾರಣೆಗೆ ಕರೆದಾಗ ಸಾಲದ ಬಗ್ಗೆ ಹೇಳಿದ್ದೆ. 2013ರಲ್ಲಿ ಜಮೀರ್ಗೆ ಸಾಲ ನೀಡಿದ ಬಗ್ಗೆ ಮಾಹಿತಿ ನೀಡಿದ್ದೆ. ಹಣ ವಾಪಸ್ ನೀಡಲು ಸಮಯ ಕೇಳಿದ್ದಾರೆ ಎಂದು ಹೇಳಿದ್ದೆ. ಈ ಬಗ್ಗೆ ನನಗೆ ಆಗ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಎಂಎಲ್ಸಿ ಚುನಾವಣೆ ಸ್ಪರ್ಧೆಗೂ ಮುನ್ನ ನೋಟಿಸ್ ನೀಡಿದ್ರು. ಈಗ ಇಡಿ ಅಧಿಕಾರಿಗಳು ನನ್ನ ಮನೆ ಮೇಲೆ ರೇಡ್ ಮಾಡಿದ್ದಾರೆ ಎಂದು ಹೇಳಿದರು.